ಮೂಡುಬಿದಿರೆ: ಪ್ರಸ್ತುತ ಪ್ರಯಾಗರಾಜ್ ದಲ್ಲಿ ಪ್ರಾರಂಭಗೊಂಡಿರುವುದು 12 ವರ್ಷಕ್ಕೊಮ್ಮೆ ನಡೆಯೋ ಕುಂಭಮೇಳವಲ್ಲ, ಶತಮಾನಗಳಿಗೊಮ್ಮೆ ಘಟಿಸೋ ದಿವ್ಯಾದ್ಭುತ ಪುಣ್ಯಸ್ನಾನದ ಮಹಾಕುಂಭಮೇಳ.
ಜನವರಿ 13ರ ಪುಷ್ಯ ಹುಣ್ಣಿಮೆಯಂದು ಇಂತಹದ್ದೊಂದು ಮಹಾ ಅದ್ಭುತ ಬರೋಬ್ಬರಿ 144 ವರ್ಷಗಳ ನಂತರ ಚಾಲನೆ ದೊರೆತಿದೆ.
ಈ ಪರಮ ಪಾವನ ಪುಣ್ಯಭೂಮಿಗೆ ಪ್ರವೇಶಿಸುವ ಪ್ರಮುಖ ಮುಖದ್ವಾರಗಳಾದ ಗಂಗಾ ದ್ವಾರ, ಯಮುನಾ ದ್ವಾರ ಹಾಗೂ ಸರಸ್ವತಿ ದ್ವಾರಗಳಿಗೆ ದೀಪಾಲಂಕಾರ ಮಾಡುವ ಸದವಕಾಶ ದೇಶಾದ್ಯಂತ ದೀಪಾಲಂಕಾರದ ಮೂಲಕವೇ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಸಂಸ್ಥೆಗೆ ದೊರೆತಿದೆ.
ಈ ಹಿಂದೆ ಅಯೋಧ್ಯೆ, ಬೆಳಗಾವಿಯ ಸುವರ್ಣ ವಿಧಾನಸೌಧ, ಬಿರ್ಲಾ ಮಂದಿರ, ಧರ್ಮಪುರದ ಜಿನ್ ಮಂದಿರ ಹಾಗೂ ಇನ್ನೂ ನೂರಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ಶಾಶ್ವತ ದೀಪಾಲಂಕಾರದ ಮೂಲಕ ತನ್ನ ಕೈಚಳಕ ತೋರಿಸಿ ಜನಮನ್ನಣೆಗೆ ಪಾತ್ರವಾದ ಲೆಕ್ಸಾ ಲೈಟಿಂಗ್ ಸಂಸ್ಥೆಯ ಹಿರಿಮೆಗೆ ಪ್ರಸ್ತುತ ಪ್ರಯಾಗ್ ರಾಜ್ ನಲ್ಲೂ ದೀಪಾಲಂಕಾರದ ಅವಕಾಶ ದೊರಕಿರುವುದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ