ಸುಸ್ಥಿರ ಅಭಿವೃದ್ಧಿ ಗುರಿಗಳು: ಸಂತ ಅಲೋಶಿಯಸ್ ಪರಿಗಣಿತ ವಿವಿಯಲ್ಲಿ 3 ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ

Upayuktha
0

ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಕ್ರಿಯೆಗಳ ಸಂಗಮ ಕುರಿತು ಚರ್ಚೆ, ಸಂವಾದ- ಜನವರಿ 15ರಿಂದ 17ರ ವರೆಗೆ




ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಹ್ಯುಮಾನಿಟೀಸ್ ವತಿಯಿಂದ ಜನವರಿ 15-17, 2025 ರಂದು ವಿವಿಯ ಎಲ್ ಎಫ್ ರಸ್ಕ್ವಿನ್ಹಾ ಸಭಾಂಗಣದಲ್ಲಿ "ಸುಸ್ಥಿರ ಅಭಿವೃದ್ಧಿ ಗುರಿಗಳು: ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಕ್ರಿಯೆಗಳ ಸಂಗಮ" ಕುರಿತು ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್, SJ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಈ ಸಮ್ಮೇಳನದಲ್ಲಿ ಕಾರ್ಯತಂತ್ರಗಳನ್ನು ಚರ್ಚೆ, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸುವ ಪಾಲುದಾರಿಕೆಗಳನ್ನು ರೂಪಿಸಲು ವಿವಿಧ ವಲಯಗಳ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರಲಾಗುತ್ತಿದೆ.


ಈ ಸಮ್ಮೇಳನದಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಕ್ರಿಯೆಗಳನ್ನು ಹೇಗೆ ಸಮನ್ವಯಗೊಳಿಸಬಹುದು ಮತ್ತು ರಾಷ್ಟ್ರೀಯ ಕಾರ್ಯತಂತ್ರಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಜೋಡಿಸಲು ಸುಸ್ಥಿರ ಅಭಿವೃದ್ಧಿಯ ಗುರಿಗಳ ಅನುಷ್ಠಾನದಲ್ಲಿ ಸಮನ್ವಯವನ್ನು ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ  ಚರ್ಚೆಗಳು ನಡೆಯಲಿವೆ.


ಈ ಸಮ್ಮೇಳನವನ್ನು ಅಲೋಶಿಯಸ್ ವಿವಿಯ ಸ್ಕೂಲ್ ಆಫ್ ಆರ್ಟ್ಸ್ & ಹ್ಯುಮಾನಿಟೀಸ್ ವಿಭಾಗದವರು ಆಯೋಜಿಸುತ್ತಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ICSSR) ನವದೆಹಲಿ ಇದರ ಪ್ರಾಯೋಜಕತ್ವದೊಂದಿಗೆ, ಕಾಲೇಜಿನ ಶೈಕ್ಷಣಿಕ ಪಾಲುದಾರರಾದ ಜಪಾನ್‌ನ ಸೋಫಿಯಾ ಯೂನಿವರ್ಸಿಟಿ, USAಯ SUNY, ಕಾರ್ಟ್‌ಲ್ಯಾಂಡ್‍ ಮತ್ತು ಸ್ಪೇನ್‍ನ ಕ್ಯಾಥೋಲಿಕಾ ವಿಶ್ವವಿದ್ಯಾಲಯಗಳು ಸಹಯೋಗ ನೀಡುತ್ತಿವೆ.


ಸಮ್ಮೇಳನದ ಉದ್ದೇಶವು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಂಕೀರ್ಣತೆಗಳು ಮತ್ತು ನವೀನ ತಂತ್ರಗಳನ್ನು ಹಂಚಿಕೊಳ್ಳಲು ಶೈಕ್ಷಣಿಕ ತಜ್ಞರು, ಸಂಶೋಧಕರು, ಉದ್ಯಮ ತಜ್ಞರು, ಎನ್‌ಜಿಒಗಳು ಮತ್ತು ನ್ಯಾಯಯುತ ಮತ್ತು ಸುಸ್ಥಿರ ಸಮಾಜವನ್ನು ರೂಪಿಸಲು ಕೆಲಸ ಮಾಡುವ ಆಸಕ್ತಿ ಹೊಂದಿರುವವರನ್ನು ಒಂದೇ ವೇದಿಕೆಯಲ್ಲಿ ತರುವುದಾಗಿದೆ.


ಈ ಮೂರು ದಿನಗಳ ಸಮ್ಮೇಳನಕ್ಕೆ ಗೌರವಾನ್ವಿತ ಮುಖ್ಯ ಅತಿಥಿಯಾಗಿ ಥಿಂಕ್‍ ಲೀಪ್ ಟೆಕ್ನಾಲಜಿ ಲ್ಯಾಬ್ಸ್ ಪ್ರೈ.ಲಿ.ನ ಸ್ಥಾಪಕರು ಮತ್ತು ಸಿಇಓ ಆಗಿರುವ ವಿಘ್ನೇಶ್ ಹೆಬ್ಬಾರ್ ಅವರು ಆಗಮಿಸಲಿದ್ದಾರೆ. ಜಪಾನ್‍ನ ಸೀಸೆನ್ ವಿಶ್ವವಿದ್ಯಾಲಯದ ಪ್ರೊ. ಕೇಟೀ ಮಾಟ್ಸುಯಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. 


ತಾಂತ್ರಿಕ ಸೆಷನ್-I ಅನ್ನು ಪರಿಸರ ತಜ್ಞ ಮತ್ತು ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮದ ರಾಜ್ಯ ನಾಯಕಿ, ಡಾ ಶೋಭಾ ರೆಡ್ಡಿಯವರು ನಡೆಸಲಿದ್ದಾರೆ. ತಾಂತ್ರಿಕ ಸೆಷನ್ II ​​ಮತ್ತು III ಅನ್ನು ಸಾಮಾಜಿಕ ಮಾನವಶಾಸ್ತ್ರಜ್ಞ ಪ್ರೊ. ಪ್ರೊ ಎ ಆರ್ ವಾಸವಿ, ಸಾಮಾಜಿಕ ಮಾನವಶಾಸ್ತ್ರಜ್ಞ ಮತ್ತು ಪ್ರೊ ಅಲೆಕ್ಸಾಂಡ್ರು ಬಾಲಾಸ್ ಕ್ಲಾರ್ಕ್, ಸೆಂಟರ್ ಫಾರ್ ಗ್ಲೋಬಲ್ ಎಂಗೇಜ್‌ಮೆಂಟ್ ಸನಿ ಕಾರ್ಟ್‌ಲ್ಯಾಂಡ್, ಯುಎಸ್‌ಎ ಇವರು ನಡೆಸಿಕೊಡಲಿದ್ದಾರೆ.


ಸಮ್ಮೇಳನದಲ್ಲಿ ಗೌರವಾನ್ವಿತ ಪ್ಯಾನೆಲಿಸ್ಟ್‌ಗಳಾದ ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಮಾಜಿ ನಿರ್ದೇಶಕ ಡಾ ಉಪೇಂದ್ರ ಭೋಜಾನಿ,  ಮತ್ತು ಡಾ ಜೆರೆಮಿ ಜಿಮೆನೆಜ್ ಡಿಪಾರ್ಟ್ಮೆಂಟ್ ಆಫ್ ಫೌಂಡೇಶನ್ಸ್ ಮತ್ತು ಸೋಶಿಯಲ್ ಅಡ್ವೊಕಸಿ SUNY, Corltand, USA USA, ಇವರೊಂದಿಗೆ ತಜ್ಞ ಸಂವಾದವನ್ನು ನಡೆಸಿಕೊಡಲಿದ್ದಾರೆ.


ಪೂರ್ವ ಸಮ್ಮೇಳನದ ಭಾಗವಾಗಿ, ಮನೋವಿಜ್ಞಾನ ವಿಭಾಗ, ರಾಜ್ಯಶಾಸ್ತ್ರ ವಿಭಾಗ, ಸಮಾಜ ಕಾರ್ಯ ವಿಭಾಗ, ಮತ್ತು ಪತ್ರಿಕೋದ್ಯಮ ವಿಭಾಗವು ಸೋಮವಾರ, ಜನವರಿ 13, 2025 ರಂದು ಬ್ರೇಕಿಂಗ್ ಪ್ಯಾಟರ್ನ್ಸ್ ಮತ್ತು ಕ್ರಿಯೇಟಿಂಗ್ ಚೇಂಜ್, ಸಂಘರ್ಷ, ಸಮನ್ವಯ ಮತ್ತು ಶಾಂತಿ ನಿರ್ಮಾಣ, ಆತ್ಮಹತ್ಯೆ ತಡೆಗಟ್ಟುವಿಕೆ, ಗೇಟ್‌ಕೀಪರ್ ತರಬೇತಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಸುಸ್ಥಿರವಾಗಿ ಸಂರಕ್ಷಿಸುವಲ್ಲಿ ಮಾಧ್ಯಮದ ಪಾತ್ರ   ಕಾರ್ಯಾಗಾರಗಳನ್ನು ನಡೆಸಲಿದೆ.


ಸುದ್ದಿಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ ಸಾಜಿಮೊನ್, ಸಮ್ಮೇಳನದ ಸಂಚಾಲಕಿಯರಾದ ಡಾ ಲೊವೀನಾ ಲೋಬೊ, ಡಾ ಶಾಲಿನಿ ಅಯ್ಯಪ್ಪ, ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ  ಚಂದ್ರಕಲಾ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top