ಕು||ಎನ್. ಹರ್ಷಿತಾ ಭರತನಾಟ್ಯ ರಂಗಪ್ರವೇಶ : ಕಲಾಸಕ್ತರಿಂದ ಆಸ್ವಾದನೆ

Upayuktha
1 minute read
0


ಬೆಂಗಳೂರು : ನಾಟ್ಯೇಶ್ವರ ನೃತ್ಯ ಶಾಲೆಯ  ಗುರುಗಳಾದ ಕಲಾಯೋಗಿ ಕೆ.ಪಿ.ಸತೀಶ ಬಾಬು  ಹರ್ಷಿತಾ ರವರ ಮಾರ್ಗದರ್ಶನದಲ್ಲಿ   ನೃತ್ಯ ಶಾಲೆಯ 25ನೇ ಹಿರಿಯ ವಿದ್ಯಾರ್ಥಿನಿ ಕು||ಎನ್. ಹರ್ಶಿತಾರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ  ಎನ್.ಆರ್. ಕಾಲೋನಿಯ ಡಾ|| ಸಿ. ಅಶ್ವಥ್ ಕಲಾ ಭವನದಲ್ಲಿ   ಯಶಸ್ವಿಯಾಗಿ ಮೂಡಿಬಂತು.


ವಾದ್ಯವೃಂದ : ನಟ್ಟುವಾಂಗದಲ್ಲಿ ಗುರುಗಳಾದ ಕಲಾಯೋಗಿ  ಕೆ.ಪಿ.ಸತೀಶ್ ಬಾಬು , ಹಾಡುಗಾರಿಕೆ-ವಿ||ಹರ್ಷಿತಾ,ಮೃದಂಗ-ವಿದ್ವಾನ್ ಪಿ. ಜನಾರ್ದನ ಕೊಳಲು- ವಿ|| ರಘುಸಿಂಹ, ನಿರೂಪಣೆ-ವಾಣಿ ಸತೀಶ್ ಬಾಬು.

ನೃತ್ಯ ಪ್ರದರ್ಶನದಲ್ಲಿ : ಪಾರಂಪರಿಕ ನೃತ್ಯ  ಬಂದಗಳಾದ ಪುಷ್ಪಾಂಜಲಿ, ಗುರುಶ್ಲೋಕ, ಗಣಪತಿ ಕೌತ್ವಂ, ಶಬ್ದಂ, ಬಸವಣ್ಣನವರ ವಚನ, ಶಂಕರಾಭರಣ ಪದವರ್ಣ, ಶಿವ ಕೃತಿ  ಹಾಗೂ ಕೊನೆಯಲ್ಲಿ ಧನುಶ್ರಿ ತಿಲ್ಲಾನ, ಮಂಗಳದೊಂದಿಗೆ  ಸುಸಂಪನ್ನವಾಯಿತು. 


ಮುಖ್ಯ ಅತಿಥಿಗಳಾಗಿ ರವಿಸುಬ್ರಮಣ್ಯ, ಕಟ್ಟೆ ಸತ್ಯನಾರಾಯಣ, ಮಾನಸಿ ಜೋಶಿ (ಎಂ.ಜೆ ಪೌಂಡೇಶನ್), ಸಂಧ್ಯಾ ಸಿ.ಆರ್.(ಮಂದಿರಾ ನೃತ್ಯ  ಶಾಲೆ), ಎಸ್ ಜಾನ್ಸನ್, ವಿ.ಕುಮಾರ್ ಹಾಗೂ ಕೆ. ಶ್ರೀದೇವಿ, ಹೈದರಾಬಾದ್ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಡೀ ಕಾರ್ಯಕ್ರಮವನ್ನು ಪೋಷಕರಾದ ನಾಗಭೂಷಣ ಮತ್ತು ಲಕ್ಷ್ಮಿಅಚ್ಚುಕಟ್ಟಾಗಿ ನಿರ್ವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top