ನೋವೆಂಬ ಕಗ್ಗತ್ತಲ ಕಿಂಡಿಯಲಿ ಮೂಡಿದ ರವಿಕಿರಣ
ಶುಭೋದಯವ ತರಲಿ
ಮುಂಜಾವಿನ ಮಂಜು ಹನಿ
ಇಬ್ಬನಿಯಾಗಿ ಲತೆಗಳಿಗೆ ನವ ಚೇತನ ತರಲಿ.....
ಕಂಬನಿ ಕೊನೆಯಾಗಲಿ....
ಪ್ರೇಮಸುಧೆಯೊಂದೇ ಹರಿಯಲಿ
ತೊರೆಯುಕ್ಕಿ ಹರಿದು ಝರಿಯಾಗಿ,
ಜಲಪಾತವ ದಾಟಿ ಹರಿದು, ನದಿಯಾಗಿ ಭೋರ್ಗರೆದು,
ಸಾಗರದೀ ಶಾಂತವಾಗಲಿ ಕೆಂಪನೆಯ ರವಿ ಮೊಗವ ಕಂಡು
ನಿಮ್ಮೊಗವ ಕಂಡು ಪಡುವಣ ರಂಗೇರಲು
ನೀರ (..ವಿ)ಯ ಕಂಡು ಮನುಜ ಕುಲದ ಮನಮುದಗೊಳ್ಳಲು
ಚಣಕಾಲ ಇರುಳು ಆವರಿಸಿತು
ಇರುಳಕಿಂಡಿಯ ಸೀಳಿ ರವಿ ಮತ್ತುದಯಿಸಿದ ಸಾಗರದಿ ಹೊಂಬೆಳಕ ಪಸರಿಸಿ,
ನಾನಿರುವೇ ಉಸಿರಾಗಿ...ಹಸಿರಾಗಿ...ನುಡಿದ
ಪಿಸುಮಾತಿನಲ್ಲೇ...ಘಂಟಾಘೋಷವಾಗೀ....
-ನಾಗರಾಜ್ ಕೆ ಸಾಲ್ಯಾನ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ