ಭಕ್ತಿ ಗೀತೆ: ಉಮಾಮಹೇಶ್ವರ

Upayuktha
0


ಪರಶಿವನ ಒಲುಮೆಗೆ

ಪಾರ್ವತಿ ವಲ್ಲಭನಿಗೆ

ಉಮಾಮಹೇಶ್ವರನಿಗೆ

ಕರಮುಗಿವೆ ಪರಶುಹಸ್ತನಿಗೆ//


ಶಿವರಾತ್ರಿಯಂದು ಬೇಗನೇ ಎದ್ದು

ದಿನಪೂರ್ತಿ ನಿಟ್ಟುಪವಾಸವಿದ್ದು

ರುದ್ರಾಭಿಷೇಕಕೆ ಬೇಲದಹಣ್ಣ ತಂದು

ಸಹಸ್ರನಾಮಕೆ ಬಿಲ್ವಪತ್ರೆಯ ಕೋಯ್ದು//


ಹಾಲಿನಅಭಿಷೇಕ  ಚಂದ್ರಮೌಳಿಗೆ

ಪಂಚಾಮೃತವು ಪಾಲನೇತ್ರನಿಗೆ

ವಿಧವಿಧ ಪುಷ್ಪಾರ್ಚನೆ ನೀಲಲೋಚನಿಗೆ

ಧೂಪದೀಪದ‌ ಆರತಿ ಗಂಗಾಧರನಿಗೆ//


ತುಪ್ಪದ ಆರತಿ ಶ್ರೀಕಂಠನಿಗೆ

ತಂಬಿಟ್ಟು ಉಂಡೆ ಗಂಗಾಧರನಿಗೆ

ಜಾಗರಣೆಯಲಿ ಭಜನೆ ಗೌರೀಶನಿಗೆ

ಭಕ್ತಿಭಾವವು ಅರ್ಪಿತ ಸರ್ವೇಶ್ವರನಿಗೆ//



- ಸಾವಿತ್ರಮ್ಮಓಂ ಅರಸೀಕೆರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top