ನಾನು ಶಾಲೆಗೆ ಹೇೂಗುವ ಸಂದರ್ಭದಲ್ಲಿ ಇಂತಹ ರಜೆಗಳನ್ನು ಅನುಭವಿಸಿದ್ದೇನೆ ಮನಸ್ಸಿನೊಳಗೆ ಆನಂದವನ್ನು ಪಟ್ಟಿದ್ದೇನೆ. ಇದು ಬೇರೆಯವರ ಮುಂದೆ ತೇೂಡಿಕೊಳ್ಳಲಾರದ ಸಂತಸವೂ ಹೌದು. ಈಗ ನನ್ನ ಮನಸ್ಸಿನಲ್ಲಿ ಹೊಸದೊಂದು ಚಿಂತನೆ ಮೂಡಿದೆ. ಯಾಕೆಂದರೆ ಈ ಎಲ್ಲಾ ರಜೆಯನ್ನು ಅನುಭವಿಸುವ ಅವಕಾಶದಿಂದ ವಿಮುಕ್ತಿ ಪಡೆದ ಕಾರಣವೂ ಇರಬಹುದು.
ಬಹುತೇಕ ಸಂದರ್ಭದಲ್ಲಿ ರಾಷ್ಟ್ರ ರಾಜ್ಯ ಮಟ್ಟದ ಧೀಮಂತ ರಾಜಕಾರಣಿಗಳು ನಿಧನರಾದಾಗ ಸರ್ವೇಸಾಮಾನ್ಯವಾಗಿ ಸಂತಾಪ ಸೂಚಕವಾಗಿ ಸರಕಾರಿ ರಜೆ ಘೇೂಷಣೆ ಮಾಡುತ್ತಾರೆ. ಈ ರಜಾ ಶಾಲಾ ಕಾಲೇಜುಗಳಿಗೂ ಅನ್ವಯಿಸುತ್ತದೆ. ಸರಕಾರಿ ನೌಕರರಂತೂ ಮನಸ್ಸಿನೊಳಗೆ ಅಯ್ಯಬ್ಬ ಒಂದು ರಜೆ ಸಿಕ್ಕಿತಲ್ಲಾ ಅನ್ನುವ ಒಳ ಮನಸ್ಸಿನಲ್ಲಿ ಸುಖ ಪಟ್ಟರೆ ಶಾಲಾ ಕಾಲೇಜಿನ ಮಕ್ಕಳಂತೂ ಸಂಭ್ರಮದಿಂದ ನಸು ನಗ್ಗುತ್ತಾ ಮನೆಯತ್ತೊ ಆಟದ ಮೈದಾನದ ಕಡೆಗೆ ನಡೆಯುತ್ತಾರೆ. ಶಿಕ್ಷಕರು ಅಷ್ಟೇ ರಜೆ ಸಿಕ್ಕಿದ ಸಂತಸದ ಒಳ ಮನಸ್ಸಿನಲ್ಲಿ ಮನೆಯತ್ತ ದಾಪು ಕಾಲು ಹಾಕುತ್ತಾರೆ. ನಾನು ಕೂಡಾ ಸಂಭಾವಿತನಲ್ಲ. ಇದೇ ಮನಸ್ಸಿನಲ್ಲಿ ದಾಪು ಕಾಲು ಹಾಕಿದ್ದು ನೆನಪಿಸಿಕೊಳ್ಳಲೇಬೇಕು.
ಒಂದು ವಾರದ ಶೇೂಕಾಚರಣೆಯ ಪ್ರಯುಕ್ತ ಸರಕಾರಿ ಕಾರ್ಯಕ್ರಮಗಳೆಲ್ಲವೂ ಅಧಿಕೃತವಾಗಿ ರದ್ದಾಗಿರುತ್ತದೆ. ಒಂದು ವೇಳೆ ಕಾರ್ಯಕ್ರಮ ನಡೆಸಿದರೆ ಸರ್ಕಾರದಿಂದ ನೇೂಟೀಸ್ ಬರಬಹುದು. ಅಂದರೆ ಪ್ರಧಾನ ಮಂತ್ರಿ ಹಿಡಿದು ಮುಖ್ಯಮಂತ್ರಿ ತನಕ ಸಂಸದರಿಂದ ಹಿಡಿದು ಶಾಸಕರ ತನಕ ಯಾವುದೇ ಅಧಿಕಾರಿಗಳು ಉದ್ಘಾಟನೆ ಉತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ. ಹಾಗಂತ ಖಾಸಗಿ ಕಾರ್ಯಕ್ರಮಕ್ಕೇನು ತೊಂದರೆ ಇಲ್ಲ. ಆದರೆ ನಮ್ಮ ಜನಪ್ರತಿನಿಧಿಗಳು ಅಧಿಕಾರಿಗಳು ಸರಕಾರಿ ವಾಹನ ಬಳಸಿಕೊಂಡು ಖಾಸಗಿ ಕಾರ್ಯಕ್ರಮಕ್ಕೆ ಹೇೂಗುವುದು ಸರಿ ಅಲ್ಲ. ಇದು ಈ ಶೇೂಕಾಚರಣೆಯ ನೀತಿ ಸಂಹಿತೆಗೆ ಅಪವಾದವೇ ಸರಿ. ಇಲ್ಲಿ ಕೂಡಾ ರಜೆ ಘೇೂಷಣೆ ಮಾಡಿದ ಸರ್ಕಾರ ಸ್ವಷ್ಟನೆ ಮಾಡಬೇಕಾದ ಸಂಗತಿಯೂ ಹೌದು.
ಇನ್ನು ನಮ್ಮ ಮುಂದಿರುವ ಪ್ರಮುಖವಾದ ಸಂತಾಪದ ಶೇೂಕಾಚರಣೆಯ ರಜೆಯ ಪ್ರಮುಖ ಚಿಂತನೆ ಅಂದರೆ ಈ ಎಲ್ಲವನ್ನೂ ಬದಿಗೆ ಇಟ್ಟು ಈ ನಿಧನರಾದ ಧೀಮಂತ ನಾಯಕರ ಬದುಕು ಸಾಧನೆಗಳನ್ನು ತಮ್ಮ ಸರಕಾರಿ ಸಂಸ್ಥೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡರೇ ಯೇೂಗ್ಯವಲ್ಲವೇ?ಇದರಿದಾಗಿ ನಿಧನರಾದರ ಕುರಿತಾಗಿ ಜನ ಸಾಮಾನ್ಯರಿಗೂ ವಿದ್ಯಾರ್ಥಿಗಳಿಗೂ ಹೆಚ್ಚಿನ ಪರಿಚಯವುಾ ಆಗುತ್ತದೆ. ಇಲ್ಲದೇ ಹೇೂದರೆ ಸತ್ತವರ ಹೆಸರಿನ ರಜೆ ಮಾತ್ರ ಸ್ವಲ್ಪ ದಿನ ನೆನಪು ಉಳಿಯುತ್ತದೆ ಬಿಟ್ಟರೆ ನಿಧನರಾದವರ ಹೆಸರು ಕೂಡಾ ಮರೆತು ಹೇೂಗುವ ಪರಿಸ್ಥಿತಿ ಇಂದಿನ ರಜೆ ಸಂತಾಪ ಶೇೂಕಾಚರಣೆಯ ಭರಾಟೆಯಲ್ಲಿ ಅನ್ನುವುದು ವಾಸ್ತವಿಕ ಸತ್ಯ.
ಆದರೆ ಬಹಿರಂಗವಾಗಿ ಹೇಳುವುದು ಕಹಿ ಸತ್ಯ. ಹಾಗಾಗಿಯೇ ನನ್ನ ಇತಿ ಮಿತಿಗಳನ್ನು ಮೊದಲೇ ತೇೂಡಿಕೊಂಡಿದ್ದು. ಒಮ್ಮೆ ಒಬ್ಬರು ಕಾಲೇಜಿನ ಮುಖ್ಯಸ್ಥರು ಈ ರಜೆ ಕೊಡುವ ಸಂದರ್ಭದಲ್ಲಿ ಸ್ವಲ್ಪ ಚೌಕಾಸಿ ಮಾಡಿದ್ದನ್ನು ನೇೂಡಿ ಹೊರಗಿನಿಂದ ಅವರಿಗೆ ಬೈದುಕೊಂಡಿದ್ದೆ ಜಾಸ್ತಿ!
ಈ ಸಂದರ್ಭದಲ್ಲಿ ರಜೆಕೊಡದೇ ಕೆಲಸ ಮುಂದುವರಿಸಿ ಅನ್ನುವ ಮಾತನ್ನು ಸಾಯುವ ಮೊದಲೇ ಸಂದೇಶದ ವಿಲ್ ಪತ್ರ ಬರೆದ ಯಾರಾದರೂ ನಮ್ಮ ನಾಯಕರುಗಳು ಇದ್ದರೆ ದಯವಿಟ್ಟು ತಿಳಿಸಿ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರಜೆ ಕೊಡದೇ ಇರುವ ಸಂಪ್ರದಾಯವಿದೆಯೇ ಅನ್ನುವ ಕುರಿತಾಗಿ ದೃಷ್ಟಿ ಹಾಯಿಸಬೇಕಾದ ಅನಿವಾರ್ಯತೆಯೂ ಇದೆ. ಕನಿಷ್ಠ ಪಕ್ಷ ನಿಧನರಾದ ಸಾಧಕ ವ್ಯಕ್ತಿಗಳ ಕುರಿತಾಗಿ ಮಾಹಿತಿ ಪರಿಚಯ ನೀಡಿ ರಜೆಯಾದರೂ ನೀಡಲಿ ಅನ್ನುವುದು ನನ್ನ ಕೇೂರಿಕೆ ಅಷ್ಟೇ. ಇದು ಅಗಲಿದ ಮಹಾನ್ ಚೇತನಗಳಿಗೆ ಅರ್ಪಿಸುವ ಸಂತಾಪದ ನುಡಿ ನಮನಗಳು.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ