ವೇದಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯ: ಪುತ್ತಿಗೆ ಶ್ರೀ

Upayuktha
0


ಉಡುಪಿ: ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಮೂರು ದಿನಗಳ ಕಾಲ ಕರ್ನಾಟಕದಾದ್ಯಂತದಿಂದ ಆಗಮಿಸಿದ 30ಕ್ಕೂ ಹೆಚ್ಚು ವೇದವಿದ್ವಾಂಸರು ಪಾಲ್ಗೊಂಡು ಶುಕ್ಲಯಜುರ್ವೇದ ಕಾಣ್ವ ಶಾಖೆಯ ಜಟಾಪಾರಾಯಣವನ್ನು ನಡೆಸಿದ ಸಮರ್ಪಣಾ ಸಮಾರಂಭದಲ್ಲಿ ಸಂದೇಶ ನೀಡಿದ ಪರ್ಯಾಯ ಪುತ್ತಿಗೆ ಶ್ರೀಪಾದರು ಸನಾತನ ಧರ್ಮ ಮೂಲಪಂಚಾಂಗವೆನಿಸಿದ ವೇದ ಸಂರಕ್ಷಣೆ ಇಂದಿನ ತುರ್ತು ಎನಿಸಿದೆ ಎಂದರು.


ವೇದ ಸಂರಕ್ಷಣೆ ಎರಡು ಬಗೆ. ವೇದಾಧ್ಯಯನದ ವೇದ ಮಂತ್ರಗಳನ್ನು ಆಯಾಕ್ರಮದಲ್ಲಿ ಸುಸ್ವರವಾಗಿ ಕಂಠಸ್ಥವಾಗಿ ಉಳಿಸಿಕೊಳ್ಳುವುದು, ಅಲ್ಲದೆ ಅದರ  ಅರ್ಥಾನುಸಂಧಾನದ ಮೂಲಕ ಆರ್ಥಿಕ ರಕ್ಷಣೆಯೊಂದಿಗೆ ವೇದ ರಕ್ಷಣೆ. ಅದಕ್ಕಾಗಿ ಶ್ರೀಮಠದಿಂದ ಪುತ್ತಿಗೆ, ಪಾಡಿಗಾರು, ಚೆನ್ನೈ, ಬೆಂಗಳೂರು, ಕೋಲ್ಕತ್ತಾ ಮೊದಲಾದೆಡೆ ವಿದ್ಯಾಪೀಠವನ್ನು ಸ್ಥಾಪಿಸಿರುವದಾಗಿ ತಿಳಿಸಿದರು.


ಅರ್ಥರಕ್ಷಣೆಗೆ ಪಂಚಮವೇದವೆನಿಸಿದ ಮಹಾಭಾರತಾಂತರ್ಗತ ಭಗವದ್ಗೀತೆಯ ಪ್ರಸರಣಕ್ಕೆ ತೊಡಗಿರುವುದಾಗಿ ತಿಳಿಸಿ ಆದಷ್ಟು ಯುವಕರು ಬಾಲಕರು ಇದರಲ್ಲೂ ಪಾಲ್ಗೊಳ್ಳುವಂತಾಗಲೆಂದು ಆಶಿಸಿ ವೇದ ವಿದ್ವಾಂಸರನ್ನು ಹರಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top