ಸಾಗರ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾ ಭವನದಲ್ಲಿ ಆನಂದ ಸಾಗರ ಟ್ರಸ್ಟ್, ನೆರವಿನ ಕೈಗಳು ಟ್ರಸ್ಟ್ ಹಾಗೂ ಹಿರಿಯ ನಾಗರಿಕರ ಗುಂಪಿನ ಸಂಯುಕ್ತ ಆಶ್ರಯದಲ್ಲಿ ಇಂದು 70 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡನ್ನು ಉಚಿತವಾಗಿ ಒದಗಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
70 ವರ್ಷ ಮೀರಿದ 56 ಹಿರಿಯ ನಾಗರಿಕರ ಹೆಸರನ್ನು ಆನ್‌ಲೈನ್ ಮೂಲಕ ನೋಂದಾಯಿಸಲಾಯಿತು. ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 2.30ರ ತನಕ ನಡೆಯಿತು.
ಮುಂದಿನ ಸಮಾಗಮದ ದಿನ ಅಂದರೆ- ಫೆ.8ರಂದು ಸಂಜೆ 5ರಿಂದ 6 ಗಂಟೆ ಸಮಯದಲ್ಲಿ ಆಯುಷ್ಮಾನ್ ಕಾರ್ಡನ್ನು ವಿತರಿಸಲಾಗುವುದು. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ವ್ಯವಸ್ಥಾಪಕರಾದ ದುರ್ಗೇಶ್.ಎಸ್.ಮಾಣಿಕೆರೆ ಸಹಕರಿಸಿದರು.
ಇಂದಿನ ಕಾರ್ಯಕ್ರಮದಲ್ಲಿ ಉಮೇಶ್ ಹೆಚ್.ಬಿ. ಅವರು ಬಂದವರೆಲ್ಲರಿಗೂ ಸಿಹಿ ಚಿಕ್ಕಿಯನ್ನು ಹಾಗೂ ರಾಘವೇಂದ್ರ ಟಿ.ಎಸ್. ರುಚಿಕರ ಕಷಾಯವನ್ನು ವಿತರಿಸಿದರು.
ಗುಂಪಿನ ಸದಸ್ಯರಾದ ದಮಯಂತಿ ಹಾಗೂ ಅಣ್ಣಪ್ಪ ಎಂ, ಉಮೇಶ್.ಹೆಚ್.ಬಿ, ಆಚ್ಯುತ ಗಾಡ್ಕೊಂಡೆ, ಕಮಲಾಕರ್, ತಿಮ್ಮಪ್ಪ.ಬಿ.ಎಲ್, ಸಂಪತ್ ಕುಮಾರ್, ಜಗದೀಶ್, ಸತ್ಯನಾರಾಯಣ ರಾವ್.ಎಂ.ಆರ್. ಶ್ರೀನಿವಾಸ ರಾವ್, ಪ್ರವೀಣ್ ಅವರು ಕಾರ್ಯಕ್ರಮದ ಆಯೋಜನೆಗೆ ಸಹಕಾರ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ