ಭಾರತೀಯ ಸಾಹಿತ್ಯದಲ್ಲಿ ಕೊಂಕಣಿ ಪ್ರಾಮುಖ್ಯತೆ ಉಳಿಸಿಕೊಂಡಿದೆ: ಕವಿ ಆಂಡ್ರೂ ಎಲ್. ಡಿ. ಕುನ್ಹಾ

Upayuktha
0





ಉಡುಪಿ: ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಕವಿತಾ ಟ್ರಸ್ಟ್ (ರಿ.), ಮಂಗಳೂರು ಇವರ ಸಹಯೋಗದಲ್ಲಿ ಉಡುಪಿಯ ಸಾಸ್ತಾನದಲ್ಲಿ ಭಾನುವಾರ  'ಯುವ ಸಾಹಿತಿʼ ಕವಿಗೋಷ್ಠಿ ನಡೆಯಿತು. 


ಯುವ ಕವಿಗೋಷ್ಠಿಯಲ್ಲಿ ಗೋವಾದ ಅಮೆಯ್ ನಾಯ್ಕ್, ಅಂತರಾ ಭಿಡೆ, ಸುಪ್ರಿಯಾ ಕಾಣಕೋಣಕರ್ ಮತ್ತು ಕರ್ನಾಟಕದ ವೆಂಕಟೇಶ್ ನಾಯಕ್ ಸೇರಿದಂತೆ ಕೊಂಕಣಿಯ ಯುವ ಕವಿಗಳು ಭಾಗವಹಿಸಿದರು. ಕೊಂಕಣಿಯ ಹಿರಿಯ ಕವಿ ಆಂಡ್ರೂ ಎಲ್. ಡಿ. ಕುನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಇಂದಿನ ಕೊಂಕಣಿ ಕವಿತೆಗಳು ಸಾಮಾಜಿಕ ಸಮಸ್ಯೆಗಳನ್ನು ಸ್ಪರ್ಶಿಸುತ್ತಿದ್ದು, ಭಾರತೀಯ ಸಾಹಿತ್ಯದಲ್ಲಿ ಕೊಂಕಣಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ, ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಲಹಾ ಸಮಿತಿಯ ಸಂಚಾಲಕ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. 


ಫೆಲ್ಸಿ ಲೋಬೊ ಸ್ವಾಗತಿಸಿದರು, ಹಾಗೂ ಸಲಹಾ ಮಂಡಳಿಯ ಸದಸ್ಯ ಸ್ಟಾನಿ ಬೆಳಾ ಧನ್ಯವಾದ ಸಲ್ಲಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪೂರ್ಣನಂದ ಚಾರಿ, ಕವಿತಾ ಟ್ರಸ್ಟ್ನ ಅಧ್ಯಕ್ಷ ಕಿಶೂ ಬಾರ್ಕೂರು, ಕಾರ್ಯದರ್ಶಿ ಎವ್ರೆಲ್ ರೊಡ್ರಿಗಸ್ ಮತ್ತು ಇತರ ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top