ದಾವಣಗೆರೆ: ಫೆ. 5 ರಂದು ರಥಸಪ್ತಮಿ

Upayuktha
0


ದಾವಣಗೆರೆ: ಗಾಯತ್ರಿ ದೇವಿಯ ಆಧ್ಯಾತ್ಮ ಪರಂಪರೆಯ ಭಕ್ತರ ಸಮೂಹ ಗಾಯತ್ರಿ ಪರಿವಾರದಿಂದ ಧಾರ್ಮಿಕ ಪರಂಪರೆಯ ಸದ್ಭಕ್ತರಿಗೆ ಒಂದು ಸುವರ್ಣಾವಕಾಶ ಸಂದೇಶ.


ಫೆಬ್ರವರಿ 5 ರಂದು ಬುಧವಾರದಂದು ರಥ ಸಪ್ತಮಿ ದಿನಾಚರಣೆ ದಿನಾಚರಣೆ ಇದ್ದು ಅಂದು ಬೆಳಿಗ್ಗೆ ಸೂರ್ಯೋದಯದ ಸಂದರ್ಭದಲ್ಲಿ ಸದ್ಭಕ್ತರು ತಮ್ಮ ತಮ್ಮ ಮನೆಯಲ್ಲೇ ತಲೆ ಸ್ನಾನ ಮಾಡಿ ಕಣ್ಣಿಗೆ ಕಾಣುವ ಕರ್ತವ್ಯನಿಷ್ಠೆಯ ಸಮಯ ಪ್ರಜ್ಞೆಯ ಸೂರ್ಯ ದೇವರಿಗೆ ತಾಂಬ್ರದ ಚಂಬಿನಲ್ಲಿ ನೀರೆರೆದು ಗಾಯತ್ರಿ ಮಂತ್ರದ ಪಠಣದೊಂದಿಗೆ ಪೂಜೆ ಸಲ್ಲಿಸಿದರೆ ನಮ್ಮ ನಿಮ್ಮೆಲ್ಲರ ಕುಟುಂಬದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ .


ಜತೆಗೆ ಸೂರ್ಯ ದೇವನು ಹುಟ್ಟಿದ ದಿನಾಚರಣೆಯಂದು ಏಳು ಕುದುರೆಗಳ ರಥದಲ್ಲಿ ಕುಳಿತು ಇಡೀ ಪ್ರಪಂಚಕ್ಕೆ ಒಳ್ಳೆಯ ಸಂದೇಶದೊಂದಿಗೆ ಪೂಜೆ ಸಲ್ಲಿಸಿದ ಎಲ್ಲರಿಗೂ ಅನಾರೋಗ್ಯದ ಆರೋಗ್ಯ ಭಾಗ್ಯ ಅಷ್ಟೈಶ್ವರ್ಯ ಪ್ರಾಪ್ತಿ ಸಿಗುತ್ತದೆ.


ಗಾಯತ್ರಿ ಪರಿವಾರದ ಸಲಹೆಗಾರರಾದ ಉತ್ತಮಚಂದ್ ಗಾಂಧಿಯವರು ಆಧ್ಯಾತ್ಮ ಕಾಳಜಿಯೊಂದಿಗೆ  ಈ ಸಂದೇಶ ಪ್ರಕಟಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9449603008 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಗಾಯತ್ರಿ  ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.



Post a Comment

0 Comments
Post a Comment (0)
To Top