ಯಕ್ಷಗಾನವು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಇಂತಹ ಒಂದು ಶ್ರೀಮಂತ ಕಲೆಯಲ್ಲಿ ಮಿಂಚುತ್ತಿರುವ ಭಾಗವತರು ಪ್ರಶಾಂತ್.
ಉಡುಪಿ ಜಿಲ್ಲೆಯ ಕೋಟ ಪಡುಕರೆಯಲ್ಲಿ 17.05.1986 ರಂದು ತಿಮ್ಮ ಪೂಜಾರಿ ಹಾಗೂ ಗುಲಾಬಿ ಇವರ ಮಗನಾಗಿ ಜನನ. 10ನೇ ತರಗತಿವರೆಗೆ ವಿದ್ಯಾಭ್ಯಾಸ. ಯಕ್ಷಗಾನ ಕಲೆಯ ಮೇಲೆ ಹಾಗೂ ಪೌರಾಣಿಕ ಕಥೆಯ ತಿಳಿದುಕೊಳ್ಳಲು ಕಲೆಯ ಮೇಲೆ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದೆ ಎಂದು ಹೇಳುತ್ತಾರೆ ಪ್ರಶಾಂತ್.
ಯಕ್ಷಗಾನ ಗುರುಗಳು:-
ಪ್ರಸಾದ್ ಕುಮಾರ್ ಮೊಗೆಬೆಟ್ಟು.
ಲಂಬೋದರ್ ಹೆಗಡೆ ನಿಟ್ಟೂರ್.
ದೇವದಾಸ್ ರಾವ್ ಕೂಡ್ಲಿ.
ವಿದ್ವಾನ್ ಗಣಪತಿ ಭಟ್.
ಕೇಶವ್ ಆಚಾರ್ ನೀಲಾವರ.
ಮಹಾಬಲ ಭಂಡಾರಿ ಕೋಡಿ.
ಕಲ್ಯಾಣಿ, ಬಹುದಾರಿ, ಸಾವೇರಿ ಇವರ ನೆಚ್ಚಿನ ರಾಗಗಳು.
ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ನೆಚ್ಚಿನ ಭಾಗವತರು.
ಜನಾರ್ಧನ್ ಆಚಾರ್ ಹಳ್ಳಾಡಿ ಹಾಗೂ ರಾಘವೇಂದ್ರ ಹೆಗಡೆ ಯಲ್ಲಾಪುರ ನೆಚ್ಚಿನ ಚೆಂಡೆ ಹಾಗೂ ಮದ್ದಲೆವಾದಕರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಹಳ ಚೆನ್ನಾಗಿದೆ. ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತಿದೆ. ಇತ್ತೀಚಿನ ಹೊಸ ಪ್ರಸಂಗಗಳು ಯಕ್ಷಗಾನ ಚೌಕಟ್ಟು ಮೀರಿ ಪ್ರದರ್ಶನಗೊಳ್ಳುತ್ತಿವೆ. ಯುವ ಕಲಾವಿದರು ಹೊಸತನದೊಂದಿಗೆ ಪರಂಪರೆಯನ್ನು ಉಳಿಸುವಲ್ಲಿ ಮನಸ್ಸು ಮಾಡಬೇಕು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರು ಪ್ರಸಂಗದ ಬಗ್ಗೆ ಹಾಗೂ ಪಾತ್ರದ ಬಗ್ಗೆ ಪೂರ್ತಿ ಗೊತ್ತಿಲ್ಲದೇ ಅಭಿಪ್ರಾಯ ವ್ಯಕ್ತಪಡಿಸುಹುದು. ಪ್ರೇಕ್ಷಕ ವರ್ಗ ಯಾವುದೇ ಒಬ್ಬ ಕಲಾವಿದನ ಅಭಿಮಾನಿ ಆಗಿರದೆ ಯಕ್ಷಗಾನ ಕಲೆಯ ಅಭಿಮಾನಿಯಾದರೆ ಯಕ್ಷಗಾನ ಬೆಳವಣಿಗೆಗೆ ಪೂರಕ.
ಗುರುಗಳಾದ ಪ್ರಸಾದ್ ಮೊಗೆಬೆಟ್ಟು ಬಳಿ ಪೂರ್ತಿ ಯಕ್ಷಗಾನ ಪದ್ಯ ಹಾಗೂ ಪ್ರಸಂಗದ ಬಗ್ಗೆ ಕಲಿಯುವ ಹಂಬಲ ಇದುವೇ ನನ್ನ ಮುಂದಿನ ಯೋಜನೆ ಎಂದು ಹೇಳುತ್ತಾರೆ ಪ್ರಶಾಂತ್.
ಪ್ರಸಾದ್ ಮೊಗೆಬೆಟ್ಟು ಗುರುತನದ ನಮ್ಮ ಸಂಘವಾದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಹಾಗೂ ಇದರ ಅಂಗ ಸಂಸ್ಥೆ ಕಾಳಿಂಗ ಗಾನ ಪೀಠ ಮತ್ತು ಯಶಸ್ವೀ ಕಲಾರಂಗ ಕೊಮೆ ತೆಕ್ಕಟ್ಟೆ ಸಂಘದಲ್ಲಿ ತಿರುಗಾಟ ಮಾಡಿದ ಅನುಭವ ಯಕ್ಷಗಾನ ರಂಗದಲ್ಲಿ ಒಟ್ಟು 8 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಭಜನೆ, ಹಾಡುಗಾರಿಕೆ, ಶನಿಕಥಾ ಶ್ರವಣ ಇವರ ಹವ್ಯಾಸಗಳು.
13.೦5.2021ರಂದು ಪ್ರಶಾಂತ್ ಅವರು ವಿದ್ಯಾಶ್ರೀ ಅವರನ್ನು ಮದುವೆಯಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ. ಕಲಿಕೆಗೆ ರಂಗದಲ್ಲಿ ಅವಕಾಶ ಮಾಡಿಕೊಟ್ಟ ಸ್ಥಳೀಯ ಹವ್ಯಾಸಿ ಸಂಘಗಳಾದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ, ಮಹಾಲಿಂಗೇಶ್ವರ ಕಲಾರಂಗ ಕೇದೂರು, ಲಕ್ಷ್ಮಿ ಜನಾರ್ಧನ ಯಕ್ಷಗಾನ ಸಂಘ ದೊಂಡೆರಂಗಡಿ, ಶ್ರೀ ಕುಲ ಮಹಾಶ್ರೀ ಯಕ್ಷಗಾನ ಸಂಘ ಬೆಣ್ಣೆಕುದ್ರು, ಶ್ರೀ ರಾಮ ಪ್ರಸಾದಿತ ಯಕ್ಷಗಾನ ಸಂಘ ಕೋಡಿ ಕನ್ಯಾಣ, ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಈ ಎಲ್ಲಾ ಸಂಘಗಳಿಗೆ ಚಿರಋಣಿ.
ತಂದೆ, ತಾಯಿ ಪತ್ನಿಯ ಪ್ರೋತ್ಸಾಹ, ಊರವರ, ಗುರು-ಹಿರಿಯ ಕಲಾವಿದರ ಮಾರ್ಗದರ್ಶನ ಸಹಕಾರ ಹಾಗೂ ಪ್ರೋತ್ಸಾಹವು ನನ್ನನ್ನು ಈ ಕ್ಷೇತ್ರದಲ್ಲಿ ಸತತವಾಗಿ ತೊಡಗಿಸಿಕೊಳ್ಳಲು ನೆರವಾಗಿದೆ ಎಂದು ಹೇಳುತ್ತಾರೆ ಪ್ರಶಾಂತ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ