ಯಲ್ಲಾಪುರ ಬಳಿ ತರಕಾರಿ ಲಾರಿ ಪಲ್ಟಿ: ಹಾವೇರಿ ಜಿಲ್ಲೆಯ 9 ಮಂದಿ ಸಾವು

Upayuktha
0


ಯಲ್ಲಾಪುರ: ಬುಧವಾರ ಬೆಳ್ಳ೦ಬೆಳಗ್ಗೆ ಭೀಕರ ಅಪಘಾತ ಸ೦ಭವಿಸಿದ್ದು, ತರಕಾರಿ ತುಂಬಿದ ಲಾರಿ ಪಲ್ಮಿಯಾಗಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರೆಬೈಲ್‌ ಘಟ್ಟದ ಕಾಗೇರಿ ಪೆಟ್ರೋಲ್‌ ಬ೦ಕ್‌ ಬಳಿ ಬುಧವಾರ ಮುಂಜಾನೆ ಸ೦ಭವಿಸಿದೆ.


ತರಕಾರಿ ತು೦ಬಿದ್ದ ಲಾರಿಯಲ್ಲಿ 25 ಜನ ಪ್ರಯಾಣಿಸುತ್ತಿದ್ದರು. ಮೃತರು ಹಾವೇರಿ ಜಿಲ್ಲೆಯವರು ಎಂದು ಮೂಲಗಳು ತಿಳಿಸಿವೆ.


ಮೃತಪಟ್ಟವರನ್ನು ಫಯಾಜ್ ಇಮಾಮ್ ಸಾಬ್ ಜಮಖಂಡಿ (45), ವಾಸೀಮ್ ವಿರುಲ್ಲಾ ಮುಡಗೇರಿ (35), ಇಜಾಜ್ ಮುಸ್ತಕಾ ಮುಲ್ಲಾ (20), ಸಾದೀಕ್ ಭಾಷ್ ಫಾರಣ್ (30), ಗುಲಾಮ್ ಉಷೇನ್ ಜವಳಿ (40), ಇಮ್ಮಿಯಾಜ್ ಮಮಜಾಪ‌ರ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ( 25), ಅಸ್ಲಂ ಬಾಬುಲಿ ಬೆಣ್ಣೆ (24) ಎಂದು ಗುರುತಿಸಲಾಗಿದೆ.


ಹಾವೇರಿ ಜಿಲ್ಲೆ ಸವಣೂರಿನಿಂದ ಕುಮಟಾಗೆ ಲಾರಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿದ್ದಾರೆ.


ಹಣ್ಣು ತರಕಾರಿ ತು೦ಬಿ ವ್ಯಾಪಾರಸ್ಥರೊಂದಿಗೆ ಈ ಲಾರಿ ಸ೦ತೆಗೆ ತೆರಳುತ್ತಿತ್ತು. ಲಾರಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವ್ಯಾಪಾರಸ್ಮರಿದ್ದರು. ಯಲ್ಲಾಪುರದ ಅರೆಬೈಲ್‌ ಘಟ್ಟದ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕ೦ದಕಕ್ಕೆ ಉರುಳಿದೆ.


ಗಾಯಗೊಂಡವರನ್ನು ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಯಲ್ಲಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top