ಪ್ರಯಾಗರಾಜದ ಮಹಾಕುಂಭ ಮೇಳ ಕ್ಷೇತ್ರದಲ್ಲಿ ಹಿಂದೂ ಸಂಘಟನೆಗಳಿಂದ ಕೇಂದ್ರ ಸರಕಾರಕ್ಕೆ ಆಗ್ರಹ.
ಕೇವಲ ಅಫ್ಘಾನಿಸ್ಥಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಾತ್ರವಲ್ಲ, ಸಂಪೂರ್ಣ ಜಗತ್ತಿನಲ್ಲಿನ ಸಂತ್ರಸ್ತ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ದೊರೆಯಬೇಕು.
ಪ್ರಯಾಗರಾಜ: ಇಂದು ಕೇವಲ ಅಫಘಾನಿಸ್ಥಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಅಷ್ಟೇ ಅಲ್ಲದೇ ಶ್ರೀಲಂಕಾ, ಕೆನಡಾ, ಆಸ್ಟ್ರೇಲಿಯಾ, ಮಲೇಶಿಯಾ, ಇಂಡೋನೇಷಿಯಾ, ಅಮೇರಿಕಾ, ಇಂಗ್ಲೆಂಡ್ ಇವುಗಳಂತಹ ಅನೇಕ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅವರ ಜೊತೆಗೆ ತಾರತಮ್ಯ, ಬಲವಂತದ ಮತಾಂತರ, ಸಾಮಾಜಿಕ ಮತ್ತು ಆರ್ಥಿಕ ಕಿರುಕುಳ ನೀಡಲಾಗುತ್ತಿದೆ.
ದೇವಸ್ಥಾನಗಳ ಮೇಲೆ ಉತ್ಸವಗಳ ಮೇಲೆ ದಾಳಿಗಳು ನಡೆಯುತ್ತಿವೆ, ಇಂತಹ ಪರಿಸ್ಥಿತಿಯಲ್ಲಿ ಸಂಪೂರ್ಣ ಜಗತ್ತಿನ ಹಿಂದೂಗಳು ಕೇವಲ ಭಾರತದ ಕಡೆಗೆ ಆಸೆಯಿಂದ ನೋಡುತ್ತಿದ್ದಾರೆ. ಹೇಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಇರುವ ಜ್ಯೂ ಜನರ ಮೇಲೆ ಸಂಕಷ್ಟ ಬಂದರೆ, ಅವರ ರಕ್ಷಣೆಗಾಗಿ ಇಸ್ರೇಲ್ ಸಜ್ಜಾಗಿರುತ್ತದೆಯೋ ಅದೇ ರೀತಿ ಭಾರತ ಕೂಡ ಸಂಪೂರ್ಣ ಜಗತ್ತಿನಲ್ಲಿನ ಹಿಂದೂಗಳ ರಕ್ಷಣೆಗಾಗಿ ಮತ್ತು ಅವರ ಹಿಂದೆ ಧೈರ್ಯವಾಗಿ ನಿಲ್ಲುವ ದೇಶವಾಗಬೇಕು.
ನಾಗರಿಕ ಸುಧಾರಣಾ (ಸಿ ಎ ಎ) ಕಾನೂನು ವಿಸ್ತರಿಸಿ ಸಂಪೂರ್ಣ ಜಗತ್ತಿನಲ್ಲಿ ಸಂತ್ರಸ್ತ ಹಿಂದೂಗಳಿಗೆ ರಕ್ಷಣೆ ನೀಡುವ ಕಾರ್ಯ ಭಾರತ ಸರಕಾರ ಮಾಡಬೇಕು ಹಾಗೂ 2019 ರಲ್ಲಿ ಜಾರಿಗೊಳಿಸಿರುವ ಸಿಎಎ ಕಾನೂನು ಎಲ್ಲಾ ರಾಜ್ಯಗಳಲ್ಲಿ ತಕ್ಷಣದಿಂದ ಜಾರಿಗೊಳಿಸಬೇಕೆಂಬ ಮಹತ್ವದ ಬೇಡಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಪ್ರಯಾಗರಾಜದ ಮಹಾಕಂಭಮೇಳದಲ್ಲಿ ನಡೆದ ಪತ್ರಕರ್ತರ ಪರಿಷತ್ತಿನಲ್ಲಿ ಮಂಡಿಸಿದರು.
ಈ ಸಮಯದಲ್ಲಿ ತಮಿಳುನಾಡಿನ 'ಹಿಂದೂ ಮಕ್ಕಳ ಕಚ್ಚಿ 'ಯ ಸಂಸ್ಥಾಪಕರಾದ ಅರ್ಜುನ ಸಂಪತ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ ರಾಜಹಂಸ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತದ ಧರ್ಮಪ್ರಚಾರಕ ಸಂತರಾದ ಸದ್ಗುರು ನಿಲೇಶ ಸಿಂಗಾಬಾಳ ಇವರು ಉಪಸ್ಥಿತರಿದ್ದರು.
ತಮಿಳುನಾಡಿನಲ್ಲಿ ಹಿಂದೂ ಮಕ್ಕಳ ಕಚ್ಚಿಯ ಸಂಸ್ಥಾಪಕ ಅಧ್ಯಕ್ಷ ಅರ್ಜುನ ಸಂಪತ್ ಇವರು, `ಶ್ರೀಲಂಕಾದಲ್ಲಿ ಹಿಂದೂಗಳ ಮೇಲೆ ಇಲ್ಲಿಯವರೆಗೆ ಕೂಡ ದೌರ್ಜನ್ಯ ನಡೆಯುತ್ತಿದೆ. ಅವರ ಜೊತೆಗೆ ಎರಡನೆಯ ಸ್ಥಾನದ ನಾಗರೀಕರಂತೆ ವ್ಯವಹಾರ ನಡೆಸಲಾಗುತ್ತಿದೆ. ಹಿಂದೂಗಳ ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ ಮತ್ತು ಹಿಂದೂ ಸ್ತ್ರೀಯರನ್ನು ಬಲವಂತವಾಗಿ ಮುಸಲ್ಮಾನರ ಜೊತೆಗೆ ವಿವಾಹ ಮಾಡಿಸಲಾಗುತ್ತದೆ.
ಆದ್ದರಿಂದ ಶ್ರೀಲಂಕಾದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಯುತ್ತಿದೆ. ಇಂತಹ ಸ್ಥಿತಿಯಲ್ಲಿ ಭಾರತ ಸರಕಾರ ಶ್ರೀಲಂಕಾದ ಹಿಂದೂಗಳ ಸುರಕ್ಷತೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಮೇಲೆ ನಡೆಯುವ ದೌರ್ಜನ್ಯದಿಂದಾಗಿ ಭಾರತಕ್ಕೆ ಬಂದಿರುವ ಶ್ರೀಲಂಕಾದ ಹಿಂದೂ ಸ್ಥಳಾಂತರಿತರಿಗೆ ಭಾರತೀಯ ಪೌರತ್ವ ನೀಡುವುದಕ್ಕಾಗಿ ಸಿಎಎ ಕಾನೂನಿನಲ್ಲಿ ಸುಧಾರಣೆ ಮಾಡಬೇಕು.
ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಜಮ್ಮು ಕಾಶ್ಮೀರದಲ್ಲಿ 'ಪನೂನ ಕಾಶ್ಮೀರ'
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ ರಾಜಹಂಸ ಇವರು, ಕಾಶ್ಮೀರಿ ಹಿಂದೂಗಳು ಇಂದಿಗೂ ಸಹ ನಮ್ಮದೇ ದೇಶದಲ್ಲಿ ಸ್ಥಳಾಂತರಿತರೆಂದು ವಾಸಿಸುತ್ತಿದ್ದಾರೆ, ಇದು ಅತ್ಯಂತ ದುರ್ದೈವವಾಗಿದೆ. ಕಲಂ 370 ಮತ್ತು 35 ಎ ತೆರವುಗೊಳಿಸುವುದು ಇದು ಮಹತ್ವದ ನಿರ್ಣಯವಾಗಿತ್ತು, ಆದರೆ ಇಂದಿನವರೆಗೆ ಭಾರತ ಸರಕಾರವು ಸ್ಥಳಾಂತರಿತ ಕಾಶ್ಮೀರಿ ಹಿಂದೂಗಳ ಪುನರ್ಸ್ಥಾಪನೆಗಾಗಿ ಯಾವುದೇ ಯೋಜನೆ ಘೋಷಿಸದೆ ಇರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದರು.
ಸ್ಥಳಾಂತರಿತ ಕಾಶ್ಮೀರಿ ಹಿಂದೂಗಳಿಗಾಗಿ ಜಮ್ಮು ಕಾಶ್ಮೀರದಲ್ಲಿ 'ಪನೂನ ಕಾಶ್ಮೀರ' ಎಂದು ಸ್ವತಂತ್ರ ಕೇಂದ್ರಾಡಳಿತ ಪ್ರದೇಶ ನಿರ್ಮಿಸಬೇಕು. ಕಾಶ್ಮೀರಿ ಹಿಂದೂಗಳ ಸುರಕ್ಷತೆ ಮತ್ತು ಪುನರ್ಸ್ಥಾಪನೆಯ ಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರಕಾರ ತಕ್ಷಣ ವಹಿಸಿಕೊಳ್ಳಬೇಕು` ಎಂದು ಒತ್ತಾಯಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಮತ್ತು ಈಶಾನ್ಯ ಭಾರತದ ಧರ್ಮಪ್ರಚಾರಕ ಸಂತರಾದ ಸದ್ಗುರು ನಿಲೇಶ ಸಿಂಗಬಾಳ ಇವರು, ಹಿಂದೂ ಜನಜಾಗೃತಿ ಸಮಿತಿಯು ಈ ಮಹಾ ಕುಂಭ ಕ್ಷೇತ್ರದಲ್ಲಿ ಸೆಕ್ಟರ್ 6 ರಲ್ಲಿ ಬಾಂಗ್ಲಾದೇಶ ಮತ್ತು ಕಾಶ್ಮೀರದಲ್ಲಿನ ಹಿಂದೂಗಳ ಮೇಲಿನ ಅಮಾನವೀಯ ದೌರ್ಜನ್ಯದ ಬಗ್ಗೆ ಜನಜಾಗೃತಿಗಾಗಿ ಚಿತ್ರ ಪ್ರದರ್ಶನಿ ಆಯೋಜನೆ ಮಾಡಿದೆ. ಸಮಾಜದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಜಾಗರೂಕತೆ ಹೆಚ್ಚಿಸುವುದು ಈ ಪ್ರದರ್ಶನಿಯ ಮುಖ್ಯ ಉದ್ದೇಶವಾಗಿದೆ` ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ