ಬದಿಯಡ್ಕ: ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆಯ ಶುಭ ಸಂದರ್ಭಲ್ಲಿ ಭಾನುವಾರ (ಫೆ.2) ಸಂಜೆ 6 ರಿಂದ 7.30 ರ ವರೆಗೆ ನರ್ತನ ಸೇವೆ ಬೆಂಗಳೂರಿನ ಶ್ರೀ ಹೃದ್ಯಾ ಅಕಾಡಮಿ (ರಿ.)ಯ ವಿದುಷಿ ಶ್ರೀಮತಿ ರೂಪಶ್ರೀ ಕೆ.ಎಸ್. ಧರ್ಮತ್ತಡ್ಕ ಹಾಗೂ ಕುಮಾರಿ ಹೃದ್ಯಾ ಭಟ್ ಕೋಡಿಮೂಲೆ ಇವರಿಂದ ಅಮೋಘವಾಗಿ ನಡೆಯಿತು.
ಪ್ರಥಮವಾಗಿ ಪುಷ್ಪಾಂಜಲಿ ಹಾಗೂ ಗಣೇಶ ಕೌತುವಂನೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ ರೂಪಶ್ರೀ ಅವರ ಶ್ರೀ ಕೃಷ್ಣನ ಆಧಾರಿತ ಕೂಚುಪುಡಿ ತರಂಗ, ಹೃದ್ಯಾಳ ವಿಶೇಷವಾದ ಹೂಲ ಹೂಪ್ ನರ್ತನ ಹಾಗೂ ಜಾನಪದ ನರ್ತನವು ನೆರೆದವರ ಮನಸೂರೆಗೊಂಡಿತು.
ಶ್ರೀದೇವಿಯ ಸುಂದರವಾದ ಭರತನಾಟ್ಯ ಕೃತಿಯನ್ನು ಅಮ್ಮ ಮತ್ತು ಮಗಳಾದ ವಿದುಷಿ ರೂಪಶ್ರೀ ಹಾಗೂ ಕುಮಾರಿ ಹೃದ್ಯಾ ಅತ್ಯಂತ ಮನೋಹರವಾಗಿ ನರ್ತಿಸಿದರು. ಪುರಂದರ ದಾಸರ ಅರ್ಥಗರ್ಭಿತವಾದ ದೇವರನಾಮ, ಭೈರವಿ ಶತಕಂ ನ್ನು ಒಳಗೊಂಡ ಈ ನೃತ್ಯ ಕಾರ್ಯಕ್ರಮವು ತಿಲ್ಲಾನ ಹಾಗೂ ಮಂಗಳದೊಂದಿಗೆ ಮುಕ್ತಾಯವಾಯಿತು.
ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ರಾಮಚಂದ್ರ ಭಟ್ ನೇರೋಳು ಕಾರ್ಯಕ್ರಮ ನಿರೂಪಿಸಿದರು. ಶಂಕರ್ ರಾವ್ ಕಕ್ವೆ, ಶ್ರೀಮತಿ ರೇವತಿ ಶಂಕರ್, ವೆಂಕಟ್ರಾಜ ಕೊಡಿಮೂಲೆ ಇವರ ಸಮ್ಮುಖದಲ್ಲಿ ಸಾಧನ ಮಹಾಬಲೇಶ್ವರ ಭಟ್ ಎಡಕ್ಕಾನ ಇವರು ವಿದುಷಿ ರೂಪಶ್ರೀ ಹಾಗೂ ಹೃದ್ಯಾರನ್ನು ಸನ್ಮಾನಿಸಿದರು. ಶಿವಪ್ರಸಾದ್ ಶೆಟ್ಟಿ ಕುಡಾಲು ವಂದನಾರ್ಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

