ದೇಲಂಪಾಡಿ: ಶಂ.ನಾ. ಅಡಿಗರಿಂದ ಹರಿಕಥೆ - ಸನ್ಮಾನ

Upayuktha
0

 ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಪೂಜಾ ನಿಮಿತ್ತ ಶಂ.ನಾ ಅಡಿಗರ ಹರಿಕಥೆ - ಸನ್ಮಾನ




ಪೆರ್ಲ : ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಪೂಜಾ ಮಹೋತ್ಸವ ಜರಗುತ್ತಿದ್ದು ದಿನಂಪ್ರತಿ ನೂರಾರು ಭಕ್ತರು ಪ್ರಾತಃಕಾಲ ಕ್ಷೇತ್ರಕ್ಕೆ ಭೇಟಿಯಿತ್ತು ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ. 


ಇದರಂಗವಾಗಿ ಬುಧವಾರ ಶಂ.ನಾ.ಅಡಿಗ ಕುಂಬಳೆ  ಅವರಿಂದ ಮನ್ಮಥ ದಹನ ಎಂಬ ಹರಿಕಥಾ ಕಾಲಕ್ಷೇಪ  ಜರಗಿತು. ಬಳಿಕ ನಡೆದ ಧಾರ್ಮಿಕ  ಸಭಾ ಕಾರ್ಯಕ್ರಮದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಚಂದ್ರಶೇಖರ ನಾವಡ ಬಜಕೂಡ್ಲು ಆಶೀರ್ವಚನಗೈದು ಮಾತನಾಡುತ್ತಾ ದೇವರ ದರ್ಶನದಿಂದ ದೇಹದ ಚೈತನ್ಯ ವೃದ್ಧಿಸಬಹುದಾಗಿದ್ದು ಪ್ರಾತಃಕಾಲದ ದೇವನಾಮ ಸ್ಮರಣೆ ಮತ್ತು ಶ್ರವಣ ಜೀವನ ಪಾವನಕ್ಕೆ ಕಾರಣೀಭೂತವಾಗುತ್ತದೆ ಎಂದರು.


ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಹರಿಕಥಾ ಕಾಲಕ್ಷೇಪ ನಡೆಸಿಕೊಟ್ಟ ಶಂ.ನಾ.ಅಡಿಗ ಕುಂಬಳೆ   ಅವರನ್ನು ಸನ್ಮಾನಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್,   ಹರಿಕಥಾ ಸೇವಾಕರ್ತರಾದ ಬಾಲಕೃಷ್ಣ ಭಂಡಾರಿ ಜೆ.ಬಿ. ಪುತ್ತಿಗೆ ಬೈಲು,ಕ್ಷೇತ್ರ ಪದಾಧಿಕಾರಿಗಳಾದ ಕೇಶವ ಮಾಸ್ತರ್, ಆನಂದ ಎಂ.ಕೆ, ಮೊದಲಾದವರು ಉಪಸ್ಥಿತರಿದ್ದರು. 


ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ‌ಡಿ.ರಾಜೇಂದ್ರ ರೈ ಸ್ವಾಗತಿಸಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top