ಮಂಗಳೂರು: ನನ್ನ ಕಿಂಚಿತ್ ಸಾಹಿತ್ಯ ಸೇವೆಯನ್ನು ಗುರುತಿಸಿ ಮನೆಗೇ ಬಂದು ಸಮ್ಮಾನ ಮಾಡಿದ್ದು ಮನ ಮುಟ್ಟಿದೆ , ಇದಕ್ಕಿಂತ ಸಂತೋಷ ಸಮಾಧಾನ ಬೇರೆಯಿಲ್ಲ ಎಂದು ನಿವೃತ್ತ ಶಿಕ್ಷಕಿ ಹಿರಿಯ ಸಾಹಿತಿ ಬಿ. ಸುಲೋಚನಾ ನುಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು - ಮಂಗಳೂರು ತಾಲೂಕು ಘಟಕ , ಹಿರಿಯ ಸಾಹಿತಿಗಳ ಮನೆಗೆ ಭೇಟಿ ಕಾರ್ಯಕ್ರಮದಡಿ ನಗರದ ಉರ್ವ ಪರಿಸರದ ಅವರ ನಿವಾಸದಲ್ಲಿ ಭೇಟಿಯಾಗಿ ಸಲ್ಲಿಸಿದ ಗೌರವ ಸಮ್ಮಾನಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಕವಿ ಕಯ್ಯಾರರ ವಿದ್ಯಾರ್ಥಿಯಾಗಿದ್ದು , ಅವರ ಪ್ರೇರಣೆಯಿಂದ ಬರೆಯಲು ಆರಂಭಿಸಿದ್ದರೂ ನಿವೃತ್ತಿಯ ಬಳಿಕವಷ್ಟೇ ಮೂರು ಕೃತಿಗಳನ್ನು ಹೊರ ತರಲು ಸಾಧ್ಯವಾಗಿದೆ. ಮನೆಯವರ , ಬಂಧುಗಳ ಸಹಕಾರ ಮತ್ತು ಮಂಗಳೂರಿನ ಸಾಹಿತ್ಯಿಕ ವಾತಾವರಣ ಹೆಚ್ಚಿನ ಖುಷಿ ನೀಡಿದೆ ಎಂದರು.
ಘಟಕದ ಪದಾಧಿಕಾರಿ ಹಾಗೂ ಕ ಸಾ ಪ ವಿದೇಶೀ ರಾಯಭಾರಿ ಡಾ. ಮುರಲೀಮೋಹನ್ ಚೂಂತಾರು ಸುಲೋಚನಾ ಅವರನ್ನು ಅಭಿನಂದಿಸಿ ಮಾತನಾಡಿ ಎಲೆ ಮರೆಯ ಸಾಧಕರನ್ನು ಗುರುತಿಸುವುದು , ಹಿರಿಯರನ್ನು ಇಂದಿನ ಯುವ ಜನತೆಗೆ ಪರಿಚಯಿಸಿ ಪ್ರೇರಣೆ ನೀಡುವುದು ನಮ್ಮ ಮನೆ ಮನೆ ಭೇಟಿ ಕಾರ್ಯಕ್ರಮದ ಉದ್ದೇಶ , ಇದರಿಂದ ಸಿಗುವ ತೃಪ್ತಿ ಅವರ್ಣನೀಯ ಎಂದು ವಿವರಿಸಿದರು.
ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಶುಭ ನುಡಿದರು. ಜಿಲ್ಲಾ ಸಮಿತಿಯ ಅರುಣಾ ನಾಗರಾಜ್ , ಸನತ್ ಕುಮಾರ್ ಜೈನ್ ಅಲ್ಲದೆ ಘಟಕದ ರತ್ನಾವತಿ ಜೆ ಬೈಕಾಡಿ , ಡಾ. ಮೀನಾಕ್ಷಿ ರಾಮಚಂದ್ರ , ಗುರು ಪ್ರಸಾದ್ , ಸುಲೋಚನಾ ಅವರ ಪತಿ ಪುರುಷೋತ್ತಮ ರಾವ್ , ಸೊಸೆ ಲತಾ ಎಸ್. ರಾವ್ , ಮೊಮ್ಮಗಳು ಸಂಜನಾ , ಬಂಧುಗಳಾದ ಪ್ರೇಮಾ ಸೀತಾರಾಮ್ , ನಿವೃತ್ತ ಶಿಕ್ಷಕಿ ರತ್ನಾವತಿ , ವಿದ್ಯಾ ಆರ್ ರಾವ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ