ಕಣಚೂರು ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯ ಆಚರಣೆ

Upayuktha
0


ಮಂಗಳೂರು: ಗಣರಾಜ್ಯ ದಿನಾಚರಣೆ ನಿಮಿತ್ತ ಕಣಚೂರಿನ ಇಸ್ಲಾಮಿಕ್ ಎಜುಕೇಶನಲ್ ಸೊಸೈಟಿಯ ವತಿಯಿಂದ ಸಂಯುಕ್ತ ವಿದ್ಯಾಸಂಸ್ಥೆಗಳಿಂದ ವಿದ್ಯುಕ್ತವಾಗಿ ಧ್ವಜಾರೋಹಣ ಹಾಗೂ ಧ್ವಜ ವಂದನೆ ಮಾಡಲಾಯಿತು.


ಮೊದಲಿಗೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡ್ ಸಹಿತವಾಗಿ ಸಂಸ್ಥೆಯ ಚೇರ್ಮನ್ ಡಾ|| ಹಾಜಿ ಕಣಚೂರು ಮೋನು ಹಾಗೂ ಇತರ ಸಂಸ್ಥೆಗಳ ಮುಖ್ಯಸ್ಥರನ್ನು ಎದುರು ಗೊಳ್ಳಲಾಯಿತು.


ಶಾಲಾ ವಿದ್ಯಾರ್ಥಿ‌ವಿದ್ಯಾರ್ಥಿನಿಯರಿಂದ ರಾಷ್ಟ್ರ ಗೀತೆ ಗಾಯನದ ಅನಂತರ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ಡಾ|| ಮೋನು ಅವರು ಧ್ವಜಾರೋಹಣಗೈದರು. ನಂತರ ಮೆಡಿಕಲ್ ಕಾಲೇಜ್‌ನ ಡೀನ್ ಡಾ.ಶೆಹೆನ್ ವಾಝ್ ಮಾಣಿಪ್ಪಾಡಿಯವರು ಸರ್ವರನ್ನೂ ಸ್ವಾಗತಿಸಿದರು.


ಡಾ|| ಮೋನು ಅವರು ಮಾತನಾಡುತ್ತಾ ಗಣರಾಜ್ಯ ದಿನದ ಮಹತ್ವ ಹಾಗೂ ಇಂದಿನ ಯುವ‌ಜನಾಂಗವು ಹಕ್ಕು ಬಾಧ್ಯತೆಗಳನ್ನು ಸಕಾರಾತ್ಮಕವಾಗಿ ಬಳಸುವ ಅಗತ್ಯವನ್ನು ಒತ್ತಿ ಹೇಳಿದರು. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾ ತತ್ವದಲ್ಲಿ ಹೋರಾಡಿ ಕೊಟ್ಡ ಸ್ವಾತಂತ್ರ್ಯದ ಹಾಗೂ ಸರಿಯಾದ ಜೀವನ‌ ಕ್ರಮಕ್ಕೆ ಮಾದರಿಯಾಗುವ ಸಂವಿಧಾನವನ್ನು ಅನುಸರಿಸಿ ಬದುಕಬೇಕು. ಸಾಮರಸ್ಯದ ಕಡೆಗೆ ಒತ್ತು ಕೊಡಬೇಕು ಎಂದರು.


ಕಣಚೂರು ವಿದ್ಯಾ ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ಸಕುಟುಂಬಿಕರಾಗಿ ಭಾಗವಹಿಸಿದ್ದರು. ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿ ಹಾಗೂ ನಿರ್ದೇಶಕ ಡಾ ಹರೀಶ ಶೆಟ್ಟಿ, ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿ, ಪಿಸಿಯೋಥೆರಪಿ, ನರ್ಸಿಂಗ್, ಪದವಿ ಪೂರ್ವ ಕಾಲೇಜು, ಪ್ರೌಢ ಶಾಲೆಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅನಂತರ ರಾಷ್ಟ್ರಗೀತೆ ಹಾಗೂ ಸಿಹಿ ಹಂಚುವುದರ ಮುಖಾಂತರ ಕಾರ್ಯಕ್ರಮ ಸಂಪನ್ನವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top