ಮಣಿಪಾಲ: ಮಂಗಳ ಕಲಾ ಸಾಹಿತ್ಯ ವೇದಿಕೆ (ರಿ.) ಪರ್ಕಳ ಇದರ 21ನೇ ವರ್ಷದ ಸಂಭ್ರಮ "ಕಲಾಸಂಗಮ' ಕಾರ್ಯಕ್ರಮವು ಫೆ. 23ರ ಭಾನುವಾರ ಪರ್ಕಳ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಲಿದ್ದು, ಮಧ್ಯಾಹ್ನ 2.00 ಗಂಟೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಸ್ವಾಗತ್ ಹೋಟೆಲ್‌ನ ಮಾಲಕ ಮೋಹನದಾಸ ನಾಯಕ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ.
2.15ಕ್ಕೆ ಆರ್ಯಭಟ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ "ಗಜಗೌರಿ ವ್ರತ' ಹರಿಕಥಾ ಕಾಲಕ್ಷೇಪ, ಸಂಜೆ 4.00 ಗಂಟೆಗೆ ಸಾನ್ವಿ ರವೀಂದ್ರ ನಾಯಕ್ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ನಡೆಯಲಿದೆ. ಸಂಜೆ 4.45ಕ್ಕೆ ಸಭಾ ಕಾರ್ಯಕ್ರಮವು ವೇದಿಕೆಯ ಗೌರವ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಿರಿಯ ಸಾಹಿತಿ, ಕವಿ, ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ವಸಂತ ಕುಮಾರ್ ಪೆರ್ಲ ಹಾಗೂ ತುಳು ನಾಟಕ ಹಾಗೂ ಚಲನಚಿತ್ರ ನಟ, ನವರಸ ರಾಜ ಭೋಜರಾಜ ವಾಮಂಜೂರು, ಆಧುನಿಕ ಭಗೀರಥ ಪದ್ಮಶ್ರೀ ಪುರಸ್ಕೃತರಾದ ಅಮೈ ಮಾಲಿಂಗ ನಾಯ್ಕ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಚಲನಚಿತ್ರ ನಟ ಯೋಗೀಶ್ ಶೆಟ್ಟಿ ಧರ್ಮೆಮಾರ್ ಆಗಮಿಸಲಿದ್ದಾರೆ.
ವೇದಿಕೆಯ ಮೇಲೆ ಕಲಾ ಪೋಷಕರಾದ ಭುವನ ಪ್ರಸಾದ್ ಹೆಗ್ಡೆ ಮಣಿಪಾಲ, ವೇದಿಕೆಯ ಅಧ್ಯಕ್ಷ ಸಂದೀಪ್ ನಾಯ್ಕ ಕಬ್ಯಾಡಿ, ಕವಿ, ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನೆಂಪು ನರಸಿಂಹ ಭಟ್, ಸಂಚಾಲಕ ಮಂಜುನಾಥ ಉಪಾಧ್ಯ, ಬೂಧರ ಸಂಕೀರ್ಣದ ಮಾಲಕ ಬೂದ ಶೆಟ್ಟಿಗಾರ್, ವೇದಿಕೆಯ ಪೋಷಕ ಕೆ. ಪ್ರಕಾಶ್ ಶೆಣೈ, ಶ್ರೀಧರ ಭಟ್ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಕೇಶವ ಕೋಟ್ಯಾನ್, ಆರ್. ಮಹೋಹರ್ ಪರ್ಕಳ, ಮಹೇಶ್ ಮರ್ಣೆ, ರಾಘವೇಂದ್ರ ಪ್ರಭು ಕರ್ವಾಲು ಅವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ 6.15ಕ್ಕೆ ಶ್ರೀ ಮಹಾಲಿಂಗೇಶ್ವರ ನಾಟ್ಯ ತಂಡ ಮರ್ಣೆ ಅವರಿಂದ ದೀಕ್ಷಾ ಗುಂಡುಪಾದೆ ನಿರ್ದೇಶನದಲ್ಲಿ "ರಾಮಾಯಣ' ಹಾಗೂ "ಕಲ್ಕಿಯುಗ' ನೃತ್ಯರೂಪಕ, 6.45ಕ್ಕೆ ಮಾ| ಸಂಪ್ರೀತ್ ನಾಯಕ್ ಮತ್ತು ಮಾ| ಸೃಜನ್ ನಾಯಕ್ ಇವರಿಂದ ಕೊಳಲು ವಾದನ, ಸಂಜೆ ಗಂಟೆ 7.00ಕ್ಕೆ ಗಂಗಾಧರ ಆಚಾರ್ಯ ಅರ್ಪಿಸುವ ಸಿಂಚನಾ ಮ್ಯೂಸಿಕಲ್ಸ್ ಬಳಗದವರಿಂದ ಸಂಗೀತ ರಸಮಂಜರಿ ಹಾಗೂ ಝೀ ಕನ್ನಡ ಹಾಗೂ ಇತರ ಟಿ.ವಿ. ಚಾನೆಲ್‌ಗಳಲ್ಲಿ ಪ್ರಸಿದ್ಧಿ ಪಡೆದು ಜೂನಿಯರ್ ವಿಷ್ಣುವರ್ಧನ್ (ಜಯಶ್ರೀರಾಜ್ ಬೆಂಗಳೂರು), ಜೂನಿಯರ್ ಅಂಬರೀಷ್ (ಆರಾಧ್ಯ ಭದ್ರಾವತಿ) ಹಾಗೂ ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ದೀಕ್ಷಿತ್ ಗೌಡ ಕಡಬ, ದಕ್ಷಿಣ ಕನ್ನಡ ಅವರಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ