ಸಾಲಿಗ್ರಾಮ: ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ

Upayuktha
0


ಸಾಲಿಗ್ರಾಮ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ಗೆಳೆಯರ ಬಳಗ ಕಾರ್ಕಡ ಹಾಗೂ ಕಸ್ತುರ್ಬಾ ಆಸ್ಪತ್ರೆ, ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ದೇವಸ್ಥಾನದವರ ಸಹಕಾರದವರೊಂದಿಗೆ ಡಾ. ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ಶಿಬಿರ ಜನವರಿ 5 ರ ಆದಿತ್ಯವಾರ ಬೆಳ್ಳಿಗ್ಗೆ ಅತ್ಯಂತ ಯಶಸ್ವಿಯಾಗಿ ಏರ್ಪಡಿಸಲಾಯಿತು.


ತಜ್ಞ ವೈದ್ಯರುಗಳು, ಕಣ್ಣು, ಕಿವಿ, ಮೂಗು, ಮಕ್ಕಳ ಖಾಯಿಲೆ, ಹೃದ್ರೋಗ, ಸ್ರೀ ರೋಗ, ಹಾಗೂ ಸಾಮಾನ್ಯ ರೋಗಗಳ ತಪಾಸಣೆ ನಡೆಸಿದರು. ರಕ್ತ ಪರೀಕ್ಷೆ, ಇಸಿಜಿ, ಮತ್ತು ರಕ್ತದೊತ್ತಡ, ಉಚಿತವಾಗಿ ಮಾಡಲಾಯಿತು. ಶಿಬಿರವನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ ॥ ಕೆ. ಎಸ್ ಕಾರಂತರು ಉದ್ಘಾಟಿಸಿ, 50 ವರ್ಷ ದಾಟಿದವರು ಪ್ರತೀ ವರ್ಷ ರೋಗ ಲಕ್ಷಣ ಇಲ್ಲದೇ ಇದ್ದರೂ ನಿಯಮಿತ ಆರೋಗ್ಯ ತಪಾಸಣೆ ಅತೀ ಅಗತ್ಯ ಎಂದರು. ನೆಮ್ಮದಿಯ, ಉಲ್ಲಾಸಭರಿತ ಜೀವನ ಸಾಗಿಸಬೇಕಾದರೆ ಆರೋಗ್ಯವಂತ ಜೀವನ ಅತ್ಯವಶ್ಯಕ ಎಂದರು. ಕಾರಂತರ ಹೆಸರಿನಲ್ಲಿ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಾ ಬಂದಿರುವ ಬಳಗದವರ ಸಾಮಾಜಿಕ ಕಳಕಳಿ ತುಂಬಾ ಶ್ಲಾಘನೀಯ ಎಂದರು.


ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರು ಪ್ರಾಸ್ಥಾವಿಕ ಮಾತನಾಡಿ ಸ್ವಾಗತಿಸಿದರು. ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರರಾವ್, ಕಸ್ತುರ್ಬಾ ಆಸ್ಪತ್ರೆಯ ವೈದ್ಯರಾದ ಡಾ ತೇಜಸ್, ಡಾ ಸಮ್ಯಕ್, ಡಾ ಶಿವರಾಮ ಕಾರಂತ ಸಂಶೋಧನಾ ಕೇಂದ್ರದ ಅಧ್ಯಕ್ಷ ಗುರುರಾಜ್ ರಾವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಳಗದ  ಕಾರ್ಯದರ್ಶಿ ಕೆ. ಶೀನ ಧನ್ಯವಾದ ಮಾಡಿದರು. ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top