ವಿವೇಕಾನಂದ ಕಾಲೇಜಿನಲ್ಲಿ ಶ್ರೀರಾಮೋತ್ಸವ

Upayuktha
0



ಪುತ್ತೂರು: ರಾಮಾಯಣದಲ್ಲಿರುವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಭುದ್ಧರಾಗಬೇಕು ಹಾಗೆಯೇ ಸಂವಿಧಾನವನ್ನು ಹೇಗೆ ಪಾಲಿಸಬೇಕೆಂದು ರಾಮನ ಆಡಳಿತದಲ್ಲಿ ಕಾಣಬಹುದು. ರಾಮನ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದುಕನ್ನು ನಡೆಸಬಹುದು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ  ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ), ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ, ವಿದ್ಯಾರ್ಥಿ ಸಂಘ,ಲಲಿತಕಲಾ ಸಂಘ ಹಾಗೂ ಐಕ್ಯೂಎಸಿ ಜಂಟಿಯಾಗಿ ಆಯೋಜಿಸಿದ ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸವಿನೆನಪಿನ  ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ, ಸೀತಾರಾಮಾಂಜನೇಯ ಸೇವಾ ಪ್ರತಿಷ್ಠಾನ ಎಣ್ಮೂರು ಇಲ್ಲಿಯ ಅಧ್ಯಕ್ಷ , ಸುಳ್ಯ ರಾಮ ಜನ್ಮಭೂಮಿ ಹೋರಾಟದ ಕರಸೇವಕ ರಘುನಾಥ ರೈ, ಕಟ್ಟಬೀಡು  ಮಾತನಾಡಿ, ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಾ  ಕರಸೇವೆಯ ಸಂದರ್ಭದಲ್ಲಿ  ತಮ್ಮ ಊರಿನವರನ್ನೆಲ್ಲ ಸೇರಿಸಿಕೊಂಡು ಭಜನೆಯನ್ನು ಹಮ್ಮಿಕೊಂಡು ಜನರ ಮನಸ್ಸಿನಲ್ಲಿ ಅಯೋಧ್ಯೆ ನಿರ್ಮಾಣದ ಬಗ್ಗೆ ಆಸಕ್ತಿಯನ್ನು ಮೂಡಿಸಿ, ನಂತರ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ  ಪಾಲ್ಗೊಂಡ ಬಗೆಗೆ ಅನುಭವವನ್ನು ಹಂಚಿಕೊಂಡರು. 


ಕಾರ್ಯಕ್ರಮದಲ್ಲಿ ರಾಮ ಜನ್ಮ ಭೂಮಿ ಹೋರಾಟದ ಕರಸೇವೆಯಲ್ಲಿ ಭಾಗವಹಿಸಿದ ರಘುನಾಥ ರೈ ಕಟ್ಟಬೀಡು ದಂಪತಿಗಳನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ. ಎಂ. ಕೆ  ರಾಮನಾಮಾಮೃತ  ವಿಷಯದ ಕುರಿತು ಉಪನ್ಯಾಸ ಕಾರ್ಯಗಾರವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ  ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ  ಕೆ. ಎನ್, ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್, ವಿದ್ಯಾರ್ಥಿ ಸಂಘದ ನಾಯಕ ಆಶಿಶ್ ಆಳ್ವ ಉಪಸ್ಥಿತರಿದ್ದರು. 


ಕಾರ್ಯಕ್ರಮವನ್ನು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ. ಎಸ್ ಸ್ವಾಗತಿಸಿ,   ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ. ಎಂ ವಂದಿಸಿ, ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ರಾಮತಾರಕ ಮಂತ್ರ ಜಪ, ಭಜನೆ ಹಾಗೂ ರಾಮನ  ಕುರಿತಾದ ಭಕ್ತಿ ಗೀತೆಯನ್ನು ಹಾಡಲಾಯಿತು. 




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top