ಜ್ಞಾನಸಿರಿ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೇರಬೇಕು: ನಾದ ಬ್ರಹ್ಮ ಡಾ. ಹಂಸಲೇಖ

Upayuktha
0



ಬಳ್ಳಾರಿ: ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಗುಗ್ಗರಹಟ್ಟಿಯ 5ನೇ ವಾರ್ಡ್ನಲ್ಲಿರುವ ಜ್ಞಾನ ಸಿರಿ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್ ಆವರಣದಲ್ಲಿ  'ಜ್ಞಾನ ಸಿರಿ ಉತ್ಸವ-2025' ಕಾರ್ಯಕ್ರಮವನ್ನು ಅಧ್ದೂರಿಯಾಗಿ  ಆಯೋಜನೆ ಮಾಡಲಾಗಿತ್ತು.


ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಪ್ರಖ್ಯಾತ ಚಲನಚಿತ್ರ ಸಾಹಿತಿ ಹಾಗೂ ಸಂಗೀತ ನಿರ್ದೇಶಕರು, ಪ್ರೇಮಲೋಕದ ಜೊತೆ ನಾದ ಲೋಕವನ್ನು ಸೃಷ್ಟಿಸಿದ ಸ್ವರ ಮಾಂತ್ರಿಕ ನಾದ ಬ್ರಹ್ಮ ಡಾ. ಹಂಸಲೇಖರವರು ಮತ್ತು ಅವರ ಧರ್ಮಪತ್ನಿ ಲತ ಹಂಸಲೇಖ ಅವರೊಂದಿಗೆ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜುರವರು ಭಾಗವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಭೇಶ್ವರ ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಎಂ.ದಕ್ಷಿಣಮೂರ್ತಿಯವರು ವಹಿಸಿದ್ದರು. 


ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹಂಸಲೇಖ ಅವರು ಮಾತನಾಡುತ್ತಾ ನನ್ನನ್ನು ಬಳ್ಳಾರಿಯ ಜ್ಞಾನ ಸಿರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ನನಗೆ ಹೆಮ್ಮೆಯಾಗಿದೆ ಎಂದರು. ಬಳ್ಳಾರಿಗೆ ಈ ಹೆಸರು ಹೇಗೆ ಬಂತು ಎಂದು ಹೇಳುತ್ತಾ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ವಜ್ರ ವೈಡೂರ್ಯಗಳನ್ನು ದಾರಿಯಲ್ಲಿ ಹಾಕಿಕೊಂಡು ಬಳ್ಳಾ (ಸೇರು) ಕೂಡಾ ಅಳಿಯತಿದ್ದರಂತೆ. 


ಹನಿ ಹನಿ ಕೂಡಿದರೇ ಹಳ್ಳ, ತೆನೆ ತೆನೆ ಕೂಡಿದರೇ ಬಳ್ಳಾ ಇದಕ್ಕೆ ನಾವು ರೆಸ್ಪೆಕ್ಟ್ ಕೊಡುವುದರ ಮೂಲಕ ಸಾಧಾರಣವಾಗಿ ನಾವು ಮತ್ತೊಬ್ಬರಿಗೆ ರೀ ರೀ ಎಂದು ರೆಸ್ಪೆಕ್ಟ್ ಕೊಟ್ಟು ಮಾತನಾಡುತ್ತೇವೋ ಅದೇ ರೀತಿಯಲ್ಲಿ ಹಳ್ಳಾ ಗೇ ಹಳ್ಳಾರಿ ಅಂತ ಬಳ್ಳಾ ಗೆ ಬಳ್ಳಾರಿ ಎಂದು ಉಚ್ಚರಿಸುತ್ತೇವೆ ಎಂದರು. ಶ್ರೀಕೃಷ್ಣದೇವರಾಯರು ಆಳಿದ ನಾಡು ಇದು. ಇದನ್ನು ನಾವು ಯಾವಾಗಲೂ ಮರೆಯಬಾರದು. 


ವಿದ್ಯಾರ್ಥಿಗಳು ಮನೆಯಲ್ಲಿ ಇರುವದರಕ್ಕಿಂತ ಶಾಲೆಯಲ್ಲಿ ಶಿಕ್ಷಕರ ನಡುವೆ ಬೆರೆಯುವ ಸಮಯವೇ ಹೆಚ್ಚು ಹಾಗಾಗಿ ನಾವು ಶಿಕ್ಷಕರೊಂದಿಗೆ ಒಳ್ಳೆಯ ಭಾವನೆ, ಮರ್ಯಾದೆ ಪೂರ್ವಕವಾಗಿ ನಡೆದುಕೊಳ್ಳುವುದು ಬಹಳ ಮುಖ್ಯ, ತಂದೆ ತಾಯಿಯರೊಂದಿಗೆ ಮತ್ತು ಸಮಾಜಕ್ಕೆ ಒಳ್ಳೆಯ ಸಂಪನ್ನ ವ್ಯಕ್ತಿಗಳಾಗಿ ಹೊರಹೊಮ್ಮಬೇಕಿದೆ ಎಂದರು. 


ಮಕ್ಕಳಿಗೆ ಯಾವ ವಿಷಯದಲ್ಲಿ ಪ್ರತಿಭೆ ಇದಿಯೋ ಎಂದು ತಿಳಿದುಕೊಂಡು ಆ ಮಕ್ಕಳನ್ನು ಆ ಹಾದಿಯಲ್ಲಿ ತಿರುಚಿದರೇ ಮಕ್ಕಳು ಸಂಪನ್ನರಾಗುತ್ತಾರೇ ಮತ್ತು ಶಿಕ್ಷಕರಿಗೆ ಕೋಡಾ ಹೊರೆ ಕಡಿಮೆಯಾಗುತ್ತದೆ ಎಂದು ಕಿವಿ ಮಾತನ್ನು ಹೇಳಿದರು. ಮುಂದಿನ ದಿನಗಳಲ್ಲಿ ಈ ಶಾಲೆಗೆ ಸಂಗೀತ ಶಿಕ್ಷಣವನ್ನು ಕೊಡಲು ಬಯಿಸಿದರೇ ನಾನು ಆನ್‌ಲೈನ್ ಕ್ಲಾಸನ್ನು ಹೇಳಿಕೊಡಲು ತಯಾರಿದ್ದೇನೆ ಎಂದರು.


ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ಮುನಿರಾಜುರವರು ಮಾತನಾಡುತ್ತಾ ದಕ್ಷಿಣ ಮೂರ್ತಿಯವರು ಹಣ ಸಂಪಾದನೇ ಮಾಡಬೇಕು ಅಂದುಕೊಂಡಿದ್ದರೇ ಯಾವುದಾದರೂ ಉದ್ಯಮವನ್ನು ಸ್ಥಾಪಿಸಿ ಹಣ ಗಳಿಸುತಿದ್ದರು, ಆದರೇ ಅವರು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂದು ಪಣತೊಟ್ಟು 35 ಶಿಕ್ಷಣಾ ಸಂಸ್ಥೆಗಳನ್ನು ಮುನ್ನಡೆಸುತಿದ್ದಾರೆ ಎಂದರು. 


ವಿದ್ಯಾರ್ಥಿಗಳು ಲಕ್ಷ್ಮಿ ಯ (ಹಣ) ಹಿಂದೆ ಹೋಗಬಾರದೆಂದು, ಸರಸ್ವತಿ (ಶಿಕ್ಷಣ) ಹಿಂದೆ ಬಿದ್ದರೇ ಹಣ ತಾನಾಗಿ ತಮ್ಮ ಬಳಿ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. “ಪೋಷಕರೇ ಮಕ್ಕಳಿಗೆ ಆಸ್ತಿಯನ್ನು ಮಾಡಬೇಡಿ” ಸಾಧ್ಯವಾದಷ್ಟು ಶಿಕ್ಷಣವನ್ನು  ಕೊಡಿಸಬೇಕೆಂದು, ಆಗ ಅವರು ಪ್ರಯೋಜಕರಾಗಿ ದೇಶಕ್ಕೆ ಒಳ್ಳೆಯ ನಾಗರೀಕನಾಗುತ್ತಾನೆ ಮತ್ತು ಪೋಷಕರಿಗೆ ಒಳ್ಳೆಯ ಮಗನಾಗಿ ತಂದೆ ತಾಯಿಯನ್ನು ಗೌರವಯುತವಾಗಿ ನೋಡಿಕೊಳ್ಳುತ್ತಾನೆ ಎಂದರು. 


ಎಲ್ಲಾ ವಿದ್ಯಾರ್ಥಿಗಳು ಬೇರೆ ಬೇರೆ ದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಲು ಆಗದೆ ಇರುವುದರಿಂದ ವಿವಿದ ಕೋರ್ಸುಗಳನ್ನು ವಿದೇಶದವರಿಂದ ಆನ್‌ಲೈನ್ ಮುಖಾಂತರ ಶಿಕ್ಷಣ ಕೊಡಿಸುತಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ನಮ್ಮ ಯೂನಿವರ್ಸಿಟಿ ಕಡೆಯಿಂದ ಈ ಶಾಲಾ ಕಾಲೇಜಿಗೆ ಏನು ಸಹಾಯ ಆಗಬೇಕಿದೆಯೋ ಅದನ್ನು ಮಾಡಿಕೊಡಲು ನಾವು ಸಿದ್ದರಿದ್ದೇವೆ ಎಂದರು.


ಮೇಯರ್ ಮುಲ್ಲಂಗಿ ನಂದೀಶ್ ಅವರು ಮಾತನಾಡುತ್ತಾ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ ಶರಭೇಶ್ವರ ಶಿಕ್ಷಣಾ ಸಂಸ್ಥೆಗಳು ಒಂದರಿಂದ ಪ್ರಾರಂಭಗೊಂಡು ಈಗ 35 ಅಂಗ ಸಂಸ್ಥೆಗಳಾಗಿವೆ ಎಂದರೇ ದಕ್ಷಿಣ ಮೂರ್ತಿಯವರಿಗೆ ಶಿಕ್ಷಣದಮೇಲೆ ಎಸ್ಟು ಪ್ರೀತಿ ಇದೆ ಎನ್ನುವುದು ನಾವು ಅರ್ಥ ಮಾಡಿಕೊಳ್ಳಬಹುದು ಎಂದರು. ಮುಂದಿನ ದಿನಗಳಲ್ಲಿ 35 ಶಿಕ್ಷಣಾ ಸಂಸ್ಥೆಗಳಿಂದ 350 ಸಂಸ್ಥೆಗಳಾಗಬೇಕು ಎಂದು ಶುಭಾರೈಸಿದರು.


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಡಾ.ಹಂಸಲೇಖರವರ ಧರ್ಮಪತ್ನಿ ಲತಾ ಹಂಸಲೇಖರವರು ಜನಪದ ಗೀತೆಯನ್ನು ಹಾಡಿ ವಿದ್ಯಾರ್ಥಿಗಳನ್ನು, ಪ್ರೇಕ್ಷಕರನ್ನು, ಪೋಷಕರನ್ನು ಮನರಂಜಿಸಿದರು. ಖ್ಯಾತ ಗಾಯಕರು ಗೀತೆಗಳನ್ನು ಹಾಡಿದರು. ಮಕ್ಕಳು ಹಾಗೂ ನುರಿತ ನೃತ್ಯಗಾರರಿಂದ ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆದವು.


ಈ ಸಂಧರ್ಬದಲ್ಲಿ ಶರಭೇಶ್ವರ ಕಾಲೇಜಿನ ದಕ್ಷಿಣ ಮೂರ್ತಿ, ಜ್ಞಾನ ಸಿರಿ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನ ಛೇರ್‌ಮನ್ ಎಸ್.ಎಂ.ಶಿವನಾಗ, ಜ್ಞಾನ ಸಿರಿ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಅನನ್ಯ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಚೋಳರಾಜು, ದೇವರಾಜು, ಜಾನಕಿರಾಮುಡು, ಶ್ವೇತ, ಚಿದಾನಂದ, ಕಾವ್ಯ, ಸುಧಾಕರ, ವರಪ್ರಸಾದ್, ದೇವಪ್ಪ, ಪ್ರೇಮ ಕುಮಾರ್, ರಮೇಶ್ ಯಾದವ್, ಶಾಲಾ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top