ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ‘ಯಕ್ಷಗಾನ ಗೊಂಬೆಸಿರಿ’ ರಾಜ್ಯ ಪ್ರಶಸ್ತಿ

Upayuktha
0

ಉಪ್ಪಿನಕುದ್ರು ಗೊಂಬೆಯಾಟ ಯಕ್ಷಗಾನ ಅಕಾಡೆಮಿಯಿಂದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ‘ಯಕ್ಷಗಾನ ಗೊಂಬೆಸಿರಿ’ ರಾಜ್ಯ ಪ್ರಶಸ್ತಿ ಪ್ರದಾನ



ದಾವಣಗೆರೆ: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಯಕ್ಷಗಾನ ಅಕಾಡೆಮಿಯಿಂದ ಇತ್ತೀಚಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ, ಯಕ್ಷಗಾನ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ‘ಯಕ್ಷಗಾನ ಗೊಂಬೆಸಿರಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಎಂದು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ತಿಳಿಸಿದ್ದಾರೆ.


ವಾಣಿಜ್ಯ  ನಗರಿ ದಾವಣಗೆರೆಯಲ್ಲಿ ಯಕ್ಷಗಾನ ಸೇರಿದಂತೆ ಕಲೆ, ಸಾಹಿತ್ಯ, ಸಂಗೀತ ಹೀಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಯಾವುದೇ ಸ್ವಾರ್ಥ ಇಲ್ಲದೇ ಹೊಸ ಹೊಸ ಪರಿಕಲ್ಪನೆಗಳೊಂದಿಗೆ ಸಾಧನೆಯ ಜತೆಯಲ್ಲಿ ದಾವಣಗೆರೆಯ ಮಹಿಳೆಯರಿಗೆ ಯಕ್ಷಗಾನ ಪ್ರದರ್ಶನ ಯಶಸ್ವಿಗೊಳಿಸಿದ ಶೆಣೈಯರಿಗೆ ಅಭಿಮಾನದಿಂದ ಅಭಿನಂದಿಸಲಾಗಿದೆ ಎಂದು ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಗೀತಾಂಜಲಿ ಭಾಸ್ಕರ್ ಕಾಮತ್ ಪ್ರಕಟಿಸಿದ್ದಾರೆ. ವೇದಿಕೆಯಲ್ಲಿ ಜ್ಯೋತಿ ಗಣೇಶ್ ಶೆಣೈ, ಸನ್ನಿಧಿ ಸಂದೀಪ್ ಶೆಣೈ, ಕುಮಾರಿ ಮಾನ್ಯ ಶೆಣೈಯವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top