ಪರ್ಕಳ: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ 21ನೇ ವರ್ಷದ ಸಂಭ್ರಮ ಕಲಾಸಂಗಮ ಕಾರ್ಯಕ್ರಮವು ಫೆ.23 ರ ಭಾನುವಾರದಂದು ಶ್ರೀ ವಿಘ್ನೇಶ್ವರ ಸಭಾಭವನ ಪರ್ಕಳ ಇಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಸ್ವಾಗತ ಹೋಟೆಲ್ ಮಾಲಕ ಮೋಹನ್ ದಾಸ್ ನಾಯಕ್ ಪರ್ಕಳ ಇವರು ಉದ್ಘಾಟಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ತುಳು ಚಲನಚಿತ್ರ ಹಾಗೂ ನಾಟಕ ಕಲಾವಿದ ಭೋಜರಾಜ ವಾಮಂಜೂರು, ಆಧುನಿಕ ಭಗೀರಥ ಶ್ರೀ ಅಮೈ ಮಾಲಿಂಗ ನಾಯ್ಕ್, ಚಲನಚಿತ್ರ ನಟ ಯೋಗೇಶ್ ಶೆಟ್ಟಿ ಧರ್ಮೆಮಾರ್, ಕವಿ ಸಾಹಿತಿ ಡಾ. ವಸಂತ್ ಕುಮಾರ್ ಪೆರ್ಲ, ಬೂದ ಶೆಟ್ಟಿಗಾರ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ರಾಘವೇಂದ್ರ ಪ್ರಭು ಕರ್ವಾಲು, ಎಂ ಮನೋಹರ್, ಮಹೇಶ್ ಮರ್ಣೆ, ಕೇಶವ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೋನ್ಸೆ ಪುಷ್ಕಲ್ ಕುಮಾರ್ ಇವರಿಂದ ಹರಿಕಥಾ ಕಾಲಕ್ಷೇಪ, ಮಾಲಿಂಗೇಶ್ವರ ನಾಟ್ಯ ತಾಂಡ ಇವರಿಂದ ದೀಕ್ಷಾ ಗುಂಡುಪಾದೆ ಇವರ ನಿರ್ದೇಶನದಲ್ಲಿ ನೃತ್ಯರೂಪಕ, ಸಿಂಚನ ಮ್ಯೂಸಿಕಲ್ಸ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ರವೀಂದ್ರ ನಾಯಕ್ ಸಣ್ಣಕಿಬೆಟ್ಟು ಸ್ವಾಗತಿಸಿದರು. ಸಾನ್ವಿಯವರು ಪ್ರಾರ್ಥಿಸಿದರು. ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ