ದೇಸಿ ಚಿಂತನೆ ಪ್ರಸಾರಕ್ಕೆ "ರಾಜೀವ ಲೋಕ" ಅನಾವರಣ

Upayuktha
0

ಭಾರತೀಯ ಸಂಸ್ಕೃತಿ ಉತ್ಸವದಲ್ಲಿ 300 ಮಾರಾಟ ಪ್ರದರ್ಶನ ಮಳಿಗೆ




ಕಲಬುರಗಿ: ರಾಜೀವ್ ದೀಕ್ಷಿತ್ ವಿಚಾರಗಳನ್ನು ಜನಮಾನಸಕ್ಕೆ ಮುಟ್ಟಿಸಲು ಮತ್ತು ದೇಸಿ ಚಿಂತನೆಯಲ್ಲಿ ಜೀವನ ನಡೆಸಲು ಪ್ರೇರಣೆ ನೀಡುವಂತೆ ಜನವರಿ 30 ರಿಂದ ಫೆಬ್ರವರಿ 5 ರವರೆಗೆ ಸೇಡಂನ ಬೀರನಹಳ್ಳಿ ಕ್ರಾಸ್‌ನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ರಾಜೀವ ಲೋಕ ಅನಾವರಣಗೊಳ್ಳಲಿದೆ ಎಂದು ಶಿವಾನಂದ ಬಿ ಕುಂಬಾರ್ ತಿಳಿಸಿದರು. 


ಕಲ್ಬುರ್ಗಿಯಲ್ಲಿ ಜನವರಿ 14ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ರಾಜೀವ್ ದೀಕ್ಷಿತ್ ಅವರ ವಿಚಾರಧಾರೆಗಳನ್ನು ಹೆಸರಿಸಲು ಮತ್ತು ಭಾರತೀಯ ಜ್ಞಾನಪೀಡಿಯಲ್ಲಿ ಸಾಮಾಜಿಕ ವೈಜ್ಞಾನಿಕ ಮತ್ತು ತಾಂತ್ರಿಕ ಕೊಡುಗೆಗಳನ್ನು ಸುಸ್ಥಿರ ಶಾಂತಿ ಪ್ರಗತಿ ಮತ್ತು ಸಮೃದ್ಧಿಗಾಗಿ ಬಳಸುವ ಕುರಿತಾಗಿ ಪ್ರಧಾನ ವೇದಿಕೆಯಲ್ಲಿ ಪಾಲ್ಗೊಳ್ಳುವ ದೇಸಿ ಚಿಂತಕರನ್ನು ಸಮಾನಾಂತರ ವೇದಿಕೆಗೆ ಆಹ್ವಾನಿಸಿ ಸಾರ್ವಜನಿಕರಿಗೆ ಮುಕ್ತ ಸಂವಾದ ಮತ್ತು ಕಿರು ಭಾಷಣಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು. 


ಉತ್ಸವದ ಸಂದರ್ಭದಲ್ಲಿ "ಭಾರತೀಯ ಜ್ಞಾನ ಸೌರಭ" ಎಂಬ ವಿಷಯದಲ್ಲಿ ನೋಂದಾವಣೆ ಮಾಡಿಕೊಂಡ  ಅಧ್ಯಾಪಕರಿಗಾಗಿ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ನಡೆಯಲಿದೆ ಎಂದು ಬೆಂಗಳೂರಿನ ಎಂ ಎಸ್ ಆರ್ ಐ ಟಿಯ ಡಾ. ಬಿ.ಪಿ ಹರಿಶ್ಚಂದ್ರ ಹೇಳಿದರು.

 

ಭಾರತೀಯ ಜ್ಞಾನ ಸೌರಭ ಸಮ್ಮೇಳನಕ್ಕೆ ಈಗಾಗಲೇ ದೇಶದ ಬೇರೆ ಬೇರೆ ಕಡೆಗಳಿಂದ 300 ರಷ್ಟು ಆಸಕ್ತರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಸಾಮಾಜಕ್ಕೆ ಭಾರತೀಯತೆ ಕೊಡುಗೆಯನ್ನು ಅರ್ಥ ಮಾಡಿಕೊಳ್ಳುವುದು ಪ್ರಸ್ತುತ ಪ್ರವೃತ್ತಿಗಳನ್ನು ಅರ್ಥ ಮಾಡಿಕೊಳ್ಳಲು ಭಾರತೀಯತಾ ಕ್ಷೇತ್ರದಲ್ಲಿ ಸಂಶೋಧನೆಗೆ ಭವಿಷ್ಯದ ಸಾಮರ್ಥ್ಯಗಳು, ಸಂಶೋಧನೆ ಧ್ಯಾನ ಮತ್ತು ಅನನ್ಯ ಅನುಭವಗಳನ್ನು ಒದಗಿಸುವ ಹಾಗೂ ಆರ್ಥಿಕತೆಗಾಗಿ ಭಾರತೀಯ ಸುಸ್ಥಿರ ವಾಣಿಜ್ಯ ಮತ್ತು ವಾಣಿಜ್ಯದ ಚಟುವಟಿಕೆಗಳ ಪ್ರಪಂಚದ ನೇರ ಪರಿಚಯವನ್ನು ಮಾಡಿಕೊಳ್ಳಲು ರಾಷ್ಟ್ರೀಯ ಸಮ್ಮೇಳನದಲ್ಲಿ ಶಿಕ್ಷಣ ಸಂಸ್ಥೆಗಳು ತರಬೇತಿ ಕೇಂದ್ರಗಳ ಅಧ್ಯಾಪಕರು ಸಂಶೋಧನಾ ಸಂಸ್ಥೆಗಳು ಸಂಶೋಧನಾ ವಿದ್ವಾಂಸರು ಕೈಗಾರಿಕೆದಾರರು ಎಲ್ಲ ಕ್ಷೇತ್ರಗಳ ವೃತ್ತಿಪರರು ವಿಜ್ಞಾನಿಗಳು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ ಎಂದರು. 


ದೇಶದ ಪ್ರಮುಖ ವಿಜ್ಞಾನಿಗಳ ಉಪನ್ಯಾಸ

ಭಾರತೀಯ ಪಾರಂಪರಿಕ ಜ್ಞಾನ ವಿಜ್ಞಾನ ಸಮಾಜ ಪ್ರಸ್ತುತಪಡಿಸುವ ಅಧ್ಯಾಪಕರ ತರಬೇತಿ ರಾಷ್ಟ್ರೀಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ವಿಜ್ಞಾನಿಗಳಾದ ಅಮೆರಿಕಾದ ಇನ್ಫಿನಿಟಿ ಫೌಂಡೇಶನ್ ರಾಜೀವ್ ಮಲ್ಹೋತ್ರ, ಎಂ ಎಸ್ ಆರ್ ಐ ಟಿಯ ಡಾ. ಬಿ ಬಿ ಝಾ, ಭಾರತ್ ಜ್ಞಾನ್ ಸಂಸ್ಥೆಯ ಡಿಕೆ ಹರಿ ಮತ್ತು ಡಾ. ಡಿಕೆ ಹೇಮಾ ಹರಿ, ಕೊಲ್ಕತ್ತಾದ ಎನ್‌ಐಟಿಟಿಆರ್ ನಿರ್ದೇಶಕ ಡಾ. ದೇಬಿ ಪ್ರಸಾದ್ ಮಿಶ್ರಾ, ಗುವಹಾಟಿ ಐಐಟಿಯ ಪ್ರೊಫೆಸರ್ ಡಾ. ಉದಯ್ ಎಸ್ ದೀಕ್ಷಿತ್, ಪದ್ಮಶ್ರೀ ಪುರಸ್ಕೃತ ಆಹಾರ ವಿಜ್ಞಾನಿ ಡಾ. ಖಾದರ್ ವಲಿ, ವಾರಂಗಲ್ ಎನ್ಐಟಿಯ ಡಾ. ಹರಿಕೃಷ್ಣ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಶ್ರೀ ನಿರ್ಭಯಾನಂದ ಸ್ವಾಮೀಜಿ, ಬಾಬಾ ರಾಮದೇವ್ ಮುಂತಾದವರು ಸಮಯದಲ್ಲಿ ಭಾಗವಹಿಸಲಿದ್ದಾರೆ ಎಂದರು.


ಭಾರತೀಯ ಜ್ಞಾನ ಸೌರಭ ಆನ್ಲೈನ್ ನೋಂದಣಿ

ಭಾರತೀಯ ಜ್ಞಾನ ಸೌರಭ ತರಬೇತಿ ಶಿಬಿರದಲ್ಲಿ ಭಾಗವಹಿಸುವವರಿಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ರೂ.1001 ಶುಲ್ಕ ನಿಗದಿಪಡಿಸಲಾಗಿದ್ದು ಊಟ ವಸತಿ ವ್ಯವಸ್ಥೆಯನ್ನು ಕಲ್ಪಿಸಲಿಸಲಾಗುತ್ತದೆ. ಪ್ರದರ್ಶನ ಮಳಿಗೆ ಮತ್ತು ಮಾರಾಟ ಮಳಿಗೆಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ, "ರಾಜೀವ್ ಲೋಕ"ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಸಂಘಟನಾ ಸದಸ್ಯರಾದ ಎಂ.ಡಿ ಪಾಟೀಲ್, ಕೃಷ್ಣ ಕೆಂಭಾವಿ ಡಾ. ರಾಜಶೇಖರ ಬಸನಾಯಕ್, ಪ್ರಭು ಪಾಟೀಲ್ ಅಶೋಕ್ ಗುರೂಜಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top