ಅವನ ವೇಷ ಭೂಷಣ ಹಠ ಯೋಗಿಯಂತೆ. ಗುಪ್ತಾಂಗಕ್ಕೆ ಸರಪಳಿ ಬೀಗ! ಕೈಯಲ್ಲಿ ಭಿಕ್ಷಾ ಪಾತ್ರೆ. ಸಂಗಮದ ಬಳಿ ಸಿಕ್ಕಿದ. 20 ರೂ ಕೊಟ್ಟೆ. ಅದರ ಒಂದು ಸಣ್ಣ ತುಂಡು ಚಿವುಟಿ ತೆಗೆದ. ನಿನ್ನ ಪರ್ಸ್ ಓಪನ್ ಮಾಡು ಎಂದ.
ನಾನು ಹಣ ಇರಿಸಿದ್ದು ಮೊಬೈಲ್ ಕವರ್ ನಲ್ಲಿ. ಯೋಗಿಗಳು ಕೊಡುವ ವಸ್ತುವಿಗೆ ಶಕ್ತಿ ಇದೆ ಎಂಬ ನಂಬಿಕೆಯಲ್ಲಿ ಮೊಬೈಲ್ ಕವರ್ ತೆರೆದೆ.
"ಅದರಲ್ಲಿ ಇರುವ ಎಲ್ಲಾ ಹಣ ತೆಗೆದು ಅಂಗೈಯಲ್ಲಿ ಇರಿಸು" ಎಂದ. ನಾನು ಹಾಗೇ ಮಾಡಿದೆ.
ನೋಟಿನ ತುಂಡನ್ನು ನನ್ನ ಮೊಬೈಲ್ ಕವರ್ ನೊಳಗೆ ಹಾಕಿದ. ನೋಡುತ್ತಿದ್ದಂತೆ ಅವನ ಬೆರಳಿನ ಎಡೆಯಿಂದ ಗಂಗಾ ಜಲ!!!
ಹಣ ಹಿಡಿದ ಕೈಯನ್ನು ಹಿಡಿದು ಅವನ ಹಣೆಗೆ ತಾಗಿಸಿದ. ಜಟೆ ಇಂದ ಹರಿದು ಬಂದಳು ಗಂಗೆ!!
ಗಂಗಾ ದರ್ಶನ ಮಾಡಿಸಿದ ಯೋಗಿ ನನ್ನ ಕೈಯಲ್ಲಿದ್ದ ನೋಟಿನ ಅಟ್ಟಿಯನ್ನು ಹಿಡಿದು ಎಳೆದು ಅವನ ಭಿಕ್ಷಾ ಪಾತ್ರೆಗೆ ಹಾಕುವ ಪ್ರಯತ್ನ ಮಾಡಿದ.
ಬಳಿಯಲ್ಲಿ ನಿಂತು ನೋಡುತ್ತಿದ್ದ ಗೆಳೆಯ ಕೃಷ್ಣ ಶೆಟ್ಟಿ ತಾರೆಮಾರ್ ಅವನಿಗಿಂತಲೂ ಚಾಲು. ಅವನ ಕೈಯಿಂದ ತತ್‌ಕ್ಷಣ ಹಣವನ್ನು ಕೆಳಗೆ ಬೀಳಿಸಿ ಹೆಕ್ಕಿ ಕೊಂಡರು.
ಜಾದುಗಾರನಿಂದ 2000 ರೂ ಉಳಿಸಿ ಜಾದು ಮಾಡಿದರು. ಅಂದ ಹಾಗೆ ಈ ಫೋಟೋ ತೆಗೆದವರು ಪ್ರದೀಪ್ ಕುಮಾರ್ ಕಲ್ಕೂರರು.
- ಕದ್ರಿ ನವನೀತ ಶೆಟ್ಟಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ