ಬಳ್ಳಾರಿ: ಬಳ್ಳಾರಿ ನಗರದ ಕನಕ ದುರ್ಗಮ್ಮ ಗುಡಿ ಬಳಿಯ ಅಂಡರ್ ಬ್ರಿಡ್ಜ್ ಓಪನ್ ಮಾಡಲು ಜವಾಬ್ದಾರಿಯುತ ಉತ್ತರ ನೀಡಲು ಯಾರು ತಯಾರಿಲ್ಲ ಎಂದು, ಬಹುತೇಕ ಕಾಮಗಾರಿ ಮುಗಿದರೂ ಫೆ. 9 ವರೆಗೆ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ದರಿಲ್ಲದೆ. ರೈಲ್ವೇ ಇಲಾಖೆಯ ಕಾಮಗಾರಿ ಬಾಕಿ ಇದೆಂದು ಬ್ಯಾನರ್ ಹಾಕಿತ್ತು.
ಇದಕ್ಕೆ ಕೋಪಗೊಂಡ ರೈಲ್ವೇ ಇಲಾಖೆ ನಮ್ಮದೇನು ಬಾಕಿ ಇಲ್ಲ. ಈ ರೀತಿ ಬ್ಯಾನರ್ ಹಾಕಿದವರ ಮೇಲೆ ಕ್ರಮಕ್ಕೆ ಪತ್ರ ಬರೆದ ಮೇಲೆ. ನಿರ್ಮಿತಿ ಕೇಂದ್ರದವರತ್ತ ಹೊರಳಿತು ಪ್ರಕರಣ. ಈಗ ನಿರ್ಮಿತಿ ಕೇಂದ್ರದವರು ನಮ್ಮ ಕಾಮಗಾರಿ ಮುಗಿದಿದೆ. ಇದನ್ನು ನಿಮ್ಮ ವಶಕ್ಕೆ ಒಪ್ಪಿಸುತ್ತೇವೆ ಎಂದು ಫೆ. 1 ರಂದು ಪಾಲಿಕೆ ಆಯುಕ್ತರಿಗೆ ದಾಖಲೆಗಳ ಸಮೇತ ಪತ್ರ ಬರೆದಿದೆ.
ನಂತರ ಪಾಲಿಕೆಯಿಂದ ವಿಳಂಬವೇಕೆ ಎಂಬ ಪ್ರಶ್ನೆಗೆ ಆಯುಕ್ತರು ಊರಲ್ಲಿ ಇಲ್ಲ. ಉಪ ಆಯುಕ್ತರು ನಿರ್ಮಿತಿ ಕೇಂದ್ರ ಕೊಟ್ಟಿದೆ. ಕೊಟ್ಟ ತಕ್ಷಣ ಹಾಗೆ ಪಾಲಿಕೆ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಬರಲ್ಲ. ಈ ಬಗ್ಗೆ ಕಾಮಗಾರಿ ಗುಣಮಟ್ಟ ಪರೀಕ್ಷೆ ಮಾಡಬೇಕು ಅದಕ್ಕಾಗಿ ತಡ ಆಗಿದೆಂದರು ಪ್ರತಿಭಟನಾ ಕಾರರಿಗೆ. ಹಾಗದರೆ ನಾಲ್ಕು ದಿನ ಏನು ಮಾಡಿದಿರಿ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ, ನೀವೇಕೆ ಪರೀಕ್ಷೆ ಮಾಡಿಲ್ಲ. ಕೂಡಲೇ ಓಪನ್ ಮಾಡಿ ನಂತರ ಪರೀಕ್ಷೆ ಮಾಡಿಕೊಳ್ಳಿ, ಸರಿ ಇದ್ದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ರಿಜಕ್ಟ್ ಮಾಡಿ ಎಂದರು.
ಈ ವೇಳೆ ಅಲ್ಲಿಗೆ ಬಂದ ಪಾಲಿಕೆ ಇಂಜಿನೀಯರ್ ಇದು ನಮ್ಮ ರಸ್ತೆ ಅಲ್ಲ, ರಾಜ್ಯ ಹೆದ್ದಾರಿ ಅವರು ಪಡೆದುಕೊಂಡು ನಿರ್ವಹಣೆಗೆ ಒಪ್ಪಿಸಬೇಕು ಎಂದರು. ಹೀಗೆ ಓಪನ್ ವಿಷಯದಲ್ಲಿ ಒಬ್ಬೊಬ್ಬರು ಒಂದು ರೀತಿ ಹೇಳಿಕೆ ನೀಡುತ್ತ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಕಳೆದ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಯದೇ ಇದ್ದ ಈ ಪ್ರದೇಶದಲ್ಲಿ ಉದ್ಘಾಟನೆಯಾಗುವ ಮುನ್ನವೇ ಕಿತ್ತಿಹೋಗಿರುವ ಫುಟ್ ಪಾಥ್‌ನ ಬ್ಯಾರಿಕೇಡ್ ಕಂಬಿಗಳನ್ನು ಮತ್ತೆ ನಿಲ್ಲಿಸಿ ಸಿಮೆಂಟ್ ಮಾಡುವುದು ಕಂಡು ಬಂತು. ಜೊತೆಗೆ ಗ್ರಿಲ್ ಗಳಿಗೆ ಮತ್ತು ರೈಲ್ವೇ ಟ್ರಾಕ್ ನ ಕೆಳ ಭಾಗದ ಗೋಡೆಗೆ ಪೇಂಟ್ ಮಾಡುವ ಕೆಲಸವೂ ನಡೆಯುತ್ತಿದೆ.
ಈ ರಸ್ತೆಯ ಕಾಮಗಾರಿಯ ಒಟ್ಟು ವೆಚ್ಚ 1.80 ಕೋಟಿ ರೂಗಳಿದ್ದು. ಈಗ ಆಗಿರುವ ಕೆಲಸವನ್ನು ನೋಡಿದರೆ ಅಷ್ಟೊಂದು ಮೊತ್ತ ವೆಚ್ಚವಾಗಿಲ್ಲ. ಕಾಮಗಾರಿಯ ವೆಚ್ಚವನ್ನು ಅಗತ್ಯಕ್ಕಿಂತ ಹೆಚ್ಚು ನಿಗಧಿ ಮಾಡಿದಂತೆ ಇದೆ. ಹಾಕಿರುವ ಗ್ರಿಲ್ ಗಳು ಈಗಲೇ ಅಲ್ಲಾಡುತ್ತಿವೆ.
ಈ ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಿದ ನಂತರ ಪೇಮೆಂಟ್ ಮಾಡಿ ಎಂದು ಡಿಸಿಯವರಿಗೆ ದೂರು ನೀಡಲಿದೆ. ಕಾಮಗಾರಿ ತನಿಖೆಗೆ ಲೋಕಾಯುಕ್ತಕ್ಕೆ ಸಹ ದೂರು ನೀಡಲಿದೆ. ಅಲ್ಲದೆ ಸದನದಲ್ಲೂ ಈ ಕುರಿತು ತನಿಖೆಗೆ ಧ್ವನಿ ಎತ್ತಲಿದೆಂದು ವಿಧಾನ ಪರಿಷತ್ತಿನ ಸದಸ್ಯ ವೈ.ಎಂ.ಸತೀಶ್ ಮಾಧ್ಯಮಗಳಿಗೆ ತಿಳಿಸಿದರು.
ಇಲ್ಲಿ ಈ ಮೊದಲೇ ನಗರ ಪಾಲಿಕೆಯಿಂದ ಬೀದಿ ದೀಪ ಅಳವಡಿಸಿತ್ತು ಅವನ್ನು ಯಾಕೆ ಕಿತ್ತು ಹಾಕಿದೆ.ಅವು ಹಾಗೇ ಇದ್ದರೆ. ಹೊಸದಾಗಿ 40 ಲಕ್ಷದಲ್ಲಿ ಲೈಟ್ ಹಾಕುವ ಅವಶ್ಯಕತೆ ಇರಲಿಲ್ಲ. ಕಿತ್ತು ಹಾಕಿದ ಲೈಟ್‌ಗಳು ಎಲ್ಲಿ ಇವೆ ಎಂದು ಪ್ರಶ್ನಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ