ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ

Upayuktha
0

ಸನಾತನ ಸಂಸ್ಕೃತಿಯ ಎಲ್ಲಾ ಆಚರಣೆ ಹಬ್ಬಗಳಲ್ಲೂ ವಿಜ್ಞಾನ ಅಡಗಿದೆ : ಸುಬ್ರಮಣ್ಯ ನಟ್ಟೋಜ


ಪುತ್ತೂರು: ಸಂಕ್ರಾಂತಿ ದಿನದಿಂದ ಸೂರ್ಯನು  ದಕ್ಷಿಣಾಯನದಿಂದ ಉತ್ತರಾಯನಕ್ಕೆ ತೊಡಗುತ್ತಾನೆ. ಮಕರ ಸಂಕ್ರಾಂತಿ ಕೃಷಿ ಚಟುವಟಿಕೆಗಳು ಮತ್ತು ಹೊಸ ಬೆಳೆಗಳ ಆಗಮನದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ದಿನವನ್ನು ಪ್ರಕೃತಿ ಮಾತೆಗೆ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೆಂದು ಪರಿಗಣಿಸಲಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ ಮಕರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಕ್ರಾಂತಿ ಹಬ್ಬದ ಮಹತ್ವ ಹಾಗೂ ಸಂದೇಶ ತಿಳಿಸಿದರು.


ಸಂಕ್ರಾಂತಿಯು ಸ್ನೇಹ, ಸೌಹಾರ್ದತೆ ಮತ್ತು ಸಾಮಾಜಿಕ ಐಕ್ಯತೆಯನ್ನು ಹುಟ್ಟಿಸುವ ಹಬ್ಬ. ನಿಸರ್ಗದ ಸಹಜ ಚಕ್ರಕ್ಕೆ ಕೃತಜ್ಞತೆಯನ್ನು ತೋರುವ ಹಬ್ಬ. ಉತ್ತಮ ಪಥದೆಡೆಗೆ ನಮ್ಮನ್ನು ಕೊಂಡೊಯ್ಯುವ ಹಬ್ಬ. ನಮ್ಮ ಸನಾತನ ಸಂಸ್ಕೃತಿಯ ಎಲ್ಲಾ ಆಚರಣೆ ಹಬ್ಬಗಳಲ್ಲೂ ವಿಜ್ಞಾನ ಅಡಗಿದೆ. ಅದರದ್ದೇ ಆದ ಮಹತ್ವ ಹುದುಗಿದೆ. ಅವುಗಳನ್ನೆಲ್ಲ ಅರಿತು ಆಚರಿಸಿದಾಗ ನಮ್ಮ ಭವ್ಯ ಭಾರತದ ಸಂಸ್ಕೃತಿಯನ್ನು ಉಳಿಸಬಹುದು. ವಿದೇಶಿ ಚಿಂತನೆ ಮತ್ತು ಭಾರತೀಯ ಚಿಂತನೆಗಳಲ್ಲಿ ಭಿನ್ನತೆ ಇದೆ. ಭಾರತದ ಚಿಂತನೆ ಶ್ರೇಷ್ಠವಾದದ್ದು. ಇದನ್ನು ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು ಎಂದರು. 


ನಾವು ಇದರಂತೆ ಮುನ್ನಡೆಯೋಣ ಎಂದು ನಟ್ಟೋಜಾ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಸುಬ್ರಹ್ಮಣ್ಯ ನಟ್ಟೋಜರು ಹೇಳಿದರು. ಅವರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿದ ಮಕರ ಸಂಕ್ರಾಂತಿ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಕ್ರಾಂತಿ ಹಬ್ಬದ ಮಹತ್ವ ಹಾಗೂ ಸಂದೇಶ ತಿಳಿಸಿ ಶುಭ ಹಾರೈಸಿದರು. 


ವಿದ್ಯಾರ್ಥಿನಿಯರಾದ ಆತ್ಮಶ್ರೀ, ಮಹತಿ, ಧನ್ಯಶ್ರೀ, ಶ್ರೀಮ ಪ್ರಾರ್ಥಿಸಿದರು. ಜೀವಶಾಸ್ತ್ರ ಉಪನ್ಯಾಸಕ ವಿಷ್ಣುಪ್ರದೀಪ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಎಲ್ಲರೂ ಎಳ್ಳು ಬೆಲ್ಲವನ್ನು ಸವಿದು ಸಂಭ್ರಮಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top