ನಾಳೆ ನಾಟ್ಯ ವಿಶಾರದೆ ಕು|| ದೀಪರಾಣಿ -ಭರತನಾಟ್ಯ ರಂಗಪ್ರವೇಶ

Upayuktha
0


ಬೆಂಗಳೂರು : ನೃತ್ಯ ದಿಶಾ ಟ್ರಸ್ಟ್ ರೂವಾರಿ 'ಕಲಾಭೂಷಿಣಿ ಗುರು ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ದೀಪರಾಣಿ "ಭರತನಾಟ್ಯ ರಂಗ ಪ್ರವೇಶ"ಕ್ಕೆ ಆಣೆಯಾಗಿದ್ದಾರೆ. ಇದೇ ಫೆಬ್ರವರಿ 21, ಶುಕ್ರವಾರ ಸಂಜೆ 5:00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. 


ಭರವಸೆಯ ಪ್ರತಿಭೆ : ನಾಟ್ಯ ವಿಶಾರದೆ ಕು|| ದೀಪರಾಣಿ ಕಳೆದ 15 ವರ್ಷಗಳಿಂದ ನೃತ್ಯ ಅಭ್ಯಸಿಸುತ್ತಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಜೂನಿಯರ್, ಸೀನಿಯರ್, ವಿದ್ವತ್ ಹಾಗೂ ಗಂಧರ್ವ ಪರೀಕ್ಷೆ ವಿಶಾರದ ಪೂರ್ಣಗಳನ್ನು ಉತ್ತಮ ದರ್ಜೆಯಲ್ಲಿ ಮುಗಿಸಿದ್ದಾರೆ. ಪ್ರಸ್ತುತ ವಿದ್ವತ್ ಅಂತ್ಯ ತಯಾರಿಯಲ್ಲಿರುವ ದೀಪ ಭರವಸೆಯ ನೃತ್ಯ ಕಲಾವಿದೆ.


ನೃತ್ಯ ದಿಶಾ ಸಂಸ್ಥೆಯ ಅಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ದೀಪ ಸಂಸ್ಥೆಯ ನೃತ್ಯ ಸಂಭ್ರಮ ಒಳಗೊಂಡು ಹಂಪಿ ಉತ್ಸವ, ದಸರಾ ಉತ್ಸವ, ದುಬೈನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ, G20 ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.


ಇವರ ರಂಗಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಡಾ||.ಎಂ. ಸೂರ್ಯಪ್ರಸಾದ್, ಕಲಾಮಂಡಲಂ ಗುರು ಉಷಾ ದಾತಾರ್ ಹಾಗೂ ಮಂಜುನಾಥ್ ಡಿ.ಕೆ. ಆಗಮಿಸಲಿದ್ದಾರೆ. 


ದೀಪ ರಂಗ ಪ್ರವೇಶ ಪ್ರಸ್ತುತಿಗೆ ಗುರು ಡಾ|| ದರ್ಶನಿ ಮಂಜುನಾಥ್ (ನಟ್ಟುವಾಂಗ), ವಿದುಷಿ ಭಾರತಿ ವೇಣುಗೋಪಾಲ್ (ಗಾಯನ ), ವಿದ್ವಾನ್ ಎಸ್.ವಿ. ಗಿರಿಧರ್ (ಮೃದಂಗ ), ವಿದ್ವಾನ್ ಎಚ್.ಎಸ್. ವೇಣುಗೋಪಾಲ್ (ಕೊಳಲು), ವಿದ್ವಾನ್ ಕಾರ್ತಿಕ ವೈಧಾತ್ರಿ (ರಿದಂ ಪ್ಯಾಡ್)  ಹಾಗೂ ಮಾಸ್ಟರ್ ಅಚ್ಯುತ್ ಜಗದೀಶ್ (ವೀಣೆ) ಸಹಕರಿಸಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಕಲಾ ಪ್ರೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯುವ ಕಲಾವಿದೆಯನ್ನು ಆಶೀರ್ವದಿಸಬೇಕೆಂದು ಸಂಸ್ಥೆಯ ಮುಖ್ಯಸ್ಥರಾದ ಮಂಜುನಾಥ್ ರವರು ವಿನಂತಿಸಿದ್ದಾರೆ .


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top