ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಲ್ಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಭೋವಿ ವಡ್ಡರ ಸಮಾಜ ಬಾಂಧವರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಯಲ್ಲಪ್ಪ ಬಸರಗಿಡದ ಮಾತನಾಡಿ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ರೀತಿಯಲ್ಲಿ ಸೇರಿ ಸಾಂಸ್ಕೃತಿಕ ಸಾಹಿತ್ಯಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಿದ್ದರಾಮೇಶ್ವರರ ಕೃಪಗೆ ಪಾತ್ರರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ರಹಿಮಾನಸಾಬ ಬಾಗವಾನ, ತಿಮ್ಮಾರೆಡ್ಡಿ ಗೌಂಡಿ ಅಮೀನಪ್ಪ ಬಾರಕೇರ, ಹನಮಂತ ಕಿಳ್ಳಿ, ಮುಖಂಡರಾದ ರಮೇಶ ದಾಸರ, ಆನಂದ ಅಮರಪ್ಪ ಜವಾನರ, ಅಮರಪ್ಪ ಗೆಜ್ಜೆಲಗಟ್ಟಿ, ಆನಂದ ಜವಾನರ, ಬಸವರಾಜ್ ಜಂಗ್ಲಿ, ಬಸವರಾಜ್ ಕರಡಿ, ಯಂಕಪ್ಪ ವಡ್ಡರ, ಹುಲಗಪ್ಪ ವಡ್ಡರ, ದುರಗಪ್ಪ ವಡ್ಡರ, ಹನಮಂತ ಪಾಮಣ್ಣ ವಡ್ಡರ, ಚನ್ನಪ್ಪ ವಡ್ಡರ, ಬಸವರಾಜ್ ಪಾಮಣ್ಣ ವಡ್ಡರ, ರಮೇಶ್ ಬಸರಗಿಡದ ಜುಮ್ಮಣ್ಣ ವಡ್ಡರ, ಶಿವು ಗಣಜಲಿ, ಸೇರಿದಂತೆ ಎಲ್ಲ ಸಮಾಜ ಬಾಂಧವರು ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾಜದ ಯುವ ಮುಖಂಡ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟದ ಬಾಗಲಕೋಟ ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಬಸರಗಿಡದ ಕಾರ್ಯಕ್ರಮ ನೆಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ