ಶ್ರೀ ಧ.ಮಂ. ಕಾಲೇಜು ಸಂಸ್ಕೃತ ವಿಭಾಗದಿಂದ ವಿಸ್ತರಣಾ ಕಾರ್ಯಕ್ರಮ

Upayuktha
0


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ವಿಸ್ತರಣಾ ಕಾರ್ಯಕ್ರಮ ಶುಕ್ರವಾರ (ಫೆ. 21)  ನಡೆಯಿತು.


ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಧರ ಭಟ್ ಇವರ ನೇತೃತ್ವದಲ್ಲಿ ದ್ವಿತೀಯ ಬಿಕಾಂ ಸಂಸ್ಕೃತ ವಿದ್ಯಾರ್ಥಿಗಳಾದ ಕುಮಾರಿ ಸಿಂಚನ ಪಾಲಂದೆ ಮತ್ತು ಕುಮಾರಿ ಧರಿತ್ರಿ ಭಿಡೆ ಇವರು ಸರ್ಕಾರಿ ಪ್ರೌಢಶಾಲೆ ನಿಡ್ಲೆ ಇಲ್ಲಿಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿದರು. 


ಆಹಾರದ ಮಹತ್ವ, ಜೀವನ ಶೈಲಿ, ಓದುವ ಹವ್ಯಾಸ ಇತ್ಯಾದಿ ವಿಷಯಗಳನ್ನು 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಅನೇಕ ಚಟುವಟಿಕೆಗಳ ಮೂಲಕ ಮನವರಿಕೆ ಮಾಡಲಾಯಿತು. ಈ ಒಂದು ಬೋಧಪ್ರದವಾದ ತರಬೇತಿಯಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಸಂತೋಷಪಟ್ಟರು. ವಿಶೇಷ ಪ್ರತಿಭೆಯನ್ನು ತೋರಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.


ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶಾಂತಾ ಅವರ ನಿರ್ದೇಶನದಂತೆ ಗಣಿತ ಪ್ರಾಧ್ಯಾಪಕರಾದ ಶರತ್ ತುಳುಪುಳೆ ಇವರು ಈ ತರಬೇತಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಎಲ್ಲ ರೀತಿಯ ಸಹಾಯವನ್ನು ವಿಸ್ತರಿಸಿದರು. ಶಾಲೆಯ ಎಲ್ಲ ಶಿಕ್ಷಕರು ಬಹಳ ಸಂತೋಷದಿಂದ ನಮ್ಮನ್ನು ಬರಮಾಡಿಕೊಂಡು ತರಗತಿಯ ವ್ಯವಸ್ಥೆ ಮುಂತಾದ ಸಹಕಾರವನ್ನು ತುಂಬು ಮನಸ್ಸಿನಿಂದ ನೀಡಿದರು.


ಈ ತರಬೇತಿ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ಸಿಂಚನ ಪಾಲಂದೆ ಮತ್ತು ಕುಮಾರಿ ಧರಿತ್ರಿ ಭಿಡೆ ತಮ್ಮ ವಿಶೇಷವಾದ ಪ್ರತಿಭೆಯ ಮುಖಾಂತರ ಎಲ್ಲ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ ವಿಸ್ತರಣ ಕಾರ್ಯದ ಚಟುವಟಿಕೆಗಳನ್ನು ನಡೆಸಿಕೊಟ್ಟರು. 

ಡಾ ಶ್ರೀಧರ್ ಭಟ್ಟ ಅವರು ವಿದ್ಯಾರ್ಥಿಗಳಿಗೆ ಓದಿನ ಮಹತ್ವವನ್ನು ಸೋದಾಹರಣವಾಗಿ ತಿಳಿಸುವುದರ ಜೊತೆಗೆ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top