ಜ.18-19 ನೀನಾಸಂ ತಿರುಗಾಟ: ಎರಡು ನಾಟಕ ಪ್ರದರ್ಶನ

Upayuktha
0


ಸುರತ್ಕಲ್‍: ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್‍ನ ಆಡಳಿತಕ್ಕೊಳಪಟ್ಟ ಗೋವಿಂದದಾಸಕಾಲೇಜು, ಸುರತ್ಕಲ್‍ನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರೊ.ಯಚ್.ಜಿ.ಕೆ. ರಾವ್‍ ದತ್ತಿನಿಧಿ, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ, ಆಂತರಿಕ ಗುಣಮಟ್ಟ ಖಾತರಿ ಕೋಶ, 1982 ರ ವಿಜ್ಞಾನ ತಂಡದ ದತ್ತಿನಿಧಿ, ರಕ್ಷಕ ಶಿಕ್ಷಕ ಸಂಘ ಗೋವಿಂದದಾಸ ಕಾಲೇಜು, ಬಿ.ಎ.ಎಸ್.ಎಫ್, ಬಾಳ, ಸುರತ್ಕಲ್ ಮತ್ತು ಗೋವಿಂದದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್‍ಗಳ ಸಹಭಾಗಿತ್ವದಲ್ಲಿ ನೀನಾಸಂ ತಿರುಗಾಟ 2024ರ ಎರಡು ನಾಟಕಗಳು ಕಾಲೇಜಿನರಂಗ ಮಂದಿರದಲ್ಲಿ ಜನವರಿ 18 ಮತ್ತು 19 ರಂದು ಸಂಜೆ 6.50ಕ್ಕೆ ಪ್ರದರ್ಶನಗೊಳ್ಳಲಿದೆ.


ಜನವರಿ 18, ಶನಿವಾರದಂದು ಭವಭೂತಿಯವರ ರಚನೆಯ ಅಕ್ಷರ ಕೆ.ವಿ. ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ ಮಾಲತಿ ಮಾಧವ ಮತ್ತು ಜನವರಿ 19, ಆದಿತ್ಯವಾರದಂದು ಅಭಿರಾಮ ಭಡ್ಕಮಕರ್ ರಚನೆಯ ಜಯಂತ ಕಾಯ್ಕಿಣಿಯವರು ಕನ್ನಡಕ್ಕೆ ಅನುವಾದಿಸಿದ ವಿದ್ಯಾನಿಧಿ ವನಾರಸೆ (ಪ್ರಸಾದ್) ನಿರ್ದೇಶನದ ಅಂಕದ ಪರದೆ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯು ತಿಳಿಸಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top