ಬಳ್ಳಾರಿ: ನಗರದ ಸಿರುಗುಪ್ಪ ರಸ್ತೆ ಶಿಲ್ಪಿ ನಗರದಲ್ಲಿ ನೂತನವಾಗಿ ಅಭಯ ಆಂಜನೇಯ ಸ್ವಾಮಿ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪೂಜೆಗಳನ್ನು ಭಕ್ತಾದಿಗಳ ಸಮಕ್ಷದಲ್ಲಿ ನೆರವೇರಿಸಲಾಯಿತು ಎಂದು ತಿಳಿಸಿದ್ದಾರೆ.
ಧ್ವಜಾರೋಹಣ, ಗಂಗಾಪೂಜೆ, ಮಹಾ ಗಣಪತಿ ಪೂಜೆ, ಮುಂಜಾನೆ ಆವಾಹಿತ ದೇವತಾ ಪೂಜೆ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪ್ರತಿಷ್ಠಾಹೋಮ ಜಯಾದಿಹೋಮ, ಪ್ರಾಯಶ್ಚಿತ್ತ ಹೋಮ ಬಲಿಹರಣ ಕುಂಭಾಭಿಷೇಕ, ಅಲಂಕಾರ ಪೂಜಾ ಮಂಗಳಾರತಿ, ಮಂತ್ರ ಪುಷ್ಪ ಮತ್ತು ಪೂರ್ಣವುತಿ ತೀರ್ಥ ಪ್ರಸಾದ ವಿನಿಯೋಗ ಪುಣ್ಯಾಹವಾಚನ, ಮಾತೃಕಾ ಪೂಜೆ, ದೇವನಾಂದಿ, ಆಚಾರ್ಯಾದಿ ಋತ್ವಿಗ್‌ವರಣ, ರಕ್ಷಾಬಂಧನ, ನವಗ್ರಹ, ಪಂಚಬ್ರಹ್ಮ ಕಲಶ ಸ್ಥಾಪನೆ. ಅಗ್ನಿಪ್ರತಿಷ್ಠಾಪನೆ, ಜಲಾಧಿವಾಸ, ಕ್ಷೀರಾಧಿವಾಸ, ನವಗ್ರಹ, ಪಂಚಬ್ರಹ್ಮ, ರಾಕ್ಷೆಜ್ಞ, ವಾಸ್ತು ಹೋಮಗಳು, ಧ್ಯಾನ್ಯಾಧಿವಾಸ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಸಂಜೆ ದೇವತಾ ಪೂಜಾ, ವಾಸ್ತು ರಾಕ್ಷೆಜ್ಞ ಪ್ರಧಾನ ದೇವತಾ ಹೋಮಗಳು, ಶಯ್ಯಾಧಿವಾಸ, ಮಂಗಳಾರತಿ ನಡೆಸಲಾಯಿತು ಎಂದು ಮುಖ್ಯ ಅರ್ಚಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಾಜಿ ಗಾಲಿ ಸೋಮಶೇಖರ್ ರೆಡ್ಡಿ, ಮುಖಂಡರು ಗಾಲಿ ಲಕ್ಷ್ಮಿ ಅರುಣ, ಕಂಟ್ರಾಕ್ಟರ್ ಭೂಪಾಲ್ ರೆಡ್ಡಿ, ದೇವಸ್ಥಾನದ ಪ್ರಮುಖರು ಪ್ರವೀಣ್ ರೆಡ್ಡಿ, ಶಿಲ್ಪಿ ವೀರೇಶ್, ಶಿಲ್ಪಿ ಶಿವಕುಮಾರ್ ಆಚಾರಿ, ಮೇಸ್ತ್ರಿ ರಘು, ಬಿ ಮಹೇಶ್, ಮೇಸ್ತ್ರಿ ರಾಘವೇಂದ್ರ ಯಾದವ್, ರಕ್ಷಣಾ ವೇದಿಕ ವೆಂಕಯ್ಯ, ಟಿ ವೆಂಕಟ ನಾರಾಯಣಸ್ವಾಮಿ, ಎಚ್ ರಾಮಾಂಜಿನಿ , ಮಾಬು, ಆಟೋ ಮೋಹನ್, ಉಮಾಪತಿ, ಕರಿಯಪ್ಪ, ಗೋವಿಂದ ಯಾದವ್, ಮಾರಣ್ಣ ಸೇರಿದಂತ ಭಕ್ತಾದಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ