ಜ. 19ರಂದು ರಾಗರತ್ನ ಮಾಲಿಕೆ- 33ನೇ ಸಂಗೀತ ಕಛೇರಿ

Upayuktha
0


ಉಡುಪಿ: ರಾಗ ಧನ ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಾಲಯ ಪರ್ಕಳ ಇವುಗಳ ಜಂಟಿ ಆಶ್ರಯದಲ್ಲಿ ರಾಗರತ್ನ ಮಾಲಿಕೆ- 33ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಜ. 19ರಂದು ನಡೆಯಲಿದೆ.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉದ್ಯಾವರ ಜಯಂತಿ ಮಾಧವ ಆಚಾರ್ಯ, ಉಡುಪಿ ಇವರ ಸಹಕಾರದೊಂದಿಗೆ ಪರ್ಕಳ ಕುಕ್ಕುದಕಟ್ಟೆಯಲ್ಲಿರುವ ಸರಿಗಮ ಭಾರತಿ ಸಂಗೀತ ವಿದ್ಯಾಾಲಯದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಪರಾಹ್ನ 2.15ರಿಂದ 3 ಗಂಟೆ ವರೆಗೆ ಅಥರ್ವ ದೀಪರಾಜ ಹೆಗಡೆ ಅವರಿಂದ ಹಾಡುಗಾರಿಕೆ, ಅನುಶ್ರೀ ಮಳಿ ಅವರಿಂದ ವಯೊಲಿನ್, ಅದ್ವೈತ ಕೃಷ್ಣ ಬಿ. ಅವರಿಂದ ಮೃದಂಗ ವಾದನ ನಡೆಯಲಿದೆ.


ಅಪರಾಹ್ನ 3.30ರಿಂದ 6 ಗಂಟೆ ವರೆಗೆ ಶುಭಾ ಶಿವಕುಮಾರ್ ಅಳಿಕೆ ಅವರಿಂದ ಸಂಗೀತ ಕಛೇರಿ, ವಯೊಲಿನ್‌ನಲ್ಲಿ ವಿಶ್ವಾಸ್ ಕೃಷ್ಣ ಮಂಗಳೂರು, ಮೃದಂಗದಲ್ಲಿ ಪನ್ನಗ ಶರ್ಮನ್ ಶೃಂಗೇರಿ ಸಹಕರಿಸಲಿದ್ದಾರೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top