ಬೆಂಗಳೂರು: ವಿದುಷಿ ಶ್ರೀಮತಿ ರೂಪಶ್ರೀ ಕೆ ಎಸ್ ಅವರ ಮಾರ್ಗದರ್ಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ) ವಿದ್ಯಾರ್ಥಿನಿಯರು 2025 ರ ಜನವರಿ 24 ಮತ್ತು 25 ರಂದು ಗೋಪಾಲನ್ ಎಂಟರ್‌ಪ್ರೈಸಸ್ ಹಾಗೂ ಸಂಧ್ಯಾ ಜಯರಾಂ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶೇಷ ಗಣರಾಜ್ಯೋತ್ಸವದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದಿರುತ್ತಾರೆ.
ತಂಡವು ಜನವರಿ 24 ರಂದು ದೇಶಭಕ್ತಿ ಸಮೂಹ ನೃತ್ಯ ಪ್ರಥಮ ಬಹುಮಾನ (ಅವನಿ, ಧನ್ಯ, ತನ್ವಿಕ), ಜಾನಪದ ಏಕವ್ಯಕ್ತಿ- ಹೃದ್ಯಾ ಭಟ್ ದ್ವಿತೀಯ (5 ರಿಂದ 10 ವರ್ಷಗಳು), ಹಾಗೂ ಜಾನಪದ ದ್ವಿತೀಯ ಅನನ್ಯ (11 ರಿಂದ 15 ವರ್ಷಗಳು), ಜಾನಪದ ಸಮೂಹ ನೃತ್ಯ (ಹೃದ್ಯಾ, ಆರೋಹಿ, ಸಾನ್ವಿ ಜಿ, ವಿಸೃತಿ, ಆಯುಷಿ, ಅಸ್ವತಿ) 3ನೇ ಬಹುಮಾನವನ್ನು ಪಡೆದರು.
25ನೇ ಜನವರಿ 2025 ರಂದು ಜಾನಪದ ಸಮೂಹ ನೃತ್ಯದಲ್ಲಿ (ಹೃದ್ಯಾ, ಆರೋಹಿ, ಸಾನ್ವಿ ಜಿ, ವಿಸೃತಿ, ಆಯುಷಿ, ಅಸ್ವತಿ, ತಾನ್ಯ) ಪ್ರಥಮ ಬಹುಮಾನವನ್ನು ಗೆದ್ದಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ