ಭಾಸ್ಕರ್ ಕೊಗ್ಗ ಕಾಮತ್‌; ಕಲಾಕುಂಚ ಯಕ್ಷರಂಗದಿಂದ ಪ್ರಶಸ್ತಿ ಪ್ರದಾನ

Upayuktha
0

ಉಪ್ಪಿನಕುದ್ರು ಗೊಂಬೆಯಾಟ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರವರಿಗೆ ಕಲಾಕುಂಚ, ಯಕ್ಷರಂಗದಿಂದ ಪ್ರಶಸ್ತಿ ಪ್ರದಾನ.



ದಾವಣಗೆರೆ: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರವರಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ ಯಕ್ಷಗಾನ ಸಂಸ್ಥೆಯಿಂದ ಅರ್ಧ ಶತಮಾನದಿಂದ ದೇಶ ವಿವಿಧ ವಿದೇಶಗಳಲ್ಲಿ ಕರ್ನಾಟಕ ಕರಾವಳಿ ಜಿಲ್ಲೆಗಳ ಅಪ್ಪಟ ಕನ್ನಡ ಭಾಷೆಯ ಯಕ್ಷಗಾನವನ್ನು ವಿಶ್ವವ್ಯಾಪ್ತಿಗಳಲ್ಲಿ ವೈಭವೀಕರಿಸಿದ ಯಕ್ಷಗಾನ ಗೊಂಬೆಯಾಟ ಕ್ಷೇತ್ರದ ಸಾಧನೆಯನ್ನು ಗುರುತಿಸಿ “ಕರ್ನಾಟಕ ಸುವರ್ಣ ಕಣ್ಮಣಿ” ರಾಜ್ಯ ಪ್ರಶಸ್ತಿಯನ್ನು  ಪ್ರದಾನ ಮಾಡಲಾಯಿತು.


ಉಪ್ಪಿನಕುದ್ರು ಗೊಂಬೆಯಾಟ ಯಕ್ಷಗಾನ ಅಕಾಡೆಮಿಯಲ್ಲಿ ಕಲಾಕುಂಚ, ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಸಮಿತಿ ಸದಸ್ಯರಾದ  ಸನ್ನಿಧಿ ಸಂದೀಪ್ ಶೆಣೈ ದಂಪತಿಗಳು ಮತ್ತು ಕುಮಾರಿ ಮಾನ್ಯ ಶೆಣೈಯವರು ಉಪಸ್ಥಿತರಿದ್ದರು.


ದಾವಣಗೆರೆಯ ಕಲಾಕುಂಚ, ಯಕ್ಷರಂಗದ ಸರ್ವ ಸದಸ್ಯರು, ಪದಾಧಿಕಾರಿಗಳು, ಅಭೂತಪೂರ್ವ ಯಕ್ಷಗಾನ ಗೊಂಬೆಯಾಟ ಕ್ಷೇತ್ರದ ವಿಭಿನ್ನ ಹೊಸ ಹೊಸ ಪರಿಕಲ್ಪನೆಗಳ ನಿರಂತರ ಸಾಧನೆಗಳ ಭಾಸ್ಕರ್ ಕೊಗ್ಗ ಕಾಮತ್‌ರವರಿಗೆ ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top