10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮ
ಕುಂಜಿಬೆಟ್ಟು (ಉಡುಪಿ): ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡಗಳ ನಿವಾರಣೆ, ವಿಷಯದ ಗ್ರಹಿಕೆಯಲ್ಲಿ ಸುಧಾರಣೆ, ಭಾವನಾತ್ಮಕ ಹೊಂದಾಣಿಕೆಯ ಗುಣ ಹಾಗೂ ಶೈಕ್ಷಣಿಕ ಔನ್ನತ್ಯದ ಸಾಧನೆಗೆ ಪೂರಕ ಮನಸ್ಥಿತಿಯ ನಿರ್ಮಾಣಕ್ಕಾಗಿ ವಿಶೇಷ ಕಾರ್ಯಾಗಾರವನ್ನು ಕುಂಜಿಬೆಟ್ಟಿನ ಟಿ.ಎ ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಆಯೋಜಿಸಲಾಯಿತು.
ಕ್ರಿಯಾಶೀಲ ಮುಖ್ಯೋಪಾಧ್ಯಾಯಿನಿ ವಿನೋದಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಮೈ ಟ್ರೂ ಸ್ಕಿಲ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಸುಪರ್ಣಾ ಶೆಟ್ಟಿ ಅವರ ಸಹಯೋಗದಲ್ಲಿ ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಮಕ್ಕಳಲ್ಲಿ ಆತ್ಮವಿಶ್ವಾಸದ ವೃದ್ಧಿಯ ಜತೆಗೆ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವಂತೆ ಒತ್ತಡ ನಿರ್ವಹಣೆ, ಭಾವನಾತ್ಮಕ ಬುದ್ಧಿಮತ್ತೆ, ಪರೀಕ್ಷೆಗಳನ್ನು ನಿರ್ವಹಿಸುವ ಕೌಶಲ್ಯ ವೃದ್ಧಿ ಈ ಕಾರ್ಯಾಗಾರದ ಉದ್ದೇಶವಾಗಿತ್ತು.
ವಿದ್ಯಾರ್ಥಿಗಳಿಗೆ ವಾಸ್ತವ ಜಗತ್ತಿನ ಅರಿವು ಮೂಡಿಸುವುದರ ಜತೆಗೆ, ಪ್ರಾಯೋಗಿಕ ಅನುಭವಗಳನ್ನು ಪಡೆದುಕೊಂಡು ವ್ಯಕ್ತಿತ್ವದ ವಿಕಸನ ಮಾಡಿಕೊಳ್ಳಲು ಸೂಕ್ತ ಸನ್ನಿವೇಶಗಳನ್ನು ಕಲ್ಪಿಸಲಾಯಿತು. ಆರೋಗ್ಯಕರ ಮತ್ತು ಯಶಸ್ವೀ ಬದುಕಿಗೆ ಬಲವಾದ ಅಡಿಪಾಯವನ್ನು ಹಾಕಿಕೊಡುವ ಪ್ರಯತ್ನವಾಗಿ ನಡೆಸಿದ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು, ಪೋಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ