ಹಿಂದೂ ಧರ್ಮ ಶಿಕ್ಷಣ ಆರಂಭಕ್ಕೆ ಜಾತಿ, ಪಕ್ಷಾತೀತ ಬೆಂಬಲ

Upayuktha
0

ಪುತ್ತೂರು, ಕಡಬಗಳಲ್ಲಿ ಗ್ರಾಮಸಮಿತಿಯ ರಚನೆಗಾಗಿ ಜವಾಬ್ದಾರಿ ಹಂಚಿಕೆ.



ಪುತ್ತೂರು: ಧರ್ಮ ಶಿಕ್ಷಣದ ಜಾರಿಗಾಗಿ ಎಲ್ಲರೂ ಏಕಮನಸ್ಸಿನಿಂದ ಕಾರ್ಯನಿರ್ವಹಿಸಬೇಕು. ನಮ್ಮ ನಮ್ಮ ರಾಜಕೀಯ ಆಲೋಚನೆಗಳನ್ನು, ಪಕ್ಷಗಳನ್ನು ಬದಿಗಿರಿಸಿ ಕೇವಲ ಹಿಂದೂ ಎಂಬ ಆದರ್ಶದಡಿ ಎಲ್ಲರೂ ಒಂದಾಗಬೇಕು. ರಾಜಕೀಯದ ಅಲ್ಪ ಅಡ್ಡ ವಾಸನೆ ಬಂದರೂ ನಮ್ಮ ಉದ್ದೇಶಿತ ಕಾರ್ಯ ವಿಫಲವಾಗುತ್ತದೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆಗೆ ಧರ್ಮಜ್ಞಾನ ನೀಡುವ ಮಹದುದ್ದೇಶದೊಂದಿಗೆ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ರಾಮಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.


ಅವರು ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನಿರ್ದೇಶನದ ಮೇರೆಗೆ ಪುತ್ತೂರು, ಕಡಬ ಹಾಗೂ ಸನಿಹದ ತಾಲೂಕುಗಳಾದ್ಯಂತ ಆರಂಭಿಸಲು ಉದ್ದೇಶಿಸಿರುವ ಹಿಂದೂ ಧರ್ಮ ಶಿಕ್ಷಣದ ಕುರಿತಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ನಟರಾಜ ವೇದಿಕೆಯ ಮುಂಭಾಗದಲ್ಲಿ ನಡೆದ ಮೂರನೇ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದರು.


ಸಾಮಾಜಿಕ ನೇತಾರ ಬಾಲಕೃಷ್ಣ ಬೋರ್ಕರ್ ಮಾತನಾಡಿ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲೂ ಧರ್ಮಶಿಕ್ಷಣ ಜಾರಿಯಾಗಬೇಕು. ಅದಕ್ಕಾಗಿ ಎಲ್ಲಾ ಗ್ರಾಮಗಳಲ್ಲೂ ಗ್ರಾಮ ಸಮಿತಿಗಳನ್ನು ರಚಿಸುವ ಕಾರ್ಯ ನಡೆಯುತ್ತಿದೆ. ಇನ್ನೂ ಹಲವು ಗ್ರಾಮಗಳಲ್ಲಿ ಈ ಪ್ರಕ್ರಿಯೆ ನಡೆಯಬೇಕಿದೆ. ಅದಕ್ಕಾಗಿ ಎಲ್ಲರೂ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಗ್ರಾಮಸಮಿತಿ ರಚನೆಯ ಜವಾಬ್ದಾರಿ ಹೊರಬೇಕಾಗಿದೆ ಎಂದು ನುಡಿದರು.


ಧರ್ಮಶಿಕ್ಷಣ ಜಾರಿಯಾಗಿ ನಿರಂತರ ಶ್ರಮಿಸುತ್ತಿರುವ ಸುಬ್ರಹ್ಮಣ್ಯ ನಟ್ಟೋಜ ಅವರು, ಶೃಂಗೇರಿ ಕಿರಿಯ ಜಗದ್ಗುರುಗಳು ಈ ಹಿಂದೆ ಎರಡು ಬಾರಿ ಪುತ್ತೂರಿಗೆ ಆಗಮಿಸಿ ಇಲ್ಲಿನ ಜನರನ್ನು ಆಶೀರ್ವದಿಸಿದ್ದಾರೆ. ಇದೀಗ ಪುತ್ತೂರಿಗರ ಮೇಲೆ ಅಪಾರ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ನೆರವೇರಿಸಬೇಕಾದದ್ದು ಎಲ್ಲರ ಕರ್ತವ್ಯ. ಗುರುಗಳೇ ಮುಂದೆ ಬಂದಿರುವಾಗ ನಾವು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಕ್ರಿಯಾಶೀಲರಾಗಿ ಧರ್ಮಶಿಕ್ಷಣದ ಜಾರಿಗೆ ಶ್ರಮವಹಿಸಬೇಕು. ದಿನದಲ್ಲಿ ಕನಿಷ್ಟ ಎರಡು ಗಂಟೆಗಳಷ್ಟು ಕಾಲ ಧರ್ಮಶಿಕ್ಷಣದ ಕಾರ್ಯಕ್ಕೆ ಮೀಸಲಿಡಬೇಕು ಎಂದು ನುಡಿದರು.


ಈ ಸಂದರ್ಭದಲ್ಲಿ ಉದ್ಯಮಿಗಳಾದ ಮುಳಿಯ ಕೇಶವಪ್ರಸಾದ್, ಸೀತಾರಾಮ ರೈ ಕೆದಂಬಾಡಿಗುತ್ತು, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಉದಯ ಮಾದೋಡಿ, ಹಿರಿಯ ಸಾಮಾಜಿಕ ನೇತಾರರಾದ ಮೊಗೆರೋಡಿ ಬಾಲಕೃಷ್ಣ ರೈ, ದಂಬೆಕಾನ ಸದಾಶಿವ ರೈ, ವಾಸುದೇವ ಇಡ್ಯಾಡಿ, ಹಿರಿಯ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್, ಸುರೇಶ್ ಕೆಮ್ಮಿಂಜೆ, ಹೆಗ್ಗಡೆ ಸಮಾಜದ ಅಧ್ಯಕ್ಷ ಗಣೇಶ್ ಹೆಗ್ಡೆ ಮೊದಲಾದವರು ಗ್ರಾಮಸಮಿತಿಯ ರಚನೆಗೆ ತಮ್ಮ ಸಲಹೆ ಸೂಚನೆಗಳನ್ನಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top