ಮಂಗಳೂರು: ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳಿಗೆ ಪೂರಕ ವಾತಾವರಣ ಲಭ್ಯವಾದಾಗ ಪರಿಪೂರ್ಣ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ ಎಂದು ಮಂಗಳೂರಿನ ಅರೋಹಣಂ ಸ್ಕೂಲ್ ಆಫ್ ಮ್ಯೂಸಿಕ್‍ನ ಗುರು ಹಾಗೂ ಸಂಗೀತ ಕಲಾವಿದ ಡಾ. ವಿದ್ವಾನ್ ಅನೀಶ್ ವಿ. ಭಟ್ ನುಡಿದರು.
ಅವರು ಮಣಿಕೃಷ್ಣ ಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಇವರು ಸುರತ್ಕಲ್‍ನ ಮೇಲು ಸೇತುವೆಯ ತಳಭಾಗದ ಎಂ.ಸಿ.ಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸುತ್ತಿರುವ ಉದಯರಾಗ ಕಾರ್ಯಕ್ರಮ ಸರಣಿಯ ಉದಯರಾಗ–58ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಡಾ. ವಿದ್ವಾನ್ ಅನೀಶ್ ವಿ. ಭಟ್ ಅವರ ಶಿಷ್ಯೆಯರಾದ ಶ್ರೀವರದಾ ಪಟ್ಟಾಜೆ, ಸುಮನ ಕೆ., ಚಿನ್ಮಯಿ ವಿ. ಭಟ್, ಹವ್ಯಶ್ರೀ ಕೆ.ಟಿ., ರಕ್ಷ ಎ.ಆರ್. ಅವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು. ವಯಲಿನ್‍ನಲ್ಲಿ ಸುನಾದ ಪಿ.ಎಸ್. ಹಾಗೂ ಮೃದಂಗದಲ್ಲಿಅವಿನಾಶ್ ಬಿ.ಸ ಹಕರಿಸಿದರು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಸ್ವಾಗತಿಸಿದರು. ಸುರತ್ಕಲ್ ರೋಟರಿ ಕ್ಲಬ್‍ನ ಪ್ರೊ. ಪಿ ಕೃಷ್ಣಮೂರ್ತಿ ವಂದಿಸಿದರು.
ಸುರತ್ಕಲ್ ಗೋವಿಂದದಾಸ ಪದವಿ ಪೂರ್ವಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಭಟ್‍ಎಸ್.ಜಿ., ಸುರತ್ಕಲ್ ಇನ್ನರ್ ವೀಲ್‍ಕ್ಲಬ್‍ನ ನಿಕಟ ಪೂರ್ವ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್, ನಾಗರಿಕ ಸಹಾ ಸಮಿತಿಯ ಅಧ್ಯಕ್ಷ ಡಾ.ಕೆ. ರಾಜ ಮೋಹನ್‍ರಾವ್, ಸಂಯೋಜಕ ಸತೀಶ್ ಸದಾನಂದ್, ಸಚ್ಚಿದಾನಂದ ಹೊಸಬೆಟ್ಟು, ಕುಳಾಯಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಚಂದ್ರಶೇಖರ ಕೆ.ಪಿ. ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ