ಕಾಮರ್ಸ್ ಒಲಿಂಪಿಯಾಡ್ 2025: ದೀಪೇಶ್ ದೀಪಕ್ ಶೆಣೈಗೆ 12ನೇ ರ‍್ಯಾಂಕ್

Upayuktha
0

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯವರ ಕಾಮರ್ಸ್ ಒಲಿಂಪಿಯಾಡ್ 2025 ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ  ದೇಶಕ್ಕೆ 12ನೇ ರ‍್ಯಾಂಕ್



ಉಡುಪಿ: ಪದ್ಮಶ್ರೀ ಡಾ ಟಿ. ಎಂ. ಎ . ಪೈ ರಿಂದ ಸ್ಥಾಪಿತವಾಗಿ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಶನ್ (AGE) ಪ್ರತಿಷ್ಠಿತ ಶಿಕ್ಷಣ  ಸಂಸ್ಥೆಗಳ ಘಟಕ ಟಿ ಎ ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್, ಕುಂಜಿಬೆಟ್ಟು, ಉಡುಪಿಯ  9ನೇ ತರಗತಿಯ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಯವರು, ಪ್ರತಿಷ್ಠಿತ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯವರು  (ICAI) ನಡೆಸಿದ ಕಾಮರ್ಸ್ ಒಲಿಂಪಿಯಾಡ್ 2025 ಸ್ಪರ್ಧೆಯಲ್ಲಿ ಅಖಿಲ ಭಾರತೀಯ 12ನೇ ರ‍್ಯಾಂಕ್ ಪಡೆದು ಅತ್ಯುನ್ನತ ಸಾಧನೆ ಮಾಡಿದ್ದಾರೆ.


ಈ ಸ್ಪರ್ಧೆಯನ್ನು ಸಂಸತ್ ಅಧಿನಿಯಮದ ಮೂಲಕ ಸ್ಥಾಪಿತವಾದ ಕಾನೂನುಬದ್ಧ ಸಂಸ್ಥೆ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆ, 1949 (ಕಾಯ್ದೆ ಸಂಖ್ಯೆ XXXVIII of 1949) ಅಡಿಯಲ್ಲಿ ಸ್ಥಾಪಿತವಾದ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ಯ ಉದ್ಯೋಗ ಮಾರ್ಗದರ್ಶನ ಸಮಿತಿ (CCC) ಆಯೋಜಿಸಿತ್ತು.


ಈ ಸಾಧನೆಯ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ  ವಿನೋದ ಶೆಟ್ಟಿ (+91 94816 13116) ಯವರು, ಶಾಲಾ ಆಡಳಿತ ಮಂಡಳಿ, ಮಣಿಪಾಲದ AGE ಶಿಕ್ಷಣ ಸಂಸ್ಥೆಗಳು, ಶಾಲಾ ಪೋಷಕರ ಮತ್ತು ಶಿಕ್ಷಕರ ಸಂಘ (PTA), ಹಳೆ ವಿದ್ಯಾರ್ಥಿ ಸಂಘಟನೆ, ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ದೀಪೇಶ್‌ಗೆ ಹೃದಯಪೂರ್ವಕ ಅಭಿನಂದನೆಗಳು ತಿಳಿಸಿ, ಭವಿಷ್ಯದ ಯಶಸ್ಸಿಗೆ ಶುಭ ಹಾರೈಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top