ಫೆ. 21; ಅಲೋಶಿಯಸ್ ವಿವಿಯಲ್ಲಿ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ ಕಾರ್ಯಕ್ರಮ

Upayuktha
0


 

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಫೆಬ್ರವರಿ 21 ರಂದು ಬೆಳಿಗ್ಗೆ 11 ಗಂಟೆಗೆ ಮತ್ತು ಮಧ್ಯಾಹ್ನ 2.30ಕ್ಕೆ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜು ಆಡಳಿತ ಮಂಡಳಿ  ತಿಳಿಸಿದೆ. 


ಈ ಯೋಜನೆಯ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಲು ಕರ್ನಾಟಕದ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ನೋಡಲ್ ಅಧಿಕಾರಿ ವೆಂಕಟರಮಣ ಕೆ. ಅವರು ತಮ್ಮ ತಂಡದೊಂದಿಗೆ ಉಪಸ್ಥಿತರಿರುತ್ತಾರೆ. ಇದಲ್ಲದೆ, ಈ ಯೋಜನೆಯ ಅಡಿಯಲ್ಲಿಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುತ್ತಿರುವ ಕೆಲವು ಕಂಪನಿಗಳ ಪ್ರತಿನಿಧಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಮತ್ತು ಇರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮಕ್ಕೆ ಆಸಕ್ತ ಯಾವುದೇ ವಿದ್ಯಾರ್ಥಿಗಳು ಅಥವಾ ನಿರುದ್ಯೋಗಿ ಯುವಕರು ಪಾಲ್ಗೊಳ್ಳಬಹುದು. 


ಕಳೆದ ವರ್ಷ ಬಜೆಟ್ನಲ್ಲಿ ಘೋಷಿಸಲಾದ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯು ಭಾರತದ ಟಾಪ್ ಕಂಪನಿಗಳಲ್ಲಿ ಯುವಕರಿಗೆ ಒಂದು ವರ್ಷದ ಪೇಯ್ಡ್ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುತ್ತದೆ. 


ಭಾರತದಾದ್ಯಂತ 350ಕ್ಕೂ ಹೆಚ್ಚು ಕಂಪನಿಗಳು 25 ವಲಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅವಕಾಶಗಳನ್ನು ನೀಡುತ್ತಿವೆ. 21 ರಿಂದ 25 ವರ್ಷದೊಳಗಿನ ಪೂರ್ಣ ಸಮಯದ ಶಿಕ್ಷಣದಲ್ಲಿ ಇರದ ಅಥವಾ ಸರ್ಕಾರದ ಯಾವುದೇ ಕೌಶಲ್ಯ ಕಾರ್ಯಕ್ರಮಗಳ ಫಲಾನುಭವ ಹೊಂದಿರದ ನಿರುದ್ಯೋಗಿ ಯುವಕರು ಇಂಟರ್ನ್‌ಶಿಪ್ ಳಿಗೆ ಅರ್ಜಿ ಸಲ್ಲಿಸಬಹುದು. 


ಇಂಟರ್ನ್‌ಶಿಪ್  ಅವಕಾಶಗಳಿಗೆ ಹತ್ತನೇ ತರಗತಿ ಪಾಸಾದವರಿಂದ ಹಿಡಿದು, ಐಟಿಐ, ಡಿಪ್ಲೋಮಾ, ಪದವಿ ಪೂರ್ಣಗೊಳಿಸಿದವರು ಅರ್ಹರಿರುತ್ತಾರೆ.  ಅರ್ಜಿ ಸಲ್ಲಿಸಲು ಮಾರ್ಚ್ 12 ಕೊನೆಯ ದಿನವಾಗಿರುತ್ತದೆ. 


ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ https://pminternship.mca.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.




إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top