ಹಲವು ಸವಾಲುಗಳನ್ನು ಎದುರಿಸಲು ಏಐ ನಂತಹ ತಂತ್ರಜ್ಞಾನದ ಬಳಕೆ ಅತ್ಯಗತ್ಯ : ಡಾ. ಇನ್.ಹೋ. ರಾ ಅಭಿಪ್ರಾಯ.
ಕಾರ್ಕಳ: 'ನಾವೀನ್ಯತೆಯನ್ನು ಕಾಣುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್.ಡಿ.ಜಿ) ಸಾಧಿಸುವಲ್ಲಿ ಅಂತರರಾಷ್ಟ್ರೀಯ ಸಹಯೋಗದವು ಪ್ರಮುಖ್ಯ ಪಾತ್ರವಹಿಸುತ್ತದೆ. ಇಂದಿನ ದಿನಗಳಲ್ಲಿ ಸಂಶೋಧನಾ ಪ್ರಕ್ರಿಯೆಯ ಚಿಂತನೆ ಬೆಳೆಸಿಕೊಳ್ಳುವುದು ಅತ್ಯಗತ್ಯ' ಎಂದು ದಕ್ಷಿಣ ಕೊರಿಯಾದ ಕುನ್ಸಾನ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮಾಹಿತಿ ಮತ್ತು ದೂರಸಂಪರ್ಕ ಎಂಜಿನಿಯರಿಂಗ್ ಪ್ರಾಧ್ಯಾಪಕ ಡಾ. ಇನ್.ಹೋ. ರಾ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಆಯೋಜಿಸಿದ ಎರಡು ದಿನಗಳ ಮಲ್ಟಿಕಾನ್ಫರೆನ್ಸ್ 'ಐಸಿಇಟಿ 2025' ನ್ನು ಉದ್ಘಾಟಿಸಿ ಮಾತನಾಡಿದರು. ಜಗತ್ತು ಬದಲಾಗುತ್ತಿದೆ, ಮತ್ತು ಎಐ ಮಾದರಿಗಳು ವಿಕಸನಗೊಳ್ಳುತ್ತಿವೆ. ಸಮಾಜದ ವಿವಿಧ ಸವಾಲುಗಳನ್ನು ಎದುರಿಸಲು ಹೊಸ ತಂತ್ರಜ್ಞಾನಗಳ ಬೆಳವಣಿಗೆ ಅಗತ್ಯ. ಇಂತಹ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಗಳು ತಂತ್ರಜ್ಞಾನಗಳ ವಿಕಸನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ' ಎಂದರು.
ಕಾರ್ಯಕ್ರಮದಲ್ಲಿ ಐಇಇಇ ಮದ್ರಾಸ್ ವಿಭಾಗದ ಮಾಜಿ ಅಧ್ಯಕ್ಷ ಡಾ. ಕುಮಾರಪ್ಪನ್; ಮಲೇಷ್ಯಾ ಯೂನಿವರ್ಸಿಟಿ ಟೆಕ್ನಾಲಜಿಯ ಫಿರ್ದೌಸ್ ಅಬ್ದುಲ್ ಮೊಹಮ್ಮದ್; ಜಪಾನ್ ನ ರಿಟ್ಸುಮೈಕನ್ ವಿಶ್ವವಿದ್ಯಾಲಯದ ಡಾ. ತಕಾಮೊಟೊ ಇಥೋ; ಅಮೆರಿಕದ ವಿಫ್ಲಿ ಸಂಸ್ಥೆಯ ಮಾಜಿ ಪಾಲುದಾರ ಮುರಳಿ ಅಯ್ಯರ್; ಮತ್ತು ಮಲೇಷ್ಯಾ ಪರ್ಲಿಸ್ ವಿಶ್ವವಿದ್ಯಾಲಯದ ಡಾ. ಮೊಹಮ್ಮದ್ ನೂರ್ ಖೈರುಲ್ ಹಫಿಜಿ ಬಿನ್ ರೋಹಾನಿ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದು, ಪ್ರತಿಯೊಬ್ಬರೂ ಅಮೂಲ್ಯವಾದ ಅನುಭವಗಳನ್ನು ಹಂಚಿಕೊಂಡರು ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಅಂತರಶಿಸ್ತೀಯ ಸಂಶೋಧನೆಯ ಮಹತ್ವವನ್ನು ತಿಳಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಮಾತನಾಡಿ ಸಂಘಟನಾ ಸಮಿತಿಯ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪೋಷಿಸುವ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು.
ಈ ಕಾರ್ಯಕ್ರಮವು ತಾಂತ್ರಿಕ ಅಧಿವೇಶನಗಳು, ಮುಖ್ಯ ಭಾಷಣಗಳು ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಒಳಗೊಂಡಿದ್ದು, ಇದು ಅದ್ಭುತ ಸಂಶೋಧನೆಯನ್ನು ಹಂಚಿಕೊಳ್ಳಲು ಮತ್ತು ಭವಿಷ್ಯದ ಸಹಯೋಗಗಳನ್ನು ಅನ್ವೇಷಿಸಲು ವೇದಿಕೆಯನ್ನು ಒದಗಿಸುತ್ತದೆ. ಅಂತರ್‌ವಿಭಾಗೀಯ ಬೋಧನೆ, ಸಂಶೋಧನೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಎಲ್ಲಾ ಕ್ಷೇತ್ರಗಳನ್ನೂ ಬೆಳೆಸುವುದು ನಮ್ಮ ಗುರಿಯಾಗಬೇಕು’ ಎಂದರು.
ಈ ಸಂದರ್ಭದಲ್ಲಿ ಕಾನ್ಫರೆನ್ಸ್ ಪ್ರೊಸೀಡಿಂಗ್ಸ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಸ್ವಾಗತಿಸಿದರು. ಸಮ್ಮೇಳನದ ಮುಖ್ಯ ಸಂಚಾಲಕ ಮತ್ತು ಡೀನ್ (ಆರ್&ಡಿ) ಡಾ.ಸುದೇಶ್ ಬೇಕಲ್ ಅವರು ಸಮ್ಮೇಳನದ ಬಗ್ಗೆ ಸಮಗ್ರ ನೋಟವನ್ನು ನೀಡಿದರು.
ಸಮ್ಮೇಳನದ ಕಾರ್ಯದರ್ಶಿ ಮತ್ತು ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ರಾಧಾಕೃಷ್ಣ ವಂದಿಸಿದರು. ಮಾನವಿಕ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ವೇತಾ ಭರತ್ ಮತ್ತು ಸೌಮ್ಯಶ್ರೀ ಆರ್ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.
'ಐ.ಸಿ.ಇ.ಟಿ.ಇ-2025' ಮಲ್ಟಿ ಕಾನ್ಫರೆನ್ಸ್ ನ ಅಡಿಯಲ್ಲಿ ಬಯೋಟೆಕ್ನಾಲಜಿ ವಿಭಾಗದ ವತಿಯಿಂದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ನರ್ಚರಿಂಗ್ ಇನ್ನೋವೇಟಿವ್ ಟೆಕ್ನಾಲಾಜಿಕಲ್ ಟ್ರೆಂಡ್ಸ್ ಇನ್ ಇಂಜಿನಿಯರಿಂಗ್- ಬಯೋಸೈನ್ಸ್' ಎಂಬ ಕಾನ್ಫರೆನ್ಸನ್ನು ಹಮ್ಮಿಕೊಳ್ಳಲಾಗಿತ್ತು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಸಿವಿಲ್ ಇಂಜಿನಿಯರಿಂಗ್ ಟ್ರೆಂಡ್ಸ್ ಆ್ಯಂಡ್ ಚ್ಯಾಲೆಂಜಸ್ ಫಾರ್ ಸಸ್ಟೈನೆಬಿಲಿಟಿ' ಎಂಬ ಕಾನ್ಫರೆನ್ಸ್, ಕಂಪ್ಯೂಟರ್ ಸೈನ್ಸ್, ಇನ್ಫೋರ್ಮೇಶನ್ ಸೈನ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಕಂಪ್ಯೂಟರ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಎಂ.ಸಿ.ಎ ವಿಭಾಗಗಳ ಜಂಟಿ ಆಶ್ರಯದಲ್ಲಿ 'ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ & ಡೇಟಾ ಇಂಜಿನಿಯರಿಂಗ್'.
ಎಲೆಕ್ಟ್ರಿಕಲ್ ವಿಭಾಗದ ವತಿಯಿಂದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಎಡ್ವಾನ್ಸಸ್ ಇನ್ ರಿನೀವೇಬಲ್ ಎನರ್ಜಿ & ಇಲೆಕ್ಟ್ರಿಕ್ ವೆಹಿಕಲ್. ಇಲೆಕ್ಟ್ರಾನಿಕ್ಸ್ ವಿಭಾಗದ 'ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ವಿ.ಎಲ್.ಎಸ್.ಐ, ಸಿಗ್ನಲ್ ಪ್ರೊಸೆಸಿಂಗ್, ಪವರ್ ಎಲೆಕ್ಟ್ರಾನಿಕ್ಸ್, ಐಒಟಿ, ಕಮ್ಯೂನಿಕೇಶನ್ & ಎಂಬೆಡೆಡ್ ಸಿಸ್ಟಮ್ಸ್', ಮೆಕ್ಯಾನಿಕಲ್ ಹಾಗೂ ರೋಬೋಟಿಕ್ಸ್ ವಿಭಾಗದ 'ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ಸ್ಮಾರ್ಟ್ ಆ್ಯಂಡ್ ಸಸ್ಟೈನೇಬಲ್ ಡೆವಲಪ್ಮೆಂಟ್ಸ್ ಇನ್ ಮೆಟೀರಿಯಲ್ಸ್, ಮ್ಯಾನುಫ್ಯಾಕ್ಚರಿಂಗ್ ಆಂಡ್ ಎನರ್ಜಿ ಇಂಜಿನಿಯರಿಂಗ್' ಹಾಗೂ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಭಾಗದ ವತಿಯಿಂದ 'ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಮೆಟೀರಿಯಲ್ಸ್ ಸೈನ್ಸ್ ಆಂಡ್ ಮ್ಯಾತಮೆಟಿಕ್ಸ್ ಫಾರ್ ಎಡ್ವಾನ್ಸ್ಡ್ ಟೆಕ್ನಾಲಜಿ' ಎಂಬ ವಿವಿಧ ವಿಷಯಗಳ ಬಗೆಗೆ ಒಟ್ಟು7 ಕಾನ್ಫರೆನ್ಸ್ ಗಳನ್ನು ಹಮ್ಮಿಕೊಳ್ಳಲಾಯಿತು.
ಈ ಎರಡು ದಿನಗಳ ಕಾನ್ಫರೆನ್ಸ್ ನ ಅವಧಿಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುವಾಸಿಯಾದ ವಿವಿಧ ವಿಭಾಗಗಳ 15 ಸಾಧಕರು ದಿಕ್ಸೂಚಿ ಭಾಷಣಗಳನ್ನು ನಡೆಸಿಕೊಟ್ಟರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಶೋಧಕರಿಂದ 23೦೦ ಗುಣಮಟ್ಟದ ಸಂಶೋಧನಾ ಪ್ರಬಂಧಗಳು ಬಂದಿದ್ದು ತಜ್ಞರ ಪರಿಶೀಲನೆಯ ಬಳಿಕ ೪೩೮ ಪ್ರಬಂಧಗಳನ್ನು ಮಂಡನೆಗಾಗಿ ಆಹ್ವಾನಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ