ಖ್ಯಾತ ಲೇಖಕಿ ಆಲಿಸ್ ಫೆರ್ನಾಂಡಿಸ್ ಇವರಿಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ

Upayuktha
0

ಕೊಂಕಣಿ ಲೇಖಕ್ ಸಂಘ್, ಕರ್ನಾಟಕ ನೀಡುವ ಪ್ರಶಸ್ತಿ




ಮಂಗಳೂರು: 2025ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕಿ ಶ್ರೀಮತಿ ಆಲಿಸ್ ಫೆರ್ನಾಂಡಿಸ್ (ಶಾಲಿನಿ ವಲೆನ್ಸಿಯಾ) ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.


ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 15ರಂದು ಶನಿವಾರ ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು, ಇಲ್ಲಿ ಜರಗಲಿರುವುದು. 


ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರು ಈ ಮಾಹಿತಿ ನೀಡಿದರು.


ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಕೊಂಕಣಿ ಲೇಖಕ್ ಸಂಘ್ ಕರ್ನಾಟಕ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು.

 

ಪ್ರಶಸ್ತಿಗೆ ಆಯ್ಕೆಯಾಗಿರುವ ಲೇಖಕಿ ಆಲಿಸ್ ಫೆರ್ನಾಂಡಿಸ್ ಅವರು 1965ರಲ್ಲಿ ತನ್ನ 16ನೇ ವಯಸ್ಸಿನಲ್ಲೇ ಬರವಣಿಗೆ ಆರಂಭಿಸಿದರು. 1965 ರಿಂದ 1971 ರವರೆಗೆ ಮಿತ್ರ್, ಝೆಲೊ, ರಾಕ್ಣೊ, ಕಾಣಿಕ್, ವಾವ್ರಾಡ್ಯಾಂಚೊ ತಾಳೊ ಮುಂತಾದ ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ನಿರಂತರ ಬರೆದರು. ಸಾಹಿತ್ಯ ಸೇವೆಗೆ 30 ವರ್ಷದ ವಿರಾಮ ನೀಡಿ 2002ರ ನಂತರ ಪುನಃ ಲೇಖನಿಯನ್ನು ಕೈಗೆತ್ತಿಕೊಂಡ ಇವರು ಸತತ 22 ವರ್ಷಗಳಿಂದ ಝೆಲೊ, ದಿವೊ, ಕುಟ್ಮಾಚೊ ಸೆವಕ್, ರಾಕ್ಣೊ, ದರ‍್ವೆಂ, ನಮಾನ್ ಬಾಳಕ್ ಜೆಜು, ಮಿಲರ‍್ಚೆಂ ಮಿಲನ್ ಈ ಕೊಂಕಣಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ.


ಇವರ ಸರಿಸುಮಾರು 28 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 34 ಕವಿತೆಗಳು, 30 ಕಿರು ಕಥೆಗಳು, 200 ರಷ್ಟು ಲೇಖನಗಳು ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ಪ್ರಟವಾಗಿವೆ. “ಕೊಂಕ್ಣಿ ಲೇಖಕಾಂಚೊ ಎಕ್ವಟ್” ಎಂಬ ಕೊಂಕಣಿ ಲೇಖಕರ ಸಂಘಟನೆಯಲ್ಲಿ ಮೂರು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. 


“ಕೊಂಕ್ಣಿ ಲೇಖಕಾಂಚೊ ಎಕ್ವಟ್”, ರಾಕ್ಣೊ ಮತ್ತು ದರ‍್ವೆಂ ಪತ್ರಿಕೆಗಳಿಂದ ಸನ್ಮಾನ ಹಾಗೂ ರಾಕ್ಣೊ ಸಾಹಿತ್ಯ ಸ್ಪರ್ಧೆಯಲ್ಲಿ ಕಿರುಕಥೆಗೆ ಪ್ರೋತ್ಸಾಹಕ ಬಹುಮಾನವನ್ನು ಪಡೆದಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಕೊಂಕಣಿ ಲೇಖಕ್ ಸಂಘದ ಸಂಚಾಲಕರಾದ ರಿಚರ್ಡ್ ಮೊರಾಸ್, ಸಮಿತಿ ಸದಸ್ಯ ಡೊಲ್ಫಿ ಎಫ್. ಲೋಬೊ, ಸಲಹಾ ಸಮಿತಿ ಸದಸ್ಯರಾದ ಡಾ| ಜೆರಿ ನಿಡ್ಡೋಡಿ ಮತ್ತು ಜೆ. ಎಫ್. ಡಿಸೋಜಾ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top