ಅದೆಷ್ಟೋ ಮಂದಿ ತಮ್ಮ ಕೈ, ಕಾಲುಗಳಲ್ಲಿ ಕಪ್ಪು ನೂಲೊಂದನ್ನು ಮೆರೆಸುತ್ತಿರುವುದನ್ನು ಕಾಣಬಹುದು. ಇದೊಂದು ಸಾಮಾನ್ಯ ವಿಷಯವಾಗಿದೆ, ಹಾಗೆಯೇ ದಿನ ನಿತ್ಯ ಒಬ್ಬರಲ್ಲ ಒಬ್ಬರಲ್ಲಿ ನೋಡುತ್ತಿರುತ್ತೇವೆ. ಇದೊಂದು ಫ್ಯಾಷನ್ಎಂದರು ತಪ್ಪಾಗಲಾರದು. ಯುವ ಜನಾಂಗವು ಬಳೆ, ಗೆಜ್ಜೆಗಳನ್ನು ಹಾಕುವುದನ್ನು ತಪ್ಪಿಸಲು, ಕೈ-ಕಾಲು ಖಾಲಿಯಾಗದಿರಲಿ ಎಂಬ ಯೋಚನೆಯಿಂದ ಕಟ್ಟಿಕೊಳ್ಳುವುದು ಇದೆ. ಇನ್ನೂ ಕೆಲವರು ಕೆಟ್ಟ ದೃಷ್ಟಿಯಿಂದ ರಕ್ಷಣೆ ಪಡೆಯುವ ಉದ್ದೇಶವನ್ನು ಹೊಂದಿದ್ದಾರೆ ಮತ್ತೂ ಹಲವರು ಜ್ಯೋತಿಷ್ಯ, ಜಾತಕ, ಮಂತ್ರ ದೇವರು ಎಂದೂ ಹೇಳಿಕೊಳ್ಳುತ್ತಾರೆ.
ಇದೇನೂ ಎಐ ಯಂತೆ ನಿನ್ನೆ -ಮೊನ್ನೆ ಬಂದು ವಿಶ್ವವಿಖ್ಯಾತವಾದ ವಸ್ತುವಲ್ಲ ಎಂಬುವುದು ಸತ್ಯವೇ ಆಗಿದೆ. ಒಂದಲ್ಲ ಒಂದು ರೀತಿಯಲ್ಲಿ ಪುರಾಣ ಕಾಲದಿಂದಲೇ ಬಂದಿದೆ. ಸಾಮಾನ್ಯವಾಗಿ ಕೆಲ ವಿಚಾರಗಳು, ವಸ್ತುಗಳು ಕಾಲ ಕಳೆದಂತೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ ಅಥವಾ ಕಳೆದುಕೊಳ್ಳುತ್ತವೆ. ಆದರೆ ಇದು ಮಾತ್ರ ತನ್ನ ಅಗತ್ಯವನ್ನು ಏಕರೂಪವಾಗಿ ಕಾಪಾಡಿಕೊಂಡು ಬಂದಿದೆ. ಮನೆ ಹಿರಿಯರು ಕೂಡ ಆಗಾಗ ಹೇಳುವುದುಂಟು 'ದೇಹದಲ್ಲಿ ಒಂದು ನೂಲಾದರೂ ಇರಬೇಕು!' ಈ ಮಾತನ್ನು ಎಲ್ಲರೂ ಸರ್ವೇ ಸಾಮಾನ್ಯ ಕೇಳಿರುತ್ತಾರೆ. ಒಂದು ಮಗು ಹುಟ್ಟಿದಾಗಲೂ ಅದರ ಶರೀರಕ್ಕೆ ಕಪ್ಪು ನೂಲು ಕಟ್ಟುವ ವಾಡಿಕೆ ಇದೆ. ಇದರಿಂದಾಗಿ ಕೂಸು ಆರಾಮವಾಗಿರುತ್ತದೆ, ಕೆಡುಕು ಕಣ್ಣು ಬೀಳುವುದಿಲ್ಲ ಎಂಬ ನಂಬಿಕೆ.
ಈ ಪ್ರಕಾರವಾಗಿ ದಾರ ಕಟ್ಟುವುದರಲ್ಲಿ ವೈಜ್ಞಾನಿಕ ಕಾರಣವೂ ಇದೆ. ರಕ್ತ ಸಂಚಾರ ಸುಗಮಗೊಳ್ಳುವುದರ ಜೊತೆಗೆ ಕೊಬ್ಬು ಕರಗಿಸುವಲ್ಲಿ, ಜೀರ್ಣ ಕ್ರಿಯೆಗೆ ಸಹಕರಿಸುವುವಲ್ಲಿ, ಬೆನ್ನುಮೂಲೆಗೆ ಬೆಂಬಲ ನೀಡುತ್ತಾ, ಸಂತಾನೋತ್ಪತ್ತಿ ಅಂಗಗಳಿಗೂ ತುಂಬಾನೇ ಸಹಾಯ ನೀಡುತ್ತದೆ. ಇಷ್ಟೇ ಅಲ್ಲದೆ ರಕ್ತದೊತ್ತಡ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 'ಬ್ಲಾಕ್ ಥ್ರೆಡ್' ಕೇವಲ ಸೌಂದರ್ಯ, ನಂಬಿಕೆಗೆ ಸೀಮಿತವಾಗಿರದೆ ಆರೋಗ್ಯ ಸ್ನೇಹಿಯೂ ಹೌದು.
- ಪ್ರಿಯಾ ಶ್ರೀವಿಧಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ