ನಾಟಿ ವೈದ್ಯ ಗೊರಕೋಡು ಶೇಷನಾಯಕರ ವಿಶೇಷಗಾಥೆ

Upayuktha
0

 


ಗ್ಯಾಂಗ್ರೀನ್ ಮತ್ತು ಸರ್ಪ ಸುತ್ತು ಅಥವಾ ಅಗ್ನಿಸರ್ಪಕ್ಕೆ ಗೋರಕೊಡು ಶೇಷನಾಯ್ಕರ ಗಿಡಮೂಲಿಕೆ ರಾಮಬಾಣ ಇದ್ದಂತೆ. ಸುಮಾರು 55 ವರುಷದಿಂದ ಸಾವಿರಾರು ಜನರ ಕಾಯಿಲೆಯನ್ನು ವಾಸಿ ಮಾಡಿದ ಕೀರ್ತಿ ಗೋರಕೊಡು ಶೇಷನಾಯಕರದ್ದು. ದುಡ್ಡು ಕಾಸಿಗೆ ಆಸೆ ಪಡದೆ ಸಾಮಾನ್ಯ ರೈತರ ಹಾಗೆ ಜೀವನಸಾಗಿಸುವ ಶೇಷನಾಯಕರದ್ದು ಮಹಾನ್ ವ್ಯಕ್ತಿತ್ವ, ನಾಲ್ಕಾರು ಎಕರೆ ಗದ್ದೆತೋಟದಲ್ಲಿ ಕೆಲಸಮಾಡಿ ಜೀವನ ನಡೆಸುವ ಶೇಷನಾಯಕರು ತಮ್ಮ ಚಿಕ್ಕ ವಯಸ್ಸಿನಲ್ಲಿ ಈ ಗಿಡಮೂಲಿಕೆ ಕಲಿತುಕೊಂಡಿದ್ದಾರೆ.


ಗ್ಯಾಂಗ್ರಿಗ್ ಆಗಿ ವೈದ್ಯರು ನಿಮ್ಮ ಕಾಲನ್ನೇ ಕತ್ತರಿಸಬೇಕು ಎಂಬ ಅನೇಕರ ಕಾಲುಗಳನ್ನು ಉಳಿಸಿದ್ದಾರೆ. ಒಂದೆರಡು ವಾರದಲ್ಲಿ ಅವರು ಹೇಳಿದ ರೀತಿಯಲ್ಲಿ ನಡೆದುಕೊಂಡರೆ ನಿಮ್ಮ ಕಾಯಿಲೆ ನೂರಕ್ಕೆ ನೂರು ವಾಸಿಯಾಗೋದು ಗ್ಯಾರಂಟಿ. 


ಈ ನಡುವೆ ತುಂಬಾ ದೂರದ ಊರಿಗೆ ಹೋಗಿ ಗಿಡಮೂಲಿಕೆ ತರುವುದರಿಂದ ಅಲ್ಲಿ ಯಾರನ್ನೋ ಹಿಡಿದು ಮರ ಹತ್ತಿ ಮತ್ತು ಭೂಮಿಯ ಒಳಗಿರುವ ಬೇರು ಮತ್ತೊಂದನ್ನ ದಿನವಿಡಿ ಅಲೆದು ತರುವುದರಿಂದ ತುಂಬಾ ಕಷ್ಟವಾಗುತ್ತದೆ. ತಾವಾಗಿಯೇ ಬಲವಂತದಿಂದ ಹಣವನ್ನ ಕೊಟ್ಟರೆ ಅವರು ವಿನಯದಿಂದ ಪಡೆಯುತ್ತಾರೆ. ನಿಮಗೆ ಆಸ್ಪತ್ರೆಯಲ್ಲಿ ಲಕ್ಷ ರೂಪಾಯಿ ಖರ್ಚು ಮಾಡಿದರೂ ಇಷ್ಟು ಪರಿಹಾರ ಸಿಗುವುದಿಲ್ಲ.


ಮೊದಲು ಅನೇಕ ಕಾಯಿಲೆಗಳಿಗೆ ಗಿಡಮೂಲಿಕೆಯಿಂದಲೇ ಪರಿಹಾರವನ್ನು ಕೊಡುತ್ತಿದ್ದ ಶೇಷನಾಯಕರು ಇಂದು ಎಲ್ಲಾ ಕಾಯಿಲೆಗಳಿಗೆ ಮದ್ದು ಕೊಡಲು ಇಲ್ಲಿ  ಆ ಮರ ಗಿಡ ಬಳ್ಳಿ ಬೇರು ಸಿಗುವುದಿಲ್ಲ ಎಂಬಕಾರಣಕ್ಕೆ ಇವಾಗ ಗ್ಯಾಂಗ್ರಿನ್ ಮತ್ತು ಸರ್ಪ ಸುತ್ತು ಈ ಎರೆಡು ಕಾಯಿಲೆಗಳಿಗೆ ಮಾತ್ರ ಮೂಲಿಕೆಯನ್ನ ಕೊಡುತ್ತಾರೆ. ಸರ್ಪ ಸುತ್ತಿಗೆ ಪಟ್ಟಣದಲ್ಲಿನ ಜನರು ಅಗ್ನಿಸರ್ಪ ಎನ್ನುತ್ತಾರೆ.


ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟರೆ ಮಧ್ಯದಲ್ಲಿ ಬಿಜ್ಜವಳ್ಳಿ ಸಿಗುತ್ತದೆ. ಈ ಬಿಜ್ಜವಳ್ಳಿಯಿಂದ ಸಮಕಾನಿ ಮತ್ತು ದಾನಶಾಲೆ ಸಮೀಪ ಏಳುಮನೆ.  ಈ ಏಳುಮನೆಯಿಂದ ಅರ್ಧ ಕಿ.ಮಿ ದೂರದಲ್ಲಿ ಈ ಗೋರಕೊಡು ಇದೆ. ಇಲ್ಲಿ ಶೇಷನಾಯಕರದ್ದು ವಾಸ.


ನೀವು ಅವರ ಮನೆಗೆ ಹೋದರೆ ಅವರ ಶ್ರೀಮತಿ ಚಂದ್ರಮತಿ ಅಥವಾ ಅವರ ಸೊಸೆ ಸುಪ್ರೀತಾ ನಿಮ್ಮನ್ನ ಮನೆಯಲ್ಲಿ ಕೂರಿಸುತ್ತಾರೆ. ನೀರು ಕಾಫಿ ಕೊಟ್ಟು ನಿಮ್ಮನ್ನು ಉಪಚರಿಸುತ್ತಾರೆ. ಮಗ ಪ್ರದೀಪನೊಂದಿಗೆ ಶೇಷನಾಯಕರದ್ದು ಬೆಳಿಗ್ಗೆ 5 ರಿಂದ ಸಂಜೆ 6ರ ವರೆಗೆ ಗದ್ದೆಯಲ್ಲಿ ಕೆಲಸ ಮಾಡುವ ಅವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ.


ಪ್ರೀತಿಯಿಂದ ಗಿಡಮೂಲಿಕೆ ಕೊಟ್ಟು ಸಾವಿರಾರು ಕುಟುಂಬದ ಸದಸ್ಯರ ಕಣ್ಣೀರು ಒರೆಸಿದ ಶೇಷನಾಯಕರನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳು ಅವರನ್ನ ಗುರುತಿಸಿ ಗೌರವಿಸಬೇಕಿತ್ತು. ಇನ್ನು ಮುಂದಾದರೂ ಆ ಕೆಲಸವಾಗಲಿ.


- ತೀರ್ಥಹಳ್ಳಿ ಪುರುಷೋತ್ತಮ್.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top