ಚಿಮಣಿ ದೀಪದೊಂದಿಗಿನ ಚಿತ್ತಾರದ ನೆನಪುಗಳು

Upayuktha
0


ಚಿ
ಮಣಿ ದೀಪ ಎಂದಾಗ ನೆನಪಾಗುವುದೇ ದಿವ್ಯಲಂಕಾರದಿಂದ ಕೂಡಿದ ನಮ್ಮ ಬಾಲ್ಯದ ನೆನಪುಗಳು ಸಾಲುಗಟ್ಟಿ ನಿಲ್ಲುತ್ತವೆ. ದೀಪಕ್ಕೂ ನಮಗೂ ಎಲ್ಲಿಲ್ಲದ ನಂಟು.  ದೀಪದ ಬೆಳಕು ಜ್ಞಾನದ ಸಂಕೇತ. ಆ ದಿವ್ಯ ತೇಜಸ್ಸು ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಚಲಿಸಲು ಅನುವು ಮಾಡಿ ಕೊಡುತ್ತದೆ. 


ಅಂತಹ ಬೆಳಕನ್ನು ಚಿಮ್ಮುವಂತಹ ಚಿಮಣಿ ದೀಪವು ಹಿಂದಿನ ಕಾಲದಲ್ಲಿ ಕಂಡು ಬರುವಂತಹ ಬೆಳಕಿನ ದೀವಿಗೆಯಾಗಿದೆ. ಕೆಂಪು, ಹಳದಿ, ನೀಲಿ ವರ್ಣಗಳಿಂದ ಮಿಶ್ರಿತವಾದಂತಹ ಈ ದೀಪವನ್ನು ಮನೆಯಲ್ಲಿ ಕತ್ತಲೆಯ ವೇಳೆಯಲ್ಲಿ ಸೂಕ್ಷ್ಮ ಪ್ರಜ್ಞೆಯಿಂದ ಉಪಯೋಗಿಸುತ್ತಿದ್ದರು. ಅದರ ಜೊತೆಗೆ ಮುಂದಿನ ದಿನಗಳಲ್ಲಿ ವಿದ್ಯುತ್ ದೀಪಗಳನ್ನು ಬಳಸುತ್ತಿದ್ದರು. 


ಮಳೆಗಾಲದಲ್ಲಿ ಕರೆಂಟು ಇದ್ದರೆ ಅದೊಂದು ವಿಶೇಷ ಸಂಗತಿಯೇ ಹೌದು. ಜೋರು ಗುಡುಗು- ಸಿಡಿಲು ಮಳೆಯಾಯಿತೆಂದರೆ ಇಲಾಖೆಯವರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಾರೆ. ಅದು ನಮ್ಮ ಒಳ್ಳೆಯದಕ್ಕೆ ಎಂದು ನಾವು ತಿಳಿದು ಬಿಡುತ್ತಿದ್ದೆವು. 


ವರುಣನ ಆರ್ಭಟದ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಳಿಸಿದರೆ, ‌ಚಿಮಣಿ ದೀಪದ ಬುಡ್ಡಿಯ  ಬೆಳಕಿನಲ್ಲಿ ಇರಬೇಕಾಗುತ್ತಿತ್ತು. ಬುಡ್ಡಿಯ ಬೆಳಕಿಗೆ ಅಮ್ಮನ ಮಡಿಲಿನಲ್ಲಿ ಮಲಗಿಕೊಂಡು ಕೇಳಿದ ಕಥೆಗಳು, ಹಾಡುಗಳು ಕಿವಿಗೆ ಮಧುರವಾದ ರಸದೌತಣವನ್ನು ಸವಿದಂತೆ ಭಾಸವಾಗುತ್ತಿತ್ತು. ಅದಲ್ಲದೆ  ಚಿಮಣಿಯ ಬೆಳಕಿನಲ್ಲಿ ಓದಿದಂತಹ ಪಠ್ಯಗಳು, ಹಾಗೂ ಬರೆದಂತಹ ಅಕ್ಷರಗಳನ್ನು ನೆನೆದು ಕೊಂಡರೆ ಮನಸ್ಸಿಗೆ ಮುದ ನೀಡುತ್ತದೆ. 


ಕೆಲವೊಮ್ಮೆ ದೀಪದ ಚಿಮಣಿಯು ಬತ್ತಿ ಹೋಗಿ ಬೆಳಕು ಆರಿ ಹೋಗುತಿತ್ತು. ಇದರಿಂದಾಗಿ ಶಾಲೆಯಲ್ಲಿ ಟೀಚರ್ ಕೊಟ್ಟಂತಹ ಹೋಂ ವರ್ಕ್ ಗಳೆಲ್ಲವೂ ಬರೆಯದೆ ಇದ್ದು ಹಾಗೇ ಉಳಿದು ಬಿಡುತ್ತಿದ್ದವು. ಮಾರನೆಯ ದಿನ ಹೋಂ ವರ್ಕ್ ಗಳನ್ನು ಮಾಡದೆ ಟೀಚರ್ ನ ಕೈಯಿಂದ ತಿಂದಂತಹ ಪೆಟ್ಟುಗಳನ್ನು ನೆನೆದು ಕೊಂಡರೆ ಬೇಸರವಾಗುವುದು. ಆದರೂ ಕೆಲವೊಮ್ಮೆ ಏನೋ ಖುಷಿಯಾದಂತಾಗುವುದು. ಯಾಕೆಂದರೆ ಕತ್ತಲೆಯಲ್ಲಿ ಬೆಳಕಿನ ದೀವಿಗೆಯನ್ನು ಕಂಡಾಗ ಮನದಲ್ಲಿ ಆಹ್ಲಾದಕರವಾದ ಸಂತೋಷವು ಬೀರುತ್ತದೆ. 


ಇತ್ತೀಚಿನ ಆಧುನಿಕ ದಿನಗಳಲ್ಲಿ ಚಿಮಣಿ ದೀಪವನ್ನು ಕಾಣುವುದೇ ಅಪರೂಪವಾಗಿದೆ. ಸಾಮಾನ್ಯವಾಗಿ ಹಳ್ಳಿಮನೆಗಳಲ್ಲಿ ಹುಡುಕಿದರೆ ಒಂದೆರಡು ದೀಪದ ಬುಡ್ಡಿಯನ್ನು ಕಾಣಬಹುದು. ಆದರೆ ನಗರ ಪ್ರದೇಶಗಳಲ್ಲಿ ಇರುವಂತಹ ಜನರು ವಿದ್ಯುತ್ ದೀಪಗಳನ್ನೇ ಉಪಯೋಗಿಸುತ್ತಾರೆ. 


ಅವರು ಕೇವಲ ದೇವರಿಗೆ ತುಪ್ಪದ ಎಣ್ಣೆಯನ್ನು ಬಳಸಿ ದೀಪವನ್ನು ಬೆಳಗಿಸುವರು. ಆದರೆ ಹಳ್ಳಿಜನರ ಮನೆಗಳಲ್ಲಿ ಇಂದಿಗೂ ಕೂಡ ಚಿಮಣಿ ದೀಪದ ನೆನಪುಗಳು ಕಂಡು ಬರುತ್ತದೆ. ಇತ್ತೀಚಿಗೆ ಇನ್ವರ್ಟರ್, ಚಾರ್ಜ್ ಲ್ಯಾಪ್, ಸೋಲಾರ್, ಹೀಗೆ ವಿವಿಧ ರೀತಿಯಾದಂತಹ ವಿದ್ಯುತ್ ಲೈಟ್‌ಗಳು ಈ ನವಯುಗದಲ್ಲಿ ಕಾಲಿಟ್ಟಿದೆ. ಹಾಗಾಗಿ ವಿದ್ಯುತ್ ಲೈಟ್‌ಗಳನ್ನು ಬಳಸುವ ನಾವು ಚಿಮಣಿ ದೀಪದ ನೆನಪುಗಳನ್ನು ಮಾತ್ರ ಇಟ್ಟುಕೊಂಡಿದ್ದೇವೆ.


- ಆಶಾದಾಸಪ್ಪ ನಾಯ್ಕ

ಪ್ರಥಮ ಪತ್ರಿಕೋದ್ಯಮ ವಿಭಾಗ, 

ವಿವೇಕಾನಂದ ಕಾಲೇಜು ಪುತ್ತೂರು

                                   


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top