ಮಂಗಳೂರು: ಜೆಎಸ್‍ಡಬ್ಲ್ಯು ಸಮೂಹದ ವಹಿವಾಟನ್ನು ವಿಶ್ವದಾದ್ಯಂತ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಜೆಎಸ್‍ಡಬ್ಲ್ಯು ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಅವರಿಗೆ 15ನೇ ಅಖಿಲ ಭಾರತ ಮ್ಯಾನೇಜ್‍ಮೆಂಟ್ ಸಂಘದ (ಎಐಎಂಎ) ಪ್ರತಿಷ್ಠಿತ ಎಐಎಂಎ ಮ್ಯಾನೇಜಿಂಗ್ ಇಂಡಿಯಾ 'ದಶಕದ ಉದ್ಯಮಿ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆಪಿಎಂಜಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೆಜ್ಡಿ ನಾಗ್ಪೊರೆವಾಲ್ಲಾ ಅವರು ಭಿನ್ನವತ್ತಲೆ ಓದಿದರು.
ಸಜ್ಜನ್ ಜಿಂದಾಲ್ ನಾಯಕತ್ವದಲ್ಲಿ, ಜೆಎಸ್‍ಡಬ್ಲ್ಯು ಗ್ರೂಪ್ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ಸಮೂಹದ ವರಮಾನವು 24 ಶತಕೋಟಿ ಡಾಲರ್‍ಗೆ ದ್ವಿಗುಣಗೊಂಡಿದೆ. ಇವರ ದೂರದೃಷ್ಟಿಯ ಫಲವಾಗಿ ಜೆಎಸ್‍ಡಬ್ಲ್ಯು ತನ್ನ ವಾರ್ಷಿಕ ಉಕ್ಕು ತಯಾರಿಕಾ ಸಾಮಥ್ರ್ಯವನ್ನು ಸುಮಾರು ಮೂರು ಪಟ್ಟು ಹೆಚ್ಚಿಸಿಕೊಂಡಿದೆ. ನವೀಕರಿಸಬಹುದಾದ ಇಂಧನ ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಸಮೂಹವನ್ನು ಪ್ರಮುಖ ಉದ್ಯಮವನ್ನಾಗಿ ಬೆಳೆಸಿದೆ.
ದೇಶದ ಮೂಲಸೌಲಭ್ಯಗಳ ಆಧುನೀಕರಣ ಉಪಕ್ರಮಗಳೊಂದಿಗೆ ಜೆಎಸ್‍ಡಬ್ಲ್ಯು ಗ್ರೂಪ್ ಜೋಡಿಸುವಲ್ಲಿ ಸಜ್ಜನ್ ಜಿಂದಾಲ್ ಅವರು ನಿರ್ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಈ ಪ್ರಶಸ್ತಿಯು ಗುರುತಿಸುತ್ತದೆ. ಇವರ ನಾಯಕತ್ವದಲ್ಲಿ, ಜೆಎಸ್‍ಡಬ್ಲ್ಯು ಭಾರತದ ಬಂದರು ವಲಯದಲ್ಲಿ ದೇಶದ ಎರಡನೇ ಅತಿದೊಡ್ಡ ಖಾಸಗಿ ಕಂಪನಿಯಾಗಿ ಬೆಳೆದಿದೆ. ಅಂತರರಾಷ್ಟ್ರೀಯ ಪಾಲುದಾರಿಕೆಗಳ ಮೂಲಕ ವಿದ್ಯುತ್ ಚಾಲಿತ ವಾಹನಗಳು (ಇವಿ) ಮತ್ತು ಸೇನೆ ಬಳಕೆಯ ಡ್ರೋನ್‍ಗಳು ಸೇರಿದಂತೆ ಭವಿಷ್ಯ ಕೇಂದ್ರಿತ ವಲಯಗಳಲ್ಲಿಯೂ ಸಹ ತೊಡಗಿಸಿಕೊಂಡಿದೆ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ