ದ.ಕ‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವ ತಯಾರಿ: ಕಸಾಪ ಮಂಗಳೂರು ಹೋಬಳಿ ಸಭೆ

Chandrashekhara Kulamarva
0

 



ಮಂಗಳೂರು: ದಕ‌ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಫೆ. 21, 22ರಂದು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ‌ನಡೆಯಲಿದ್ದು, ಅದಕ್ಕೆ ಪೂರಕವಾಗಿ ಸಾಹಿತಿ, ಸಾಹಿತ್ಯಾಸ್ತರು ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮಂಗಳೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ನಿರ್ಣಯಿಸಲಾಯಿತು.


ಬಿಷಪ್ ಹಾವ್ಜ್ ಚರ್ಚ್ ಬಿಲ್ಡಿಂಗ್ ಕೊಡಿಯಾಲ್‌ಬೈಲ್ ಇಲ್ಲಿ ಹೋಬಳಿ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಕ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಡಾ‌ ಪುಷ್ಪರಾಜ್ ಮಾರ್ಗದರ್ಶನ ನೀಡಿ ಮಾತನಾಡಿದರು.


ವಾಮಂಜೂರ್ ವಿದ್ಯಾಜ್ಯೊತಿ ಶಾಲೆಯಲ್ಲಿ ವಿಧ್ಯಾರ್ಥಿ ಕನ್ನಡ ಸಂಘ ಆರಂಭಿಸಿ ಸಮ್ಮೇಳನಕ್ಕೆ ಆಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ಬಂದು ಗೋಷ್ಟಿಗಳಿಗೆ ಕಿವಿಯಾಗಲು ಶ್ರಮಿಸುವದಾಗಿ ಹೋಬಳಿ ಕಾರ್ಯಕಾರಿ ‌ಸದಸ್ಯರಾದ ಸಿಸ್ಟರ್ ವೆರೊನಿಕಾ ಎಸ‌್ಆರ್‌ಎ ಹೇಳಿದರು.


ಡಾ ಗಿರಿಯಪ್ಪಅವರು ಸಲಹೆ ನೀಡಿ;ದಕ ಜಿಲ್ಲಾ ಸಮ್ಮೇಳನದ ಆಮಂತ್ರಣ ಬಂದಮೇಲೆ ಇನ್ನೊಂದು ಹೋಬಳಿ ಸಭೆ ಮಾಡಿ ಮಂಗಳೂರು ಪರಿಸರದಲ್ಲಿ ನೆಲೆಸಿರುವ ಹಿರಿಯ, ಕಿರಿಯ ಸಾಹಿತಿಗಳು, ಮತ್ತು ಸಂಸ್ಥೆಗಳು ಹುಡುಕಿ ಮುಖತ ಆಹ್ವಾನ ನೀಡಲು ಹೋಗುವ ಬಗ್ಗೆ ಹೇಳಿದರು.


ವಿಶೇಷ ಅಹ್ವಾನಿತರಾಗಿ ಅಲೋಶಿಯಸ್ ಕಾಲೇಜು ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾದ ಶಾಂತಿ ವೆರೊನಿಕಾ ಮೋಹನ್ ಹಾಗೂ ರಿಯಾನಾ ಡಿಕೂನಾ ಇದ್ದರು.


ಕಸಾಪ ದಕ ಜಿಲ್ಲಾ ಅಧ್ಯಕ್ಷ ಎಂಪಿ  ಶ್ರೀನಾಥ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಗೆ ಹೋಬಳಿ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top