ಕಾಂತಾವರ: ಅಲ್ಲಮಪ್ರಭು ಪೀಠದಲ್ಲಿ ಗುರುಕುಲದಲ್ಲಿ ಸಮಾಲೋಚನಾ ಸಭೆ

Upayuktha
0


ಕಾರ್ಕಳ: ನಾನಾ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಅಲ್ಲಮಪ್ರಭು ಪೀಠದ ಕಾರ್ಯ ಚಟುವಟಿಕೆಗಳು ಇದೀಗ ನೂತನ ಟ್ರಸ್ಟಿಗಳ ನೇತೃತ್ವದಲ್ಲಿ ಹಾಗೂ ಹರಿಹರಪುರದ ಪ್ರಬೋಧಿನಿ ಗುರುಕುಲದ ಸಹಯೋಗದೊಂದಿಗೆ ಪುನರಾಂಭಗೊಳ್ಳುತ್ತಿದ್ದು ಇದಕ್ಕೆ ಗ್ರಾಮಸ್ಥರ ಸಹಕಾರ ಕೋರುತ್ತಿರುವುದಾಗಿ ಪೀಠದ ಅಧ್ಯಕ್ಷ ನ್ಯಾಯವಾದಿ ಯಶೋಧರ್ ಪಿ. ಕರ್ಕೇರಾ ಅವರು  ತಿಳಿಸಿದರು.

ಅಲ್ಲಮಪ್ರಭು ಪೀಠವು ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ದಾರ್ಶನಿಕ ಅಲ್ಲಮಪ್ರಭು ಹಾಗೂ ಇನ್ನಿತರ ಮಹಾತ್ಮರ ವಚನ ಸಾಹಿತ್ಯ ಹಾಗೂ ಇತರ ಸಾಹಿತ್ಯವನ್ನೂ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಡಾ.ನಾ.ಮೊಗಸಾಲೆಯವರ ಪರಿಕಲ್ಪನೆ ಹಾಗೂ ಪರಿಶ್ರಮದಿಂದಾಗಿ ಸ್ಥಾಪನೆಗೊಂಡ ಅಲ್ಲಮಪ್ರಭು ಪೀಠವು ನಿರಂತರವಾಗಿ ತಿಂಗಳಿಗೊಂದರಂತೆ  108 ಉಪನ್ಯಾಸಗಳನ್ನು ನಡೆಸಿ ಅವುಗಳನ್ನು ‘ಕರಣ-ಕಾರಣ’ ಎಂಬ ಹೆಸರಿನಲ್ಲಿ ಸಂಪುಟೀಕರಿಸುವ ಕಾರ್ಯವನ್ನು ಮಾಡಿದೆ. 


ಪೀಠದ ಚಟುವಟಿಕೆಗಳಿಗೆ ಪೂರಕವಾಗಿ ಮಹಾಮನೆ ಎಂಬ ಕಟ್ಟಡವನ್ನು ಪ್ರಾರಂಭಿಸಲಾಯಿತಾದರೂ ಆರ್ಥಿಕ ಸಂಕಷ್ಟದಿಂದಾಗಿ ಅದನ್ನು ಮುಂದುವರಿಸಲಾಗದೆ ನಂತರ ಸಂಪನ್ಮೂಲವೂ ಇಲ್ಲದೇ ಕಾರ್ಯಕ್ರಮಗಳು ಕೂಡಾ ಸ್ಥಗಿತಗೊಂಡವು. ಈಗ ಅಪೂರ್ಣಗೊಂಡಿದ್ದ ಮಹಾಮನೆಯ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಮುಂದೆ ಇಲ್ಲಿ ಸಮಾಜದ ಅತ್ಯಂತ ಬಡ ಮತ್ತು ನಿರ್ಗತಿಕ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಔಪಚಾರಿಕ ಶಿಕ್ಷಣದ ಜೊತೆ ಗುರುಕುಲ ಮಾದರಿಯ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲು ಯೋಜನೆ ಹಾಕಿಕೊಂಡಿದ್ದು, ಪೀಠದ ಇತರ ಕಾರ್ಯ ಯೋಜನೆಗಳ ಪರಿಚಯವನ್ನು ಗ್ರಾಮಸ್ಥರಿಗೆ ತಿಳಿಸುವುದಕ್ಕಾಗಿ ಇಂದಿನ ಸಮಾಲೋಚನಾ ಸಭೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.


ವಕ್ತಾರರಾದ ಸುರೇಶ್ ಹೆಜಮಾಡಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಿಕ್ಷಣ, ಸಂಸ್ಕಾರ ಮತ್ತು ಗುರುಕುಲದ ವೈಶಿಷ್ಟ್ಯತೆಯ ಬಗ್ಗೆ ವಿವರಿಸಿದರು. ಪೀಠದ ಪ್ರಧಾನ ನಿರ್ದೇಶಕ ತೆ. ವಿಜಯ ಕುಮಾರ್ ಅವರು ಸಂಸ್ಕಾರ ಶಿಕ್ಷಣದ ಮಹತ್ವ ಮತ್ತು ಪೀಠದ ಮುಂದಿನ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಚೇತನ್ ಪ್ರಾರ್ಥಿಸಿದರು. ಸತೀಶ್ ಕುಮಾರ್ ಕೆಮ್ಮಣ್ಣು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ ಮೇಟಿಯವರು ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top