ಕರ್ಣ ಭೇದನ- ಗಮಕವಾಚನ- ಅರ್ಥಗಾರಿಕೆ: ನಾಳೆ ಸಂಜೆ ಹರಿಹರಪುರ ಮಠದಲ್ಲಿ

Upayuktha
0


ಸಾಮ್ರಾಜ್ಯದ ಅಧಿಪತಿಯಾಗಬಹುದಾಗಿದ್ದ ಮತ್ತು ಕೌರವ ಪಕ್ಷದಲ್ಲಿ ಬಂಡೆಯಂತಿದ್ದ ಕರ್ಣನಿಗೆ ಅಧಿಕಾರ ತಪ್ಪಿಸಿದ್ಯಾರು!!?


ಕೌರವನ ಪಕ್ಷದಲ್ಲಿ ಗಟ್ಟಿ ಬಂಡೆ ಯಾಗಿ ನಿಂತವನು ಅಂಗ ದೇಶದ ಕರ್ಣ. 'ಕುರುಕ್ಷೇತ್ರ ಮಹಾ ಸಂಗ್ರಾಮದಲ್ಲಿ ಕೌರವ ಪಕ್ಷವನ್ನು ಗೆಲ್ಲಿಸಬಲ್ಲವನು ಎಂದರೆ ಅದು ಕರ್ಣ' ಎಂಬುದು ಪಕ್ಷದ ಹೈ ಕಮಾಂಡ್ ಆಗಿದ್ದ ಕೌರವನ ಭರವಸೆ ಕೂಡ ಆಗಿತ್ತು!!.


ದುರ್ಯೋಧನನ ಪಕ್ಷದಲ್ಲಿ 'ದುಷ್ಟಚತುಷ್ಟಯರು' ಎಂದೇ ಕರೆಸಿಕೊಳ್ಳುವ ನಾಲ್ವರಲ್ಲಿ ಕರ್ಣನೂ ಒಬ್ಬ. ಹುಟ್ಟುವಾಗಲೇ ಕನಕಮಯ ರಕ್ಷಾ ಕವಚವನ್ನೂ, ಕಿವಿಯಲ್ಲಿ ಕನಕ ಕುಂಡಲಗಳನ್ನು ಧರಿಸಿದ್ದವನು ಕರ್ಣ.


ದುರ್ಯೋಧನನ ಪಕ್ಷದಲ್ಲಿದ್ದು, ಪರಮ ಮಿತ್ರನಾದ ದುರ್ಯೋಧನನ್ನು ಓಲೈಕೆ ಮಾಡುವಾಗ, ಕರ್ಣ ಕೆಲವು ಬಾರಿ ಅಧರ್ಮದ ಹಾದಿ ಹಿಡಿದಿದ್ದರೂ, ತೀರ ಖಳನಾಯಕನಲ್ಲ ಎಂಬ ಕಾರಣಕ್ಕೆ, ಕರ್ಣನ ಮೇಲೆ ಆಪಾದನೆಗಳಿದ್ದರೂ... ಧರ್ಮ ಪಕ್ಷವಾದ ಪಾಂಡವ ಪಕ್ಷದ ಸಾರಥಿ ಕೃಷ್ಣ, ಕರ್ಣನನ್ನು ಧರ್ಮ ಪಕ್ಷಕ್ಕೆ ಎಳೆತರುವ ಆಪರೇಷನ್ ಪಕ್ಷಾಂತರಕ್ಕೆ ಚತುರೋಪಾಯಗಳಲ್ಲಿ ಒಂದನ್ನು ಬಳಸಲು ಮುಂದಾದ!!? ಜಾತಿ, ಧರ್ಮ, ಹುದ್ದೆ, ಅಧಿಕಾರ, ಸಂಪತ್ತುಗಳ ದಾಳ ಉರುಳಿಸುತ್ತ, ರಹಸ್ಯವಾಗಿದ್ದ ಕರ್ಣನ ಜನ್ಮ ಕತೆಯ ಸೂತ್ರವನ್ನು ಬಿಚ್ಚಿ, ಪಕ್ಷಾಂತರ ಮಾಡಿಸುವ ಪ್ರಯತ್ನದ ಪ್ರಸಂಗ ಮಹಾಭಾರತದ ಯುದ್ಧ ಪೂರ್ವದಲ್ಲಿ ಬರುತ್ತದೆ. ಆದರೆ, ಅದು ಪಕ್ಷಾಂತರ ಮಾಡಿಸುವ ಪ್ರಯತ್ನ ಅಲ್ಲ!!!


ಮತ್ತೆ!!?


ಕೃಷ್ಣನು ಕರ್ಣನನ್ನು 'ಆಪರೇಷನ್ ಪಕ್ಷಾಂತರ' ಪ್ರಯತ್ನದ ಆಟಕ್ಕೆ ಕರೆದಿದ್ದೇಕೆ? ಕೌರವ ಪಕ್ಷದಲ್ಲಿ, ಕೌರವನಿಗೂ, ಕೌರವನ ಪಕ್ಷಕ್ಕೂ ಪರಮ ನಿಷ್ಟನಾಗಿದ್ದ ಕರ್ಣ, ಪಕ್ಷಾಂತರ ಮಾಡಲು ಒಪ್ಪಿಕೊಂಡನಾ? ಪಕ್ಷಾಂತರಕ್ಕೆ ಆಹ್ವಾನವಾಗಿರಿಸಿದ್ದ ದೊಡ್ಡ ಅಧಿಕಾರದ ಹುದ್ದೆಗೆ ಕರ್ಣ ಒಪ್ಪಿದನಾ?  "ರಾಜಕೀಯದಲ್ಲಿ ಯಾರೂ ಶಾಶ್ವತ  ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರೂ ಅಲ್ಲ" ಎಂಬಂತೆ, ಮಿತ್ರ ಕೌರವನನ್ನು ಬಿಟ್ಟು ಪಾಂಡವ ಪಕ್ಷಕ್ಕೆ ಬರಲು ಸಿದ್ದನಾಗಿದ್ದನಾ ಬಂಡೆಯಂತಹ ಅಚಲ ಮನಸ್ಸಿನ ಕರ್ಣ? ಅಥವಾ ಕೌರವ ಪಕ್ಷದಲ್ಲೇ ಅಚಲವಾಗಿ ಉಳಿಯುವ ನಿರ್ಧಾರ ಮಾಡಿದನಾ? ಕೌರವ ಪಕ್ಷದಲ್ಲೇ ಉಳಿದು ಪಾಂಡವ ಪಕ್ಷದವರೊಂದಿಗೆ ಕೆಲವು ಮಹತ್ತರ ನಿರ್ಣಯಗಳಿಗೆ ಒಳ ಒಪ್ಪಂದ ಮಾಡಿಕೊಂಡನಾ? ಏನದು ಒಳ ಒಪ್ಪಂದಗಳು?  ಒಳ ಒಪ್ಪಂದಗಳಿಂದ ಆದ ಆದ ಲಾಭಗಳೇನು? ನಷ್ಟಗಳೇನು?  ಯಾರಿಗೆ!!?  ಇಷ್ಟಕ್ಕೂ ಆಗಿದ್ದು 'ಆಪರೇಷನ್ ಪಕ್ಷಾಂತರವಾ?' ಅಥವಾ 'ಆಪರೇಷನ್ ಒಳ ಒಪ್ಪಂದವಾ?


**


ಕವಿ ಕುಮಾರವ್ಯಾಸನು ಕರ್ಣಾಟ ಭಾರತ ಕಥಾಮಂಜರಿ ಮಹಾಕಾವ್ಯದಲ್ಲಿ ಸೃಷ್ಟಿಸಿದ, ಮಹಾಭಾರತದ ಒಂದು ಇಂಟರೆಸ್ಟಿಂಗ್, ಕುತೂಹಲಕರ ಮತ್ತು ರಸಮಯ ಸನ್ನಿವೇಶವನ್ನು, ಮರುಸೃಷ್ಟಿ ಮಾಡಿ ಪ್ರದರ್ಶಿಸುವ ಕಾವ್ಯವಾಚನ - ಅರ್ಥಗಾರಿಕೆ ಕಾರ್ಯಕ್ರಮ ನಾಳೆ, ದಿನಾಂಕ 22.02.2025 ರಂದು ಶ್ರೀ ಮಠ ಹರಿಹರಪುರದಲ್ಲಿ ನೆಡೆಯಲಿದೆ. ಸಮಯ ಸಂಜೆ 4.30 ರಿಂದ 7.30 ರವರೆಗೆ ನಡೆಯಲಿದೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top