ಶಿವಮೊಗ್ಗ: ಶಿವಮೊಗ್ಗದ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕು. ಸಾಂಘವೀ ಆರ್ ಶಂಕರ್ ರವರಿಗೆ 2023-24 ನೇ ಸಾಲಿನ ಸ್ನಾತಕೋತ್ತರ ಮನಃಶಾಸ್ತ್ರ (M.Sc Psychology) ಅಧ್ಯಯನ ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಪ್ರಥಮ ರ‍್ಯಾಂಕ್ ಲಭ್ಯವಾಗಿದೆ. ಇದೇ ಕಾಲೇಜಿನ ಕು. ದಿವ್ಯಾ ಜಿ ಎಸ್ ಹಾಗೂ ಕು. ಪಲ್ಲವಿ ಜಿ ಎನ್ ಎಂಬ ಇಬ್ಬರು ವಿದ್ಯಾರ್ಥಿನಿಯರಿಗೆ ಇದೇ ಸಾಲಿನ ದ್ವಿತೀಯ ರ‍್ಯಾಂಕ್ ಹಂಚಿಕೆಯಾಗಿದೆ.
ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿನಿಯರು ಪ್ರಶಸ್ತಿ ಪತ್ರವನ್ನು ಪಡೆಯಲಿದ್ದಾರೆ.
ಪ್ರಥಮ ರ‍್ಯಾಂಕ್ ಪಡೆದ ಕು. ಸಾಂಘವೀ ಆರ್ ರವರು ಬೆಂಗಳೂರಿನ ಎಸ್ ವಿ ರವಿಶಂಕರ್ ಹಾಗೂ ಕೆ ಎಸ್ ವಾಣಿ ಪುತ್ರಿಯಾಗಿದ್ದು ಇದೀಗ M.Phil in Clinical Psychology ಅಧ್ಯಯನಕ್ಕೆ ದಾಖಲಾಗಿದ್ದಾರೆ.
ಕು. ದಿವ್ಯಾ ಜಿ ಎಸ್ ರವರು ಬೆಂಗಳೂರಿನ ಗಿರೀಶ್ ಜಿ ವಿ ಮತ್ತು ಸುಜಾತ ಪಿ ಎಸ್ ರವರ ಪುತ್ರಿಯಾಗಿದ್ದು ಈಗ ಮಕ್ಕಳ ಮಾರ್ಗದರ್ಶನ ಕೇಂದ್ರದಲ್ಲಿ ಮನಃಶಾಸ್ತ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕು. ಪಲ್ಲವಿ ಜಿ ಎಸ್ ರವರು ಶಿವಮೊಗ್ಗದ ಸಂಪತ್ ಕುಮಾರ್ ಹಾಗೂ ಸರೋಜ ಬಿ ಎಸ್‌ರವರ ಪುತ್ರಿಯಾಗಿದ್ದು, ಬೆಂಗಳೂರಿನಲ್ಲಿ ಶಾಲಾ ಆಪ್ತಸಮಾಲೋಚಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾನಸ ಟ್ರಸ್ಟ್‌ನ ನಿರ್ದೇಶಕಿ ಡಾ ರಜನಿ ಎ ಪೈರವರು, ಶೈಕ್ಷಣಿಕ ನಿರ್ದೇಶಕರಾದ ಡಾ ಪ್ರೀತಿ ಶಾನ್‌ಭಾಗ್, ಡಾ ವಾಮನ್ ಶಾನ್‌ಭಾಗ್ ಹಾಗೂ ಡಾ ರಾಜೇಂದ್ರ ಚೆನ್ನಿರವರು ಈ ಮೂವರು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು.
ರಾಮಚಂದ್ರ ಬಾಳಿಗ, ಕಾಲೇಜಿನ ಆಡಳಿತಾಧಿಕಾರಿ ಪ್ರೋಪೆಸರ್ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಅರ್ಚನಾ ಭಟ್ ಹಾಗೂ ಅಧ್ಯಾಪಕರೆಲ್ಲರೂ ವಿದ್ಯಾರ್ಥಿನಿಯರ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಧ್ಯಾಕಾವೇರಿಯವರು 34ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಮನಃಶಾಸ್ತ್ರದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಕು. ಸಾಂಘವಿ ಹಾಗೂ ಬಿಎ ಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಕು. ಆಲಿಯಾ ಸಾಜಿದ್ ಇಬ್ಬರೂ ವಿ.ವಿಯ ಘಟಿಕೋತ್ಸವ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂಸ್ಥೆಗೆ ಹೆಮ್ಮೆಯನ್ನು ತಂದಿದೆ ಎಂದರು. ಕು. ಸಾಂಘವಿ, ಕು. ದಿವ್ಯಾ ಹಾಗೂ ಕು. ಪಲ್ಲವಿರವರಿಗೆ ಪ್ರಾಂಶುಪಾಲರು ಅಭಿನಂದಿಸಿ ಶುಭ ಹಾರೈಸಿದರು.
ಪ್ರಥಮ ರ‍್ಯಾಂಕ್ ಪಡೆದ ಕು. ಸಾಂಘವಿಯವರು ತಾನು ಪ್ರಥಮ ರ‍್ಯಾಂಕ್ ಪಡೆದಿರುವುದಕ್ಕೆ ತನ್ನ ತಂದೆ-ತಾಯಿಯರ ಬೆಂಬಲ ಹಾಗೂ ಅಧ್ಯಾಪಕರ ಮಾರ್ಗದರ್ಶನ ಕಾರಣ ಎಂದು ತಿಳಿಸಿದರು. ಸೈಕಾಲಜಿಸ್ಟ್ ಆಗುವ ಕನಸನ್ನು ತಾನು ಪ್ರೌಢಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ಕಂಡಿದ್ದೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾನಸ ಸಂಸ್ಥೆಯ ಮೂಲಕ ದೊರಕುವ ಕ್ಲಿನಿಕಲ್ ಟ್ರೈನಿಂಗ್ ಸಂಶೋಧನಾ ಆಸಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಲೇ ತಾನು ಇದೇ ಸಂಸ್ಥೆಯಲ್ಲಿ ಎಂ ಫಿಲ್ ಕ್ಲಿನಿಕಲ್ ಸೈಕಾಲಜಿ ಓದುತ್ತಿದ್ದೇನೆ. ಮುಂದೆ ಇಲ್ಲಿಯೇ ಪಿ.ಎಚ್‌ಡಿ ಮಾಡಬೇಕೆಂದಿರುವೆ ಎಂದು ತಿಳಿಸಿದ್ದರು. ಸಾಂಘವಿ, ಪಲ್ಲವಿ ಹಾಗೂ ದಿವ್ಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎಲ್ಲರಿಗೂ ತಮ್ಮ ಧನ್ಯವಾದ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ